Breaking News

ವಿಕ್ಟೋರಿಯಾ ಆಸ್ಪತ್ರೆ ಡಾಕ್ಟರ್‌ಗೆ ಲೋಕಾಯುಕ್ತರಿಂದ ‘ಇಂಜೆಕ್ಷನ್’! ರೋಗಿಗಳ ಪಾಡು ನೋಡಿ ನ್ಯಾಯಮೂರ್ತಿಗಳೇ

Spread the love

ಸಾರ್ವಜನಿಕರಿಂದ ಸಾಕಷ್ಟು ದೂರುಗಳು ಬಂದ ಹಿನ್ನೆಲೆ ವಿಕ್ಟೋರಿಯಾ (Victoria) ಆಸ್ಪತ್ರೆಗೆ ಲೋಕಾಯುಕ್ತ ನ್ಯಾಯಮೂರ್ತಿಗಳಾದ ಬಿ.ಎಸ್ ಪಾಟೀಲ್ (B.S Patil), ಉಪಲೋಕಾಯುಕ್ತ ನ್ಯಾಯಮೂರ್ತಿ ಫಣೀಂದ್ರ (Phaneendra) ಹಾಗೂ ಬಿ. ವೀರಪ್ಪ (B. Veerappa) ದಿಢೀರ್ ಭೇಟಿ ನೀಡಿ ಆಸ್ಪತ್ರೆಯ ಚಿಕಿತ್ಸಾ ವಿಧಾನ, ರೋಗಿಗಳಿಗೆ ವೈದ್ಯರು (Doctor) ಹೇಗೆ ಸ್ಪಂದಿಸುತ್ತಿದ್ದಾರೆ, ಮಾತ್ರೆಗಳನ್ನು ಬರೆದುಕೊಡುವ ಬಗೆ ಹೇಗೆ ಎಂಬುದನ್ನು ಪರಿಶೀಲನೆ ನಡಸಿದರು.

ಬಳಿಕ ರೋಗಿಗಳ ಜೊತೆ ಚರ್ಚೆ ನಡೆಸಿ ಅವರ ಸಮಸ್ಯೆಗಳನ್ನು ಆಲಿಸಿದರು.

ವಿಕ್ಟೋರಿಯಾ ಆಸ್ಪತ್ರೆ ಡಾಕ್ಟರ್‌ಗೆ ಲೋಕಾಯುಕ್ತರಿಂದ 'ಇಂಜೆಕ್ಷನ್'! ರೋಗಿಗಳ ಪಾಡು ನೋಡಿ ನ್ಯಾಯಮೂರ್ತಿಗಳೇ

ಸಾರ್ವಜನಿಕರಿಂದ ಸಾಕಷ್ಟು ದೂರು

ಇತ್ತೀಚಿಗೆ ಸಾರ್ವಜನಿಕರಿಂದ ಸಾಕಷ್ಟು ದೂರುಗಳು ಬಂದ ಹಿನ್ನೆಲೆ ವಿಕ್ಟೋರಿಯಾ ಆಸ್ಪತ್ರೆಗೆ ಲೋಕಾಯುಕ್ತ ನ್ಯಾಯಮೂರ್ತಿಗಳ ತಂಡ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಸುಮಾರು ಒಂದೂವರೆ ಗಂಟೆಗಳ ಕಾಲ ವಿಕ್ಟೋರಿಯಾ ಆಸ್ಪತ್ರೆಯ ಎಲ್ಲಾ ವಾರ್ಡ್‌ಗಳು, ಎರ್ಜೆನ್ಸಿ ವಾರ್ಡ್, ಸೇರಿ ಆಸ್ಪತ್ರೆಯ ಮೂಲೆ ಮೂಲೆಯನ್ನು ಪರಿಶೀನೆ ನಡೆಸಿದರು. ಬಳಿಕರೋಗಿಗಳು ಹಾಗೂ ರೋಗಿಗಳ ಸಂಬಂಧಿಕರಿಂದ ಚರ್ಚೆ ನಡೆಸಿ ದೂರುಗಳನ್ನು ಪಡೆದುಕೊಂಡರು.

ಶುಚಿತ್ವ ಪರಿಶೀಲನೆ

ವಿಕ್ಟೋರಿಯಾ ಆಸ್ಪತ್ರೆಯ ಒಪಿಡಿಯಲ್ಲಿ ನ್ಯಾ. ಬಿ ಎಸ್ ಪಾಟೀಲ್ ಪರಿಶೀಲನೆ ನಡೆಸಿ, ಒಪಿಡಿಯ ಪ್ರತೀ ವಿಭಾಗಕ್ಕೆ ತೆರಳಿ ಮಾಹಿತಿ ಪಡೆದುಕೊಂಡರು. ಈ ಸಂದರ್ಭದಲ್ಲ ಆಸ್ಪತ್ರೆ ಶುಚಿತ್ವ, ಚಿಕಿತ್ಸೆ, ಮೆಡಿಕಲ್ ಸ್ಟೋರ್ ಸೇರಿ ಹಲವೆಡೆ ಪರಿಶೀಲನೆ ನಡೆಸಿದರು.

ರೋಗಿ ನರಳ್ತಾ ಇದ್ರು ವೈದ್ಯರ ನಿರ್ಲಕ್ಷ್ಯ!

ಎಲ್ಲಾ ವಾರ್ಡ್ ಹಾಗೂ ಐಸಿಯು ವಿಭಾಗದಲ್ಲಿ ಪರಿಶೀಲನೆ ನಡೆಸಿದ ಬಳಿಕ ಮಾಧ್ಯದವರಿಗೆ ಪ್ರತಿಕ್ರಿಯೆ ನೀಡಿದ ಲೋಕಾಯುಕ್ತ ನ್ಯಾಯಮೂರ್ತಿ ಬಿ ಎಸ್ ಪಾಟೀಲ್ ಅವರು, ಸರ್ಪ್ರೈಸ್ ವಿಸಿಟ್ ಮಾಡಿದ್ದೇವೆ. ರೋಗಿ ಒಬ್ಬರು ಬಿದ್ದು ನರಳ್ತಾ ಇದ್ರೂ ಯಾರೂ ಚಿಕಿತ್ಸೆ ನೀಡ್ತಾ ಇರಲಿಲ್ಲ, ವೈದ್ಯರು ಸರಿಯಾಗಿ ಸ್ಪಂದಿಸದ ಹಿನ್ನಲೆ ಸಾಕಷ್ಟು ದೂರುಗಳು ಬಂದಿತ್ತು. ಮೆಡಿಷನ್ ಕೊಟ್ಟ ಬಗ್ಗೆ ರಿಜಿಸ್ಟರ್ ನಲ್ಲಿ ಎಂಟ್ರಿಯಾಗ್ತಾ ಇಲ್ಲ. ಮೂರು ಜನ ಡಾಟಾ ಎಂಟ್ರಿ ಆಪರೇಟರ್‌ಗಳನ್ನು ನೇಮಕ ಮಾಡಿಕೊಂಡಿದ್ದಾರೆ. ಎಮರ್ಜೆನ್ಸಿ ಮೆಡಿಷನ್ ಇಲ್ಲ ಅಂತಿದ್ದಾರೆ. ಕಾಂಟ್ರಾಕ್ಟರ್ ಬಿಲ್ ಪೆಡಿಂಗ್ ಇರೋದ್ರಿಂದ ಸಪ್ಲೈ ಸರಿಯಾಗಿ ಮಾಡಿಲ್ಲಾ ಎಂದಿದ್ದಾರೆ ಎಂದರು.


Spread the love

About Laxminews 24x7

Check Also

ಡಿಕೆಶಿ-ಸಿದ್ದರಾಮಯ್ಯ ಬಣಗಳ ಮುಖಂಡರ ನಡುವೆ ಪರಸ್ಪರ ವಾಕ್ಸಮರ

Spread the loveತುಮಕೂರು: ಜಿಲ್ಲೆಯ ಕಾಂಗ್ರೆಸ್ ಪಕ್ಷದಲ್ಲಿ ಡಿಕೆಶಿ ಬಣ vs ಸಿದ್ದರಾಮಯ್ಯ ಬಣಗಳ ನಡುವಿನ ಜಟಾಪಟಿ ಜೋರಾಗಿದ್ದು, ಭಾರೀ ಚರ್ಚೆಗೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ