ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಇಂಗಳಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಕೃಷ್ಣಾ ನದಿ ತುಂಬಿರುವ ಕಾರಣ ಮಧ್ಯಾಹ್ನ ಪೂಜೆ ಸಲ್ಲಿಸಿ ಬಾಗಿನ ಬಿಡಲು ಹೋದಾಗ, ರೋಹನ್ ಪಾಟೀಲ್ (35) ನದಿಯಲ್ಲಿ ಮುಳುಗಿ ಸಾವನ್ನಪ್ಪಿದರು.
ನದಿಯ ಮಧ್ಯದಲ್ಲಿ ಹೋಗುತ್ತಿದ್ದಾಗ ಪಿಟ್ಸ್ ಬಂದು ಮುಳುಗುತ್ತಿದ್ದ ರೋಹನ್ ನನ್ನು ನಾಲ್ಕೈದು ಜನರಿಂದ ಬದುಕಿಸಲು ಪ್ರಯತ್ನಿಸಲಾಯಿತಾದರೂ ಫಲಕಾರಿಯಾಗಿಲ್ಲ.
ಸ್ಥಳೀಯ ಯುವಕರು ಈ ದೃಶ್ಯವನ್ನು ತಮ್ಮ ಮೊಬೈಲ್ ನಲ್ಲಿ ಸೆರೆಹಿಡಿದಿದ್ದಾರೆ. ರೋಹನ್ ನಿಶ್ಚಿತಾರ್ಥದ ಎಂಟು ದಿನಗಳ ನಂತರ ಈ ದುರ್ಘಟನೆ ಸಂಭವಿಸಿದೆ. ಈ ಘಟನೆ ಅಂಕಲಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
Laxmi News 24×7