ಖಾನಾಪುರ: ಅಪರೂಪದ ಚಿಪ್ಪು ಹಂದಿ ಕಳ್ಳಸಾಗಣೆ ಮಾಡಲು ಯತ್ನಿಸುತ್ತಿದ್ದ ಇಬ್ಬರನ್ನು ತಾಲ್ಲೂಕಿನ ಲೋಂಡಾ ವಲಯದ ಅರಣ್ಯ ಇಲಾಖೆಯ ಅಧಿಕಾರಿಗಳು ಬಂಧಿಸಿ, ಚಿಪ್ಪು ಹಂದಿ ವಶಕ್ಕೆ ಪಡೆದಿದ್ದಾರೆ. ಸಹಚರರು ಸೇರಿ ನಾಲ್ವರ ವಿರುದ್ಧ ಪ್ರಕರಣ ದಾಖಲಾಗಿದೆ.
ಖಾನಾಪುರ- ಲೋಂಡಾ ರಾಷ್ಟ್ರೀಯ ಹೆದ್ದಾರಿಯ ವಾಟರೆ ರೈಲ್ವೆ ಗೇಟ್ ಬಳಿ ಬೈಕ್ ಸವಾರನನ್ನು ತಡೆದು ತಪಾಸಣೆ ನಡೆಸಿದ ಅಧಿಕಾರಿಗಳು, ಆತನ ಬಳಿಯಿದ್ದ ಚೀಲವೊಂದರಲ್ಲಿದ್ದ ನಾಲ್ಕು ಕಿಲೋ ತೂಕದ ಚಿಪ್ಪು ಹಂದಿ ಪತ್ತೆ ಹಚ್ಚಿದರು.
ಬೈಕ್ ಸವಾರ ಜೊಯಿಡಾದ ನಾಗೇಶ ಸುತಾರ ಮತ್ತು ಹಿಂಬದಿ ಸವಾರನನ್ನು ಬಂಧಿಸಲಾಗಿದೆ. ಉಳಿದ ಇಬ್ಬರಿಗಾಗಿ ಶೋಧ ನಡೆಯುತ್ತಿದೆ. ಖಾನಾಪುರ ಉಪ ಅರಣ್ಯ ಸಂರಕ್ಷಣಾಧಿಕಾರಿ ಸುನೀತಾ ನಿಂಬರಗಿ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಯಿತು. ಆರ್.ಎಫ್.ಒಗಳಾದ ತೇಜ ವೈ.ಪಿ, ಶ್ರೀಕಾಂತ ಪಾಟೀಲ, ಡಿಆರ್.ಎಫ್.ಒ ಎಂ.ಜಿ ನಂದೆಪ್ಪಗೋಳ ಹಾಗೂ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಇದ್ದರು.
Laxmi News 24×7