ಸಾಲದ ಬಾಧೆ ತಾಳಲಾರದೆ ರೈತ ಆತ್ಮಹತ್ಯೆ

Spread the love

ರಾಯಬಾಗ: ಸಾಲದ ಬಾಧೆ ತಾಳಲಾರದೆ ತಾಲ್ಲೂಕಿನ ಹೊಸ ದಿಗ್ಗೇವಾಡಿ ಗ್ರಾಮದ ರೈತ ಬಸವರಾಜ ಭೀಮಪ್ಪ ಸಗರೆ (45) ರೈತ ಮರಕ್ಕೆ ನೇಣು ಹಾಕಿಕೊಂಡು ಬುಧವಾರ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಮೃತರಿಗೆ ಪತ್ನಿ, ಪುತ್ರ, ಪುತ್ರಿ ಇದ್ದಾರೆ. ರಾಯಬಾಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇವರಿಗೆ 1 ಎಕರೆ 10ಗುಂಟೆ ಜಮೀನಿದ್ದು, ಸಾಗುವಳಿ ಹಾಗೂ ಅಭಿವೃದ್ಧಿಯ ಸಲುವಾಗಿ ಗ್ರಾಮದ ಮಹಾಲಿಂಗೇಶ್ವರ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಘದಲ್ಲಿ ₹1.80 ಲಕ್ಷ, ವಿವಿಧ ಉದ್ದೇಶ ಗ್ರಾಮೀಣ ಕೃಷಿ ಪ್ರಾಥಮಿಕ ಸಂಘದಲ್ಲಿ ₹1 ಲಕ್ಷ, ಡಾ.ಪ್ರಭಾಕರ ಕೋರೆ ಸೌಹಾರ್ದ ಸಹಕಾರಿ ಸಂಘದಲ್ಲಿ₹1.50ಲಕ್ಷ, ಬಾವನ ಸೌಂದತ್ತಿ ಕೆನರಾ ಬ್ಯಾಂಕ್ ಶಾಖೆಯಲ್ಲಿ₹50 ಸಾವಿರ, ಚಿಕ್ಕೋಡಿ ಐಡಿಎಫ್ ಸಿ ಬ್ಯಾಂಕ್‌ನಲ್ಲಿ ₹1.50ಲಕ್ಷ ರೂಪಾಯಿ ಸೇರಿ ಒಟ್ಟು ₹6.30ಸಾವಿರ ಸಾಲ ಮಾಡಿಕೊಂಡಿದ್ದರು.

ಮಳೆ ಕೈಕೊಟ್ಟಿದ್ದರಿಂದ ಬೆಳೆಗಳು ನಾಶವಾಗಿದ್ದವು. ಸಾಲ ಪಾವತಿಸಲು ಆಗದೇ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಮೃತನ ಪತ್ನಿ ಶೋಭಾ ಸಗರೆ ತಿಳಿಸಿದ್ದಾರೆ


Spread the love

About Laxminews 24x7

Check Also

ಬಡಾಲ ಅಂಕಲಗಿ ಮರಗಳ ಮಾರಣಹೋಮಕ್ಕೆ ಧನಂಜಯ ಜಾಧವ್ ತೀವ್ರ ಆಕ್ರೋಶ ಬುಧವಾರದೊಳಗೆ ಬಂಧಿಸದಿದ್ದರೆ ಡಿಎಫ್‌ಒ ಕಚೇರಿ ಮುತ್ತಿಗೆಯ ಎಚ್ಚರಿಕೆ

Spread the loveಬಡಾಲ ಅಂಕಲಗಿ ಮರಗಳ ಮಾರಣಹೋಮಕ್ಕೆ ಧನಂಜಯ ಜಾಧವ್ ತೀವ್ರ ಆಕ್ರೋಶ ಬುಧವಾರದೊಳಗೆ ಬಂಧಿಸದಿದ್ದರೆ ಡಿಎಫ್‌ಒ ಕಚೇರಿ ಮುತ್ತಿಗೆಯ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ