Breaking News

ಹುಕ್ಕೇರಿ | ರಿಯಾಯಿತಿ ದರದಲ್ಲಿ ಕೀಟನಾಶಕ ಔಷಧ: ಸದ್ಬಳಕೆಗೆ ಸಲಹೆ

Spread the love

ಹುಕ್ಕೇರಿ: ‘ರೈತರಿಗೆ ಅಗತ್ಯವಿರುವ ಕೀಟನಾಶಕ ಔಷಧ ಕೈಗೆಟುಕುವ ದರದಲ್ಲಿ ದೊರೆಯುವ ಸದುದ್ದೇಶದಿಂದ ಕೀಟನಾಶಕ ಔಷಧ ಮಳಿಗೆ ಉದ್ಘಾಟಿಸಲಾಗಿದೆ’ ಎಂದು ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷ ರಮೇಶ ಕತ್ತಿ ಹೇಳಿದರು.‌

ತಾಲ್ಲೂಕಿನ ಹೆಬ್ಬಾಳ ಗ್ರಾಮದಲ್ಲಿ ಕೀಟನಾಶಕ ಮಳಿಗೆ ಉದ್ಘಾಟಿಸಿ ಮಾತನಾಡಿದ ಅವರು, ‘ಶೇ30ರಷ್ಟು ರಿಯಾಯಿತಿ ದರದಲ್ಲಿಕೀಟನಾಶಕ ಔಷಧ ನೀಡಲಾಗುತ್ತಿದ್ದು, ರೈತರು ಇದರ ಸದುಪಯೋಗ ಪಡೆದುಕೊಳ್ಳಬೇಕು’ ಎಂದರು

‘ರೈತರು ಸಂದಿಗ್ದ ಪರಿಸ್ಥಿತಿಗೆ ಸಿಲುಕಿದ್ದಾರೆ. ನರೇಗಾ ಯೋಜನೆಯಡಿ ಸರ್ಕಾರ ಕೂಲಿ ಕೆಲಸ ಒದಗಿಸುತ್ತಿದ್ದು, ಹೊಲ-ಗದ್ದೆಗಳಲ್ಲಿ ಕೂಲಿ ಕಾರ್ಮಿಕರು ದೊರೆಯದೆ ತೊಂದರೆ ಅನುಭವಿಸುತ್ತಿದ್ದಾರೆ’ ಎಂದು ಹೇಳಿದರು.

ಯಮಕನಮರಡಿ ಹುಣಸಿಕೊಳ್ಳ ಮಠದ ಸಿದ್ದಬಸವ ದೇವರು ಸಾನ್ನಿಧ್ಯ ವಹಿಸಿದ್ದರು.

ಕೃಷಿ ಪತ್ತಿನ ಸಂಘದ ಅಧ್ಯಕ್ಷ ಪ್ರಕಾಶ ನಿಲಜಿ, ವಿದ್ಯಾರಣ್ಯ ಹಿರೇಮಠ, ಅಜೀತ ಮುನ್ನೊಳ್ಳಿ, ಜಯಪಾಲ ಹೊನ್ನನವರ, ಶಶಿಕಾಂತ ಮಠಪತಿ, ಅಪ್ಪಾಸಾಹೇಬ ಸಂಕನ್ನವರ, ವಿದ್ಯಾಧರ ಹರಾರಿ, ಚೆನ್ನಬಸವ ಖೋತ ಸೇರಿದಂತೆ ಅನೇಕರು ಇದ್ದರು.


Spread the love

About Laxminews 24x7

Check Also

KRS ಡ್ಯಾಂಗೆ ಭಾಗಿನ ಅರ್ಪಣೆ ಮಾಡಿದ ಸಿಎಂ

Spread the loveಮಂಡ್ಯ: ರೈತರ ಜೀವನಾಡಿ ಕನ್ನಂಬಾಡಿ ಅಣೆಕಟ್ಟು ಸಂಪೂರ್ಣ ಭರ್ತಿಯಾಗಿದೆ. ಈ ಹಿನ್ನೆಲೆಯಲ್ಲಿ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದ ಕೆ.ಆರ್.ಎಸ್. ಜಲಾಶಯಕ್ಕೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ