Breaking News

ಲಕ್ಷ್ಮೀ ಹೆಬ್ಬಾಳ್ಕರ್ ಸವಾಲು ಹಾಕಿದ್ದಾರೆ ಎನ್ನುವುದು ಮೀಡಿಯಾಗಳ ಸೃಷ್ಟಿ: ರಮೇಶ ಜಾರಕಿಹೊಳಿ

Spread the love

ಗೋಕಾಕ : ಬೆಳಗಾವಿ ತಾಲೂಕಾ ಪ್ರಗತಿ ಪರಿಶೀಲನಾ ಸಭೆಯಲ್ಲಿ  ಬಿಜೆಪಿ ನಾಯಕರು ಮತ್ತು ಕಾಂಗ್ರೆಸ್ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ನಡುವೆ   ನಡೆದ ಮಾತಿನ ಚಕಮಕಿ ಕುರಿತು ಇಂದು ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಗೋಕಾಕದಲ್ಲಿ ಪ್ರತಿಕ್ರಿಯೆ ನೀಡಿ  ಲಕ್ಷ್ಮೀ ಹೆಬ್ಬಾಳ್ಕರ್ ಸವಾಲು ಹಾಕಿದ್ದಾರೆ ಎನ್ನುವುದು ಮೀಡಿಯಾಗಳ ಸೃಷ್ಟಿ, ಲಕ್ಷ್ಮಿ ಹೆಬ್ಬಾಳ್ಕರ್ ನನಗೆ ಸವಾಲು ಹಾಕಿಲ್ಲ. ಅವರ ಪಕ್ಷದ ಪರವಾಗಿ ಅವರು ಮಾತನಾಡಿದ್ದಾರೆ ಎಂದು ಹೇಳಿದ್ದಾರೆ. 
ನಗರದ ತಾ. ಪಂ. ಕಚೇರಿಯಲ್ಲಿ ಮಾಧ್ಯಮದವರಿಗೆ ಮಾತನಾಡಿ ಬೆಳಗಾವಿ ಗ್ರಾಮೀಣ ಮತಕ್ಷೇತ್ರದಲ್ಲಿ ಮುಂದಿನ ದಿನಗಳಲ್ಲಿ  ನಾನು ಸಕ್ರಿಯವಾಗುವುದು ಅಷ್ಟೇ ಅಲ್ಲದೆ, ಆ ಕ್ಷೇತ್ರವನ್ನ ಬಿಡೋದಿಲ್ಲ ನೋಡ್ತಾ ಇರಿ ಎಂದು ಮತ್ತೊಂದು ಸುತ್ತಿನ ಕದನಕ್ಕೆ ನಡೆಯುವುದು ನಿಶ್ಚಿತ ಪಡೆಸಿದ್ದಾರೆ. 
ಅವ್ರು ತಮ್ಮ ಪಕ್ಷದ ಪರವಾಗಿ ಮಾತನಾಡಿದ್ದಾರೆ. ಆ ಸನ್ನಿವೇಶ ತಕ್ಕಂತೆ ಅದು ಕರೆಕ್ಟ್ ಆಗಿದೆ.  ನಾವು  ನಮ್ಮ ಪಕ್ಷದ ಪರ ನಾವು ಮಾತನಾಡಿದ್ದೇವೆ. ಆದ್ರೂ  ಒಬ್ಬ ಶಾಸಕರೆಂದರೆ ಅವರು ಇತಿ ಮೀತಿಯಲ್ಲಿರಬೇಕು. ಶಾಸಕರೆಂದರೆ ನಾವೇನು ಆಕಾಶದಿಂದ ಉದುರಿ ಬಿದ್ದಿಲ್ಲ. ಜನರಿಗೆ ಮುಜುಗರವಾಗುವ ರೀತಿ ನಡೆದುಕೊಳ್ಳಬಾರದು ಅದನ್ನು ಲಕ್ಷ್ಮಿ ಹೆಬ್ಬಾಳ್ಕರ್ ಅರಿತುಕೊಳ್ಳಬೇಕು. ಪಕ್ಷ ಯಾವುದೇ ಇರಲಿ ನಾವು ಇಲ್ಲಿ ಜನರ ಪ್ರತಿನಿಧಿಗಳಾಗಿ ಕುಳಿತಿದ್ದೇವೆ ಎಂದರು.
ಬಿಜೆಪಿಯಲ್ಲಿ ನನನ್ನು ನಡೆಸಿಕೊಳ್ಳುತ್ತಿರುವ ರೀತಿಯಿಂದ ತುಂಬಾ ಸಂತಸವಾಗಿದೆ. ಪ್ರಭಾಕರ ಕೋರೆ ಅವರ ಜೊತೆ ಈ ಮೊದಲೇ ಕಾಂಗ್ರೆಸ್ ಬಿಟ್ಟು ಹೋಗಿದ್ದರೆ ಇನ್ನೂ ಒಳ್ಳೆಯದಾಗುತ್ತಿತ್ತು  ಎಂದು ಅವರು ಇದೇ ಸಮಯದಲ್ಲಿ ಹೇಳಿದರು.

Spread the love

About Laxminews 24x7

Check Also

ಅಥಣಿ ನಗರದ ಪ್ರವಾಸಿ ಮಂದಿರದಲ್ಲಿ ಇಂದು ಸಾರ್ವಜನಿಕರ ಅಹವಾಲು ಆಲಿಸಿ, ಅವರ ಸಮಸ್ಯೆಗಳಿಗೆ ಸೂಕ್ತ ಪರಿಹಾರ

Spread the love ಅಥಣಿ ನಗರದ ಪ್ರವಾಸಿ ಮಂದಿರದಲ್ಲಿ ಇಂದು ಸಾರ್ವಜನಿಕರ ಅಹವಾಲು ಆಲಿಸಿ, ಅವರ ಸಮಸ್ಯೆಗಳಿಗೆ ಸೂಕ್ತ ಪರಿಹಾರ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ