Breaking News

ಕರ್ನಾಟಕದಲ್ಲಿ ‘ಜಲ ಕಂಟಕ’ : ವರ್ಷದ ಆರಂಭದಲ್ಲೇ ಕೋಡಿ ಶ್ರೀಗಳು ನುಡಿದಿದ್ದ ಭವಿಷ್ಯ ನಿಜವಾಯ್ತಾ?

Spread the love

ಬೆಳಗಾವಿ : ರಾಜ್ಯದಲ್ಲಿ ಭೀಕರ ಮಳೆ ಯಾಗುತ್ತಿದ್ದು ಅಪಾರ ಪ್ರಮಾಣದ ಮಳೆಯಿಂದ ಅನೇಕ ಕಡೆಗಳಲ್ಲಿ ಅಪಾರ ಪ್ರಮಾಣದ ಸಾವು ನೋವುಗಳು ಸಂಭವಿಸಿವೆ.ಇದೀಗ ಕರ್ನಾಟಕದಲ್ಲಿ ಸೃಷ್ಟಿಯಾಗಿರುವ ಜಲ ಕಂಟಕದ ಬಗ್ಗೆ ಕೋಡಿಮಠದ ಡಾ. ಶ್ರೀ ಶಿವಾನಂದ ಶಿವಯೋಗಿರಾಜೇಂದ್ರ ಸ್ವಾಮೀಜಿ ಅವರು ವರ್ಷದ ಆರಂಭದಲ್ಲೇ ನುಡಿದಿದ್ದ ಭವಿಷ್ಯ ನಿಜವಾಗಿದೆ.

 

ಹೌದು ರಾಜ್ಯದಲ್ಲಿ ಯಾವಾಗ ಮುಂಗಾರು ಮಳೆ ಆರಂಭವಾಯಿತೊ ಅಂದಿನಿಂದ ಇವತ್ತಿನವರೆಗೂ ರಾಜ್ಯದ ಅನೇಕ ಕಡೆಗಳಲ್ಲಿ ಭಾರಿ ಪ್ರಮಾಣದ ಮಳೆಯಿಂದ ಅನೇಕ ಜನರ ಸಾವು ನೋವಾಗಿದೆ.ಚಿಕ್ಕಮಗಳೂರು, ಉತ್ತರ ಕನ್ನಡ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಮಳೆಯಿಂದ ಗುಡ್ಡ ಕುಸಿದು ಸಾಕಷ್ಟು ಹಾನಿಯಾಗಿವೆ. ಕೆಲ ರಸ್ತೆ ಮತ್ತು ರೈಲು ಸಂಪರ್ಕ ಬಂದ್​ ಆಗಿವೆ.

ಇನ್ನೂ ಉತ್ತರಕರ್ನಾಟಕ ಭಾಗಕ್ಕೆ ಬರುವುದಾದರೆ ಉತ್ತರ ಕರ್ನಾಟಕದ ಬೆಳಗಾವಿ ಜಿಲ್ಲೆಯಲ್ಲಿನ ಪ್ರಮುಖ 7 ನದಿಗಳು ತುಂಬಿ ಹರಿಯುವುತ್ತಿರುವುದರಿಂದ ಕೆಲ ಗ್ರಾಮಗಳಿಗೆ ನೀರು ನುಗ್ಗಿದೆ. ಹಾಗೆ ಬಾಗಲಕೋಟೆ ಜಿಲ್ಲೆಯಲ್ಲೂ ಪ್ರವಾಹ ಪರಿಸ್ಥಿತಿ ಉದ್ಭವಿಸಿದೆ. ಇದರಿಂದ ಜನರು ಹೈರಾಣಾಗಿದ್ದಾರೆ. ಆರೈಕೆ ಕೇಂದ್ರಗಳಲ್ಲಿ ಆಶ್ರಯ ಪಡೆಯುತ್ತಿದ್ದಾರೆ.

ಕರ್ನಾಟಕದಲ್ಲಿ ಮಳೆಯಿಂದ ಇಷ್ಟೆಲ್ಲಾ ಅವಾಂತರ ವಾಗುತ್ತಿರುವ ಕುರಿತು ರಾಜ್ಯದಲ್ಲಿ ಸೃಷ್ಟಿಯಾಗಿರುವ ಜಲ ಕಂಟಕದ ಬಗ್ಗೆ ಕೋಡಿಮಠದ ಡಾ. ಶ್ರೀ ಶಿವಾನಂದ ಶಿವಯೋಗಿರಾಜೇಂದ್ರ ಸ್ವಾಮೀಜಿ ಅವರು ವರ್ಷದ ಆರಂಭದಲ್ಲೇ ನುಡಿದಿದ್ದ ಭವಿಷ್ಯ ನಿಜವಾಗಿದೆ.


Spread the love

About Laxminews 24x7

Check Also

ಡ್ರಂಕ್​​ & ಡ್ರೈವ್:​ 36 ಶಾಲಾ ವಾಹನ ಚಾಲಕರ ವಿರುದ್ಧ ಪ್ರಕರಣ ದಾಖಲು

Spread the love ಬೆಂಗಳೂರು: ಮದ್ಯ ಸೇವಿಸಿ ಶಾಲಾ ವಾಹನಗಳನ್ನು ಓಡಿಸುವ​ ಚಾಲಕರ ವಿರುದ್ಧ ನಗರ ಪಶ್ಚಿಮ ವಿಭಾಗದ ಪೊಲೀಸರು ವಿಶೇಷ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ