Breaking News
rain close up in detail

ಕಲ್ಯಾಣ ಕರ್ನಾಟಕದ ಭಾಗದ ವಿವಿಧೆಡೆ ಮಳೆ

Spread the love

ಲಬುರಗಿ: ಹಲವು ದಿನಗಳ ಬಿಡುವಿನ ಬಳಿಕ ಕಲ್ಯಾಣ ಕರ್ನಾಟಕದ ಹಲವೆಡೆ ಶನಿವಾರ ಮಳೆಯಾಗಿದೆ.

ಕಲಬುರಗಿ, ಬೀದರ್ ನಗರ ಹಾಗೂ ಸುತ್ತಮುತ್ತಲಿನ ಭಾಗಗಳಲ್ಲಿ ಶನಿವಾರ ಬೆಳಿಗ್ಗೆ ಹಾಗೂ ಸಂಜೆ ಉತ್ತಮ ಮಳೆಯಾಗಿದೆ. ಗುಡುಗು ಸಹಿತ ಜೋರು ಮಳೆಗೆ ವಾತಾವರಣ ಸಂಪೂರ್ಣ ತಂಪಾಗಿದೆ.

ಬೀದರ್‌ ಜಿಲ್ಲೆಯ ಭಾಲ್ಕಿಯಲ್ಲೂ ಜೋರು ಮಳೆ ಸುರಿದಿದೆ.

ಕಲಬುರಗಿ ಜಿಲ್ಲೆಯ ಶಹಾಬಾದ್‌ನಲ್ಲಿ ಬೆಳಿಗ್ಗೆ ವರುಣ ಅಬ್ಬರಿಸಿದ್ದಾನೆ. ಕಲಬುರಗಿ ನಗರದಲ್ಲಿ ಮಧ್ಯಾಹ್ನದ ವೇಳೆಗೆ ಧಾರಾಕಾರ ಮಳೆ ಸುರಿಯಿತು.

ಕಲಬುರಗಿಯಲ್ಲಿ ಬೆಳಿಗ್ಗೆ ತೀಕ್ಷ್ಣ ಬಿಸಿಲು ಹಾಗೂ ಸೆಕೆಯ ವಾತಾವರಣವಿತ್ತು. ಮಧಾಹ್ನದ ವೇಳೆ ಆಗಸದಲ್ಲಿ ಮೋಡಗಳು ದಟ್ಟೈಸಿದವು. ಮೊದಲು ಕೆಲ ನಿಮಿಷ ತುಂತುರು ಸುರಿದ ಮಳೆ ಒಂದು ಗಂಟೆಯ ಬಿಡುವಿನ ಬಳಿಕ ಧಾರಕಾರವಾಗಿ ಅಬ್ಬರಿಸಿತು. 45 ನಿಮಿಷಗಳ ಕಾಲ ಸುರಿದ ಮಳೆಗೆ ಇಳೆ ತಂಪಾಗಿ, ತಂಪಿನ ಕಂಪು ನೀಡಿತು.

ಕೊಪ್ಪಳ, ಯಾದಗಿರಿ, ರಾಯಚೂರು ಜಿಲ್ಲೆಯ ಲಿಂಗಸುಗೂರು, ಹಟ್ಟಿ ಚಿನ್ನದಗಣಿ ಭಾಗದಲ್ಲಿ ತುಂತುರು ಮಳೆ ಸುರಿದಿದೆ.


Spread the love

About Laxminews 24x7

Check Also

ಫಿನಾಯಿಲ್ ಮಾರಾಟ ಮಾಡುತ್ತ ಚಿನ್ನದಂಗಡಿ ದೋಚಿದ್ದ ರಾಜಸ್ಥಾನಿ ಗ್ಯಾಂಗ್

Spread the loveಬೆಂಗಳೂರು : ಫಿನಾಯಿಲ್ ಸರಬರಾಜು ಮಾಡುತ್ತ ಚಿನ್ನದಂಗಡಿ ದೋಚಿದ್ದ ಐವರು ಆರೋಪಿಗಳನ್ನ ಕೆ. ಆರ್. ಪುರಂ ಠಾಣೆ ಪೊಲೀಸರು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ