Breaking News

ಮಾನನಷ್ಟ ಮೊಕದ್ದಮೆ ಹೂಡಲಿ, ಎದುರಿಸಲು ಸಿದ್ಧ -ವೀರಣ್ಣ ಚರಂತಿಮಠ ಸವಾಲು

Spread the love

ಮಾನನಷ್ಟ ಮೊಕದ್ದಮೆ ಹೂಡಲಿ, ಎದುರಿಸಲು ಸಿದ್ಧ -ವೀರಣ್ಣ ಚರಂತಿಮಠ ಸವಾಲು

ಬಾಗಲಕೋಟೆ: ‘ವಿಧಾನ ಪರಿಷತ್‌ ಸದಸ್ಯ ಪಿ.ಎಚ್‌. ಪೂಜಾರ ಮಾನನಷ್ಟ ಮೊಕದ್ದಮೆ ಹಾಕಲಿ. ಅದನ್ನು ಎದುರಿಸುವ ಶಕ್ತಿ ಇದೆ. ಕಾನೂನಿನ ಮೂಲಕ ಉತ್ತರ ನೀಡುತ್ತೇನೆ’ ಎಂದು ಬಿ.ವಿ.ವಿ. ಸಂಘದ ಕಾರ್ಯಾಧ್ಯಕ್ಷ ವೀರಣ್ಣ ಚರಂತಿಮಠ ಸವಾಲು ಹಾಕಿದರು.

ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಸಂಘಕ್ಕೆ ನೀಡಲಾಗಿದ್ದ ಜಾಗೆ ರದ್ದು ವಿಚಾರದಲ್ಲಿ ಹೆಸರು ಪ್ರಸ್ತಾಪಿಸಿರುವುದಕ್ಕೆ ಮಾನನಷ್ಟ ಮೊಕದ್ದಮೆ ಹೂಡುವುದಾಗಿ ಅವರು ಹೇಳಿದ್ದಾರೆ.

ಇಂತಹ ಹತ್ತು ಮಂದಿ ಬಂದರೂ ಎದರಿಸುತ್ತೇನೆ’ ಎಂದರು.

‘ಎಲ್ಲ ಪಕ್ಷ ಸುತ್ತಾಡಿ ಬಂದಿರುವ ಪೂಜಾರ ಒಬ್ಬ ‘ಜಂಪಿಂಗ್ ಸ್ಟಾರ್’ ಎಂದು ಲೇವಡಿ ಮಾಡಿದ ಅವರು, ಪಾರ್ಟಿಯಿಂದ ಹೊರ ಹೋದವರನ್ನು ಕರೆದುಕೊಂಡು ಪಾದಯಾತ್ರೆಯಲ್ಲಿ ಭಾಗವಹಿಸುತ್ತಾರೆ. ಪಕ್ಷದಲ್ಲಿದ್ದವರು ಇವರ ಜೊತೆಗೆ ಎಷ್ಟು ಜನರಿದ್ದಾರೆ. ಪಕ್ಷ ಎಲ್ಲಿ ಕಟ್ಟಿದ್ದಾರೆ. ಕಾರ್ಯಕರ್ತರು ದೇವರು ಎನ್ನುತ್ತಾರೆ. ಕಾರ್ಯಕರ್ತರಿಗೆ ದ್ರೋಹ ಬಗೆದು ಪಾರ್ಟಿ ಬಿಟ್ಟು ಹೋದವರು ಯಾರು’ ಎಂದು ಪ್ರಶ್ನಿಸಿದರು.

‘ಸಚಿವರ ಕಚೇರಿಯಲ್ಲಿ ಕುಳಿತು ಸಂಘದ ಜಾಗೆ ಬಗ್ಗೆ ಸುಳ್ಳು ಹೇಳಿರುವುದನ್ನು ಅಲ್ಲಿದ್ದವರೊಬ್ಬರು ತಿಳಿಸಿದ್ದಾರೆ. ಸಂದರ್ಭ ಬಂದಾಗ ಸಚಿವರ ಹೆಸರು ಹೇಳುತ್ತೇನೆ. ನಾನು ಹಿಟ್‌ ಆಯಂಡ್ ರನ್‌ ಗಿರಾಕಿಯಲ್ಲ. ಎಲ್ಲವನ್ನೂ ಎದುರಿಸಿಕೊಂಡೇ ಬಂದಿದ್ದೇನೆ. ಹೆದರಿಕೆ ಬೆದರುವುದಿಲ್ಲ’ ಎಂದು ವಾಗ್ದಾಳಿ ನಡೆಸಿದರು.

’34 ವರ್ಷಗಳಿಂದ ಸಂಘದ ಕಾರ್ಯಾಧ್ಯಕ್ಷನಾಗಿದ್ದೇನೆ ಎಂಬುದನ್ನು ತಿಳಿದುಕೊಳ್ಳಬೇಕು. ತಾಕತ್ತಿದ್ದರೆ ಕೈ ಹಾಕಿ ನೋಡು. ಬ್ಲ್ಯಾಕ್‌ಮೇಲ್‌ ಹುದ್ದೆ ಬಂದ್ ಮಾಡು. ತುಳಿಸಿಗೇರಿಯಲ್ಲಿ ಆಣೆ ಮಾಡಲು ಮುಖಂಡರು ಹೋಗಿದ್ದರು. ಆದರೆ, ಅವನೇ ಪತ್ತೆ ಇರಲಿಲ್ಲ’ ಎಂದು ಏಕವಚನದಲ್ಲಿ ಟೀಕಿಸಿದರು.

‘ನ್ಯಾಮಗೌಡರ ವಿಧಾನ ಪರಿಷತ್‌, ಬಿಡಿಸಿಸಿ ಚುನಾವಣೆಯಲ್ಲಿ ಪಕ್ಷದ ಪರ ಮಾಡಿಲ್ಲ ಎಂದು ಸಂಬಂಧಿಸಿದವರು ಹೇಳಿಸಲಿ. ಇವರ ಚುನಾವಣೆಯಲ್ಲಿ ಕೆಲಸ ಮಾಡದಿದ್ದರೆ, ವಿಧಾನ ಪರಿಷತ್‌ನಲ್ಲಿರುತ್ತಿರಲಿಲ್ಲ. ಮನೆಯಲ್ಲಿರುತ್ತಿದ್ದರು’ ಎಂದು ವ್ಯಂಗ್ಯವಾಡಿದರು.


Spread the love

About Laxminews 24x7

Check Also

ಕೇರಳ ಸಿಎಂ ಪುತ್ರಿಯ ಕಂಪನಿ ವಿರುದ್ಧ ತನಿಖೆಗೆ ಆದೇಶ ಪ್ರಶ್ನಿಸಿ ಮೇಲ್ಮನವಿ: ಕೇಂದ್ರಕ್ಕೆ ಹೈಕೋರ್ಟ್ ನೋಟಿಸ್‌

Spread the love ಬೆಂಗಳೂರು: ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಅವರ ಪುತ್ರಿ ಟಿ.ವೀಣಾ ಅವರು ನಿರ್ದೇಶಕಿಯಾಗಿರುವ ಎಕ್ಸಲಾಜಿಕ್‌ ಸಲ್ಯೂಷನ್‌ ಪ್ರೈವೇಟ್‌ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ