ಭ್ರೂಣ ಹತ್ಯೆ ಮಾಡಿಸಿದ ಪ್ರಿಯಕರ, ಕ್ರಮಕೈಗೊಳ್ಳದ ಪೊಲೀಸರ ವಿರುದ್ಧ ಪ್ರಧಾನಿಗೆ ಮಹಿಳೆ ಪತ್ರ
ರಾಮನಗರ: ಭ್ರೂಣ ಹತ್ಯೆ ಮಾಡಿಸಿದ ಪ್ರಿಯಕರ (Love) ಹಾಗೂ ಆತನ ವಿರುದ್ಧ ಕ್ರಮಕೈಗೊಳ್ಳದ ಪೊಲೀಸರ (Ramangara Police) ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಪ್ರಧಾನಿ ಮೋದಿಗೆ ಮಹಿಳೆಯೊಬ್ಬರು ಪತ್ರ ಬರೆದಿದ್ದಾರೆ. ಪ್ರಿಯಕರ ಮತ್ತು ಪೊಲೀಸರಿಂದ ಅನ್ಯಾಯಕ್ಕೊಳಗಾಗಿದ್ದೇನೆ ಎಂದು ಜಿಲ್ಲೆಯ ಮಾಗಡಿ (Magadi) ಮೂಲದ ಮಹಿಳೆ, ಪ್ರಧಾನಿ ಮೋದಿಗೆ (PM MOdi) ಪತ್ರ ಬರೆದಿದ್ದಾರೆ.
ಒಂದು ವೇಳೆ ನ್ಯಾಯ ಸಿಗದಿದ್ದರೆ ಎಸ್ಪಿ ಕಚೇರಿ ಎದುರೇ ಆತ್ಮಹತ್ಯೆ ಮಾಡಿಕೊಳ್ಳುವೆ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಭ್ರೂಣ ಹತ್ಯೆ ಮಾಡಿಸಿದ್ದ ಪ್ರಿಯಕರ ದಯಾನಂದ ವಿರುದ್ಧ ಮಹಿಳೆ ದೂರು ನೀಡಿದರು, ರಾಮನಗರ ಮಹಿಳಾ ಠಾಣೆ ಪೊಲೀಸರು ತೆಗೆದುಕೊಂಡಿಲ್ಲ. ಹೀಗಾಗಿ ಈ ಮಧ್ಯೆ ದಯಾನಂದನ ಗೆಳೆಯ ತಾನು ದೂರು ಕೊಡಿಸುವುದಾಗಿ ಹೇಳಿ 1.40 ಲಕ್ಷ ರೂಪಾಯಿ ಲಂಚ ಪಡೆದಿದ್ದಾನೆ. ಆದರೆ 1.40 ಲಕ್ಷ ಲಂಚ ನೀಡಿದರೂ ಸಿಪಿಐ ಕ್ರಮಕೈಗೊಂಡಿಲ್ಲ ಎಂದು ಮಹಿಳೆ ಆರೋಪಿಸಿದ್ದಾರೆ.
ಕಳೆದ 4 ತಿಂಗಳಿಂದ ಪೊಲೀಸ್ ಠಾಣೆಗೆ ಅಲೆದು ಬೇಸತ್ತು ಹೋಗಿದ್ದೇನೆ. ನ್ಯಾಯ ಸಿಗದಿದ್ದರೆ ಆತ್ಮಹತ್ಯೆ ಮಾಡಿಕೊಳ್ಳುವೆ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ಪತ್ರದಲ್ಲಿ ಮಹಿಳಾ ಪೊಲೀಸ್ ಠಾಣೆಯ ವೃತ್ತ ನಿರೀಕ್ಷರ ವಿರುದ್ಧ ಕ್ರಮಕ್ಕೆ ಒತ್ತಾಯ ಮಾಡಿದ್ದಾರೆ.