Breaking News

ಮಹಿಷ ದಸರಾಕ್ಕೆ ಮುಂದಾದರೆ ಚಾಮುಂಡಿ ಚಲೋ: ಪ್ರತಾಪ್‌ ಸಿಂಹ

Spread the love

ಮೈಸೂರು: ಚಾಮುಂಡಿ ಬೆಟ್ಟದಲ್ಲಿ ಮಹಿಷ ದಸರಾ ಆಚರಣೆಗೆ ಮುಂದಾದರೆ ನಾವು ಚಾಮುಂಡಿ ಚಲೋ ಮಾಡುತ್ತೇವೆ. ಮಹಿಷನ ಭಕ್ತರ ಕೈ ಮೇಲಾಗುತ್ತದೋ ಚಾಮುಂಡಿಯ ಭಕ್ತರ ಕೈ ಮೇಲಾಗುತ್ತದೋ ನೋಡಿಯೇ ಬಿಡುವ ಎಂದು ಮಹಿಷ ದಸರಾ ಆಚರಣೆ ಸಮಿತಿಗೆ ಮಾಜಿ ಸಂಸದ ಪ್ರತಾಪ್‌ ಸಿಂಹ ಸವಾಲು ಹಾಕಿದರು.

 

ಗಣೇಶೋತ್ಸವ ಸಮಯದಲ್ಲಿ ಹಿಂದೂ ಕಾರ್ಯಕರ್ತರ ಮೇಲೆ ಕಲ್ಲು ಎಸೆತ ಖಂಡಿಸಿ ನಡೆದ ಪ್ರತಿಭಟನೆಯಲ್ಲಿ ಮಾತನಾಡಿ, ಮುಸ್ಲಿಮರು ಮಹಿಷನನ್ನು ನಂಬುವುದಿಲ್ಲ, ಮುಂದೊಂದು ದಿನ ಮಹಿಷನ ಮೆರವಣಿಗೆ ಮೇಲೂ ಮುಸ್ಲಿಮರು ಕಲ್ಲು ಎಸೆಯುತ್ತಾರೆ ಎಂದರು. ಮಹಿಷನ ಮೇಲೆ ನಂಬಿಕೆ ಇದ್ದರೆ ಮನೆಯಲ್ಲಿ ಪೂಜೆ ಮಾಡಿಕೊಳ್ಳಲಿ. ಅವನ ಥರದ ಮಗುವೇ ಹುಟ್ಟಲಿ ಎಂದು ಪೂಜೆ ಮಾಡಿ. ಆದರೆ ದಸರಾ ಬಂದಾಗ ಅಪಸ್ವರ ಬೇಡ. ಮಹಿಷಾಸುರ, ಕಂಸ, ರಾವಣ ಯಾರನ್ನಾದರೂ ಮನೆಯಲ್ಲಿ ಆರಾಧನೆ ಮಾಡಿಕೊಳ್ಳಲಿ. ಆದರೆ ಚಾಮುಂಡಿ ಬೆಟ್ಟದಲ್ಲಿ ಅಲ್ಲ. ಇದಕ್ಕೆ ಚಾಮುಂಡಿ ಭಕ್ತರು ಅವಕಾಶ ಮಾಡಿಕೊಡುವುದಿಲ್ಲ ಎಂದು ಎಚ್ಚರಿಸಿದರು.


Spread the love

About Laxminews 24x7

Check Also

ಸವದಿ ಬಿಜೆಪಿಯಲ್ಲಿದ್ದರೆ ದೊಡ್ಡ ಲೀಡರ್ ಆಗುತ್ತಿದ್ದ, ಆದರೀಗ ನಮ್ಮ ಪೀಡಾ ಹೋಗಿದೆ: ರಮೇಶ್ ಜಾರಕಿಹೊಳಿ

Spread the loveಸವದಿ ಬಿಜೆಪಿಯಲ್ಲಿದ್ದರೆ ದೊಡ್ಡ ಲೀಡರ್ ಆಗುತ್ತಿದ್ದ, ಆದರೀಗ ನಮ್ಮ ಪೀಡಾ ಹೋಗಿದೆ: ರಮೇಶ್ ಜಾರಕಿಹೊಳಿ ಚಿಕ್ಕೋಡಿ, ಬೆಳಗಾವಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ