ಬೇಲೂರು: ಪ್ರಕೃತಿ ವಿಕೋಪಕ್ಕೆ ಒಳಗಾಗಿ ಸಂಕಷ್ಟದಲ್ಲಿರುವ ಕೇರಳದ ವಯನಾಡಿನ ಜನತೆಗೆ ಇಲ್ಲಿನ 24*7 ಸೇವಾತಂಡ ಹಾಗೂ ಆಲ್ ಇಂಡಿಯಾ ಮುಸ್ಲಿಂ ಡೆವಲಪ್ಮೆಂಟ್ ಫೋರಂ ವತಿಯಿಂದ, ಸಾರ್ವಜನಿಕರಿಂದ ಸಂಗ್ರಹಿಸಲಾಗಿದ್ದ ಅಗತ್ಯ ವಸ್ತುಗಳನ್ನು ಕೇರಳಕ್ಕೆ ವಾಹನಗಳಲ್ಲಿ ಕಳುಹಿಸಲು ತಹಶೀಲ್ದಾರ್ ಎಂ.ಮಮತಾ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ತಹಶೀಲ್ದಾರ್ ಎಂ.ಮಮತಾ ಮಾತನಾಡಿ, ಪ್ರಕೃತಿ ವಿಕೋಪಕ್ಕೆ ನಲುಗಿರುವ ಕೇರಳ ರಾಜ್ಯದ ವಾಯನಾಡಿಗೆ ಅಗತ್ಯ ವಸ್ತುಗಳನ್ನು ಕಳುಹಿಸುತ್ತಿರುವುದು ಶ್ಲಾಘನೀಯವಾಗಿದೆ. ಪಕ್ಕದ ರಾಜ್ಯದವರು ಸಂಕಷ್ಟದಲ್ಲಿದ್ದಾಗ ಅವರಿಗೆ ನೆರವಾಗುವುದು ಮಾನವ ಧರ್ಮ. ಮಾನವೀಯ ಮೌಲ್ಯವನ್ನು ಅರಿತು ನಾವೆಲ್ಲರೂ ಸಹಕಾರ ನೀಡಬೇಕು ಎಂದರು.