ಬೆಳಗಾವಿ : ಜಿಲ್ಲಾ ಪೊಲೀಸ್ ಗಣಕಯಂತ್ರ ವಿಭಾಗದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಶ್ರೀಶೈಲ ಮಗದುಮ್ಮ ಅವರಿಗೆ ಮುಖ್ಯಮಂತ್ರಿ ಪದಕ ಲಭಿಸಿದೆ.
ಉಳಿದಂತೆ ಬೆಳಗಾವಿಯ ಆಂತರಿಕಾ ಭದ್ರತಾ ವಿಭಾಗದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪ್ರಶಾಂತ್ ಹಿರೇಮಠ, ಕಂಗ್ರಾಳಿಯ ಕೆಎಸ್ಆರ್ ಪಿ ತರಬೇತಿ ಶಾಲೆಯ ದೇಮಪ್ಪಾ ದಂಡೈನವರ, ಕಾಕತಿ ಪೊಲೀಸ್ ಠಾಣೆ ಸಿಬ್ಬಂದಿ ಸುಭಾಷ್ ಬಿ.ಎಲ್.
ಬೆಳಗಾವಿ ಉತ್ತರ ಸಂಚಾರಿ ಪೊಲೀಸ್ ಠಾಣೆ ಸಿಬ್ಬಂದಿ ಕಾಶಿನಾಥ ಈರಗಾರ, ಮಾಳಮಾರುತಿ ಪೊಲೀಸ್ ಠಾಣೆ ಸಹಾಯಕ ಸಬ್ ಇನ್ಸ್ಪೆಕ್ಟರ್ ಶಾಂತಾ ಗಡಕರಿ, ಚಿಕ್ಕೋಡಿ ಡಿವೈಎಸ್ಪಿ ಗೋಪಾಲಕೃಷ್ಣ ಗೌಡರ್, ಮುರಗೋಡ ಪೊಲೀಸ್ ಠಾಣೆ ಇನ್ಸ್ಪೆಕ್ಟರ್ ಈರಯ್ಯ ಮಠಪತಿ ಅವರಿಗೆ ಮುಖ್ಯಮಂತ್ರಿ ಪದಕ ಲಬಿಸಿದೆ.
ರಾಜ್ಯದ 126 ಮಂದಿ ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿಗೆ 2023 ನೇ ಸಾಲಿನ ಮುಖ್ಯಮಂತ್ರಿ ಪದಕ ಘೋಷಿಸಲಾಗಿದೆ.