ನೈಟ್ ರೋಡ್’ ಎಂಬ ಚಿತ್ರ ಇಂದು ತೆರೆಕಾಣುತ್ತಿದೆ. ಅಪಘಾತದಿಂದ ಮೃತಪಟ್ಟ ಯುವಕನ ಅಸಹಜ ಸಾವಿನ ತನಿಖೆಗೆ ಮುಂದಾಗುವ ನಾಯಕ ಆಧ್ಯಾತ್ಮದತ್ತ ವಾಲುತ್ತಾನೆ. ಹೀಗೆ ತಿರುವು ಪಡೆಯುವ ಚಿತ್ರದ ಪ್ರತಿ ದೃಶ್ಯದಲ್ಲೂ ಪ್ರೇಕ್ಷಕರ ಹೃದಯ ಬಡಿತವನ್ನು ಹೆಚ್ಚಿಸುವ ಜೊತೆಗೆ ಯೋಚನೆಗೆ ಹಚ್ಚುತ್ತದೆ.
ಕ್ಲೈಮ್ಯಾಕ್ಸ್ ವೇಳೆಗಂತೂ ನೋಡುಗರನ್ನು ತನ್ನಲ್ಲಿ ಆವಾಹನೆ ಮಾಡಿಕೊಂಡಿರುತ್ತದೆ ಎನ್ನುತ್ತದೆ ಚಿತ್ರತಂಡ.
ಗೋಪಾಲ್ ಹಳೇಪಾಳ್ಯ ಈ ಚಿತ್ರದ ನಿರ್ದೇಶಕರು. ಈ ಹಿಂದೆ ಗೋಪಾಲ್ ಹಳೇಪಾಳ್ಯ “ತಾಂಡವ’ ಚಿತ್ರವನ್ನು ನಿರ್ದೇಶಿಸಿದ್ದರು. ಚಿತ್ರವನ್ನು ಪುನರ್ ಗೀತಾ ಸಿನಿಮಾಸ್ ಬ್ಯಾನರ್ ಅಡಿಯಲ್ಲಿ ಗೋಪಾಲ್ ಹಳೇಪಾಳ್ಯ ಅವರೇ ನಿರ್ಮಾಣ ಮಾಡುವ ಜೊತೆಗೆ ನಿರ್ದೇಶನ ಮಾಡಿದ್ದಾರೆ.
ತಾರಾಗಣದಲ್ಲಿ ಧರ್ಮ, ಜ್ಯೋತಿ ರೈ, ಗಿರಿಜಾ ಲೋಕೇಶ್, ಗೋವಿಂದೇಗೌಡ, ರವಿಕಿಶೋರ್, ಪ್ರಭು, ರೇಣು ಶಿಕಾರಿ, ಸುರೇಖಾ ಇದ್ದಾರೆ. ಸತೀಶ್ ಆರ್ಯನ್ ಸಂಗೀತ, ಪ್ರವೀಣ್ ಶೆಟ್ಟಿ ಛಾಯಾಗ್ರಹಣ, ಜೀವನ್ ಪ್ರಕಾಶ್ ಸಂಕಲನ ಚಿತ್ರಕ್ಕಿದೆ
Laxmi News 24×7