Breaking News

ಬುರ್ಖಾ ಧರಿಸಿ ಭಿಕ್ಷೆ ಬೇಡುತ್ತಿದ್ದ ಯುವಕ; ಸ್ಥಳೀಯರಿಂದ ಬಿದ್ದ ಗೂಸಾ

Spread the love

ಚಿಕ್ಕಮಗಳೂರು: ಭಿಕ್ಷೆ ಬೇಡಲು ಬುರ್ಖಾ ಧರಿಸಿ ನಗರಕ್ಕೆ ಬಂದ ಯುವಕನಿಗೆ ಸ್ಥಳೀಯರು ಸಖತ್ ಗೂಸಾ ಕೊಟ್ಟಿರುವ ಘಟನೆ ಮಂಗಳವಾರ (ಆ.13) ನಡೆದಿದೆ.

ಬೆರಳಿಗೆ ನೈಲ್ ಪಾಲಿಶ್ ಹಚ್ಚಿಕೊಂಡು ಶೃಂಗಾರ ಮಾಡಿಕೊಂಡು ಚಾಕು ಇಟ್ಟುಕೊಂಡ ಯುವಕನ ಸಾರ್ವಜನಿಕರ ಕೈಗೆ ಸಿಕ್ಕಿಬಿದ್ದಿದ್ದಾನೆ.

ಬುರ್ಖಾ ತೊಟ್ಟು ನಗರದ ಮಲ್ಲಂದೂರು ರಸ್ತೆಯಲ್ಲಿ ಯುವಕನ ಓಡಾಟ ನಡೆಸುವಾಗ ಅನುಮಾನಗೊಂಡು ಜನರು ಹಿಡಿದಿದ್ದಾರೆ.

ಹರೀಶ್ ಎಂಬ ಯುವಕನ ಕೈ ಬೆರಳು ಕಾಲು ನೋಡಿ ಅನುಮಾನಗೊಂಡ ಸ್ಥಳೀಯರು ಹಿಡಿದು ವಿಚಾರಿಸಿದ್ದಾರೆ. ಥೇಟ್ ಯುವತಿಯಂತೆ ಬುರ್ಖಾ ಧರಿಸಿ ನಿಂತಿದ್ದವನಿಗೆ ಹಿಗ್ಗಾಮುಗ್ಗಾ ಗೂಸಾ ಕೊಟ್ಟಿದ್ದಾರೆ.

ಬಾಳೆಹೊನ್ನೂರು ಮೂಲದ ಹರೀಶ್ ಎಂಬ ಯುವಕನನ್ನು ಸ್ಥಳೀಯರು ಥಳಿಸಿದ್ದಾರೆ. ಭಿಕ್ಷೆ ಬೇಡಲು ಬುರ್ಖಾ ಧರಿಸಿ ಬಂದಿದ್ದಾಗಿ ಯುವಕ ಹೇಳಿಕೆ ನೀಡಿದ್ದಾನೆ. ಆದರೆ ಬುರ್ಖಾ ಒಳಗೆ ಚಾಕು ಇಟ್ಟುಕೊಂಡಿದ್ದ ಬಂದಿದ್ದು, ಸಾಕಷ್ಟು ಅನುಮಾನ ಹುಟ್ಟಿಸಿದ್ದು ಆತನನ್ನು ಪೊಲೀಸರಿಗೆ ಒಪ್ಪಿಸಲಾಗಿದೆ.

ತನಿಖೆ ವೇಳೆ ಬಾಳೆಹೊನ್ನೂರಿನಲ್ಲಿ ಬುರ್ಖಾ ಖರೀದಿ ಮಾಡಿದ್ದಾಗಿ ಗೊತ್ತಾಗಿದೆ. ಬಸವನಹಳ್ಳಿ ಪೊಲೀಸರು ಯುವಕನ ವಿಚಾರಣೆಗೊಳಪಡಿಸಿ ತಹಶೀಲ್ದಾರ್ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ.


Spread the love

About Laxminews 24x7

Check Also

ಸಂಸ್ಕೃತ ಶಾಲಾ ಶಿಕ್ಷಕನಿಂದ 9 ವರ್ಷದ ವಿದ್ಯಾರ್ಥಿ ಮೇಲೆ ಅಮಾನುಷ ಹಲ್ಲೆ ಆರೋಪ: ವಿಡಿಯೋ ವೈರಲ್, ಶಿಕ್ಷಕ ಪರಾರಿ, ಪೊಲೀಸರಿಂದ ತಲಾಶ್​

Spread the loveಚಿತ್ರದುರ್ಗ: ಚಿತ್ರದುರ್ಗ ಜಿಲ್ಲೆಯ ಸಂಸ್ಕೃತ ವೇದ ವಸತಿ ಶಾಲೆಯೊಂದರಲ್ಲಿ ವಿದ್ಯಾರ್ಥಿಯ ಮೇಲೆ ಅಮಾನುಷವಾಗಿ ಹಲ್ಲೆ ನಡೆಸುತ್ತಿರುವ ಆಘಾತಕಾರಿ ಪ್ರಕರಣ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ