ಹುಬ್ಬಳ್ಳಿ,ಆ.3- ಸರಳ ವಾಸ್ತು ಖ್ಯಾತಿಯ ಚಂದ್ರಶೇಖರ ಗುರೂಜಿ ಹತ್ಯೆ ಆರೋಪಿಗೆ ಜಾಮೀನು ನೀಡಲು ಧಾರವಾಡ ಹೈಕೋರ್ಟ್ ನಿರಾಕರಿಸಿದೆ.
ನ್ಯಾಯಮೂರ್ತಿ ಎಸ್.ರಾಚಯ್ಯ ಅವರಿದ್ದ ಏಕ ಸದಸ್ಯ ಪೀಠ ದುಮವಾಡ ಗ್ರಾಮದ ನಿವಾಸಿ ಆರೋಪಿ ಮಹಾಂತೇಶ ಶಿರೂರ ಸಲ್ಲಿಸಿದ್ದ ಜಾಮೀನು ಅರ್ಜಿ ವಿಚಾರಣೆ ನಡೆಸಿ, ಇದೊಂದು ಪೂರ್ವ ನಿಯೋಜಿತ ಕೊಲೆಯಾಗಿದ್ದು, ಸಮಾಜದಲ್ಲಿ ಆತಂಕ ಸೃಷ್ಠಿಸಿದೆ.
ಅಷ್ಟೇ ಅಲ್ಲ ಗುರೂಜಿ ಕುಟುಂಬ ಸೇರಿದಂತೆ ಸಾಕ್ಷಿಗಳಿಗೆ ತೊಂದರೆಯಾಗುವ ಸಾದ್ಯತೆ ಇದೆ ಎಂದು ಕಾರಣ ನೀಡಿ ಜಾಮೀನು ತಿರಸ್ಕರಿಸಿದೆ.