Breaking News

ಜೋಕುಮಾರನ ಹಬ್ಬ: ಸಾಂಪ್ರದಾಯಿಕ ಆಚರಣೆ

Spread the love

ಪ್ಪಿನಬೆಟಗೇರಿ: ಗಣೇಶ ವಿಸರ್ಜನೆಯ ಮರುದಿನ ಜೋಕುಮಾರಸ್ವಾಮಿ ಅಷ್ಟಮಿಯ ಗಡಗಿಯೊಳಗೆ ಹುಟ್ಟುತ್ತಾನೆ. ಆತನ ಆಯುಷ್ಯ ಏಳು ದಿನ. ಆ ಏಳು ದಿನಗಳಲ್ಲಿ ಬಾಲ್ಯ, ಯೌವ್ವನ, ಸಾವು ಎಲ್ಲವೂ ಸಂಭವಿಸುತ್ತದೆ. ಉತ್ತರ ಕರ್ನಾಟಕ ಸೇರಿ ನಾಡಿನ ಹಲವು ಹಳ್ಳಿಗಳಲ್ಲಿ ಈ ಹಬ್ಬವನ್ನು ಸಾಂಪ್ರದಾಯಿಕವಾಗಿ ಇಂದಿಗೂ ಆಚರಿಸಲಾಗುತ್ತದೆ.

 

ಬಡಿಗೇರ ಮನೆಯವರು ತಯಾರಿಸುವ ಜೋಕುಮಾರನ ಮಣ್ಣಿನ ಮೂರ್ತಿಯನ್ನು ಅಂಬಿಗೇರ ಮನೆತನದ ಮಹಿಳೆಯರು ಬಿದಿರಿನ ಬುಟ್ಟಿಯಲ್ಲಿ ಇಟ್ಟು ಬೇವಿನ ತಪ್ಪಲಿನಿಂದ ಸಿಂಗರಿಸುತ್ತಾರೆ. ಸುಣಗಾರ ಮನೆ ಮಹಿಳೆಯರು ಜೋಕುಮಾರನನ್ನು ಗ್ರಾಮದ ಗೌಡರ ಮನೆ, ಸ್ವಾಮಿಗಳ ಮನೆ, ಕಟ್ಟಿಮನಿಯವರ ಮನೆಗಳು ಹಾಗೂ ಗ್ರಾಮಸ್ಥರ ಮನೆಗಳಿಗೆ ಒಯ್ದು ‘ಜೋಕುಮಾರ ಬಂದಾನ ಬರ್ರೆ‍ವ್ವ ಬಾಗಿನ ತಂದು ಅರ್ಪಿಸಿ’ ಎಂದು ಜಾನಪದ ಪದ ಹಾಡುತ್ತಾರೆ.

ಮನೆಯ ಹೆಂಗಳೆಯರು ಜೋಕುಮಾರನ ಬಾಯಿಗೆ ಬೆಣ್ಣೆ ಒರೆಸಿ, ಕುಂಕುಮ, ಹೂವು, ಪತ್ರಿ ಮುಡಿಸಿ ಆರತಿ ಬೆಳಗಿ ಪೂಜಿಸಿ ನಂತರ ಮರದಲ್ಲಿ ಉಲುಪಿ (ಎಣ್ಣೆ ಬತ್ತಿ, ರೊಟ್ಟಿ, ಪಲ್ಲೆ, ಕಾಳುಕಡಿ, ಉಪ್ಪು, ಒಣಮೆಣಸಿನಕಾಯಿ, ಊದಿನಕಡ್ಡಿ) ಸಲ್ಲಿಸುತ್ತಾರೆ.

ಭಾದ್ರಪದ ಚೌತಿಯ ನಂತರ ಹುಟ್ಟಿ ಬರುವ ಜೋಕುಮಾರನ ಮೂರ್ತಿ ಇರುವ ಬಿದಿರಿನ ಬುಟ್ಟಿಯನ್ನು ಹೊತ್ತು ಮಹಿಳೆಯರು ಏಳು ದಿನ ಏಳು ಗ್ರಾಮಗಳಿಗೆ ತೆರಳಿ ಪೂಜೆ ಸಲ್ಲಿಸಿ, ಏಳನೇ ದಿನ ಮನೆಗೆ ತೆರಳಿ ರಾತ್ರಿಯ ವೇಳೆ ಹರಿಜನ ಓಣಿಯಲ್ಲಿ ಮರಣ ಹೊಂದುತ್ತಾನೆ.

ನಂತರ ಹಳ್ಳಕ್ಕೆ ತೆರಳಿದಾಗ ಅಗಸರು ಕಲ್ಲಿನ ಕೆಳಗೆ ಮುಚ್ಚಿ ಪೂಜೆ ಮಾಡಿ ತಿರುಗಿ ನೋಡದ ಹಾಗೆ ಮನೆಗೆ ಬರುತ್ತಾರೆ. ಮೂರು ದಿನದ ನಂತರ (ಅಳ್ಯಾಮ್ಲಿ) ಕಿಚಡಿ ಮಾಡಿ ಮನೆಗಳಿಗೆ ಹಂಚುತ್ತಾರೆ. ಅದನ್ನು ಮನೆಯವರು ಹೊಲಗಳಿಗೆ ಹೋಗಿ ಚರಗದ ರೂಪದಲ್ಲಿ ಚೆಲ್ಲಿ ಬರುವ ಪದ್ದತ್ತಿ ಇಂದಿಗೂ ಚಾಲ್ತಿಯಲ್ಲಿದೆ.


Spread the love

About Laxminews 24x7

Check Also

ಕುಕ್ಕೆ ಸುಬ್ರಹ್ಮಣ್ಯದಲ್ಲಿ ಕುಮಾರಧಾರ ನದಿಗೆ ತ್ಯಾಜ್ಯ ಬಿಸಾಡಿದರೆ ಬೀಳುತ್ತೆ ದಂಡ

Spread the loveಸುಬ್ರಹ್ಮಣ್ಯ (ದಕ್ಷಿಣ ಕನ್ನಡ): ಕುಕ್ಕೆಯ ಕುಮಾರಧಾರ ನದಿಯ ಪಾವಿತ್ರ್ಯತೆಯನ್ನು ಕಾಪಾಡುವ ನಿಟ್ಟಿನಲ್ಲಿ ಗ್ರಾಮ ಪಂಚಾಯತಿ ಹಾಗೂ ಪೊಲೀಸ್ ಇಲಾಖೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ