Breaking News

ಕಣ್ಮನ ಸೆಳೆಯುವ ಚಾರ್ಮಾಡಿ ಘಾಟ್

Spread the love

ಳೆಗಾಲದಲ್ಲಿ ಪ್ರವಾಸಿಗರನ್ನು ಸೆಳೆಯುವ ಪ್ರಮುಖ ಸ್ಥಳಗಳಲ್ಲಿ ಚಾರ್ಮಾಡಿ ಘಾಟ್ ಕೂಡ ಒಂದಾಗಿದೆ. ಮಲೆನಾಡಿನ ಚಿಕ್ಕಪುಟ್ಟ ಜಲಪಾತಗಳೆಲ್ಲಾ ಜೀವಂತಿಕೆ ಪಡೆದುಕೊಳ್ಳುವ ದೃಶ್ಯ ವೈಭವವನ್ನು ಕಣ್ತುಂಬಿಕೊಳ್ಳುವುದೇ ಕಣ್ಣಿಗೆ ಹಬ್ಬವಿದ್ದಂತೆ.

ಜಲಧಾರೆ, ಹಸಿರನ್ನೇ ಮೈವೆತ್ತು ನಿಂತ ಬೆಟ್ಟಗಳು, ಕಡಿದಾದ ಕಣಿವೆಯ ದಾರಿ, ಜಲಪಾತ, ಪ್ರಪಾತ, ಹಸಿರು, ಮಳೆ, ಗುಡ್ಡವನ್ನು ಚುಂಬಿಸುವ ಬೆಳ್ಳಿ ಮೋಡಗಳು ಒಂದೇ, ಎರಡೇ.

ಹೀಗೆ ಚಾರ್ಮಾಡಿ ಘಾಟ್ ಸೌಂದರ್ಯವನ್ನು ಕಣ್ತುಂಬಿಕೊಳ್ಳಲು ಅಪಾರ ಸಂಖ್ಯೆಯ ಪ್ರವಾಸಿಗರು ಭೇಟಿ ಕೊಡುತ್ತಾರೆ. ಅಲ್ಲಲ್ಲಿ ಕಾಣಸಿಗುವ ಜಲಪಾತಗಳ ಸೌಂದರ್ಯಕ್ಕೆ ಮಾರು ಹೋಗುತ್ತಾರೆ. ಭೂಮಿ, ಭಾನು, ವರುಣ ಮೂರೂ ಒಂದಾಗಿ ಪ್ರಕೃತಿ ಸೌಂದರ್ಯವನ್ನು ಇಮ್ಮಡಿಗೊಳಿಸುವ ದೃಶ್ಯವನ್ನು ಒಮ್ಮೆ ನೋಡಬನ್ನಿ.

 


Spread the love

About Laxminews 24x7

Check Also

2 ವರ್ಷಗಳಿಂದ ಆರಂಭವಾಗದ ಶುದ್ಧ ನೀರಿನ ಘಟಕಗಳು

Spread the loveಹಾವೇರಿ: ನಗರದ ನಿವಾಸಿಗಳಿಗೆ ಶುದ್ಧ ಕುಡಿಯುವ ನೀರು ಸಿಗಲಿ ಎಂದು ಶಾಸಕರ ಅನುದಾನದಲ್ಲಿ ಆರು ಶುದ್ಧ ಕುಡಿಯುವ ನೀರಿನ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ