Breaking News

ದೇವಸ್ಥಾನದ ಧರ್ಮದರ್ಶಿ ಹತ್ಯೆ ಪ್ರಕರಣ: 24 ಗಂಟೆಯೊಳಗೆ ಹಂತಕನ ಬಂಧನ

Spread the love

ದೇವಸ್ಥಾನದ ಧರ್ಮದರ್ಶಿ ಹತ್ಯೆ ಪ್ರಕರಣ: 24 ಗಂಟೆಯೊಳಗೆ ಹಂತಕನ ಬಂಧನ

ಹುಬ್ಬಳ್ಳಿ: ಇಲ್ಲಿನ ಈಶ್ವರನಗರದ ಶ್ರೀ ವೈಷ್ಣೋದೇವಿ ದೇವಸ್ಥಾನದ ಧರ್ಮದರ್ಶಿ ದೇವೆಂದ್ರಪ್ಪ ಮಹಾದೇವಪ್ಪ ವನಹಳ್ಳಿ (63) ಕೊಲೆ ಮಾಡಿದ ಹಂತಕನನ್ನು ಪೊಲೀಸರು ಘಟನೆ ನಡೆದ 24 ತಾಸಿನೊಳಗೆ ಬಂಧಿಸಿದ್ದಾರೆ.

ಇಲ್ಲಿನ ಕಮರಿಪೇಟೆ ಜಿ. ಅಡ್ಡಾ ನಿವಾಸಿ, ಆಟೋ ರಿಕ್ಷಾ ಚಾಲಕ ಸಂತೋಷ ಬೋಜಗಾರ ಬಂಧಿತನಾದವ.

Hubballi: ದೇವಸ್ಥಾನದ ಧರ್ಮದರ್ಶಿ ಹತ್ಯೆ ಪ್ರಕರಣ: 24 ಗಂಟೆಯೊಳಗೆ ಹಂತಕನ ಬಂಧನ

ದೇವಪ್ಪಜ್ಜನ ಪೂಜಾ-ವಿಧಾನಗಳಿಂದಲೇ ನಾವು ಆರ್ಥಿಕವಾಗಿ ಹಾಳಾಗಲು, ಮಾನಸಿಕವಾಗಿ ತೊಂದರೆ ಅನುಭವಿಸುತ್ತಿರುವುದಾಗಿ ಹೇಳಿ ಹತ್ಯೆ ಮಾಡಿರುವುದಾಗಿ ತನಿಖೆ ವೇಳೆ ಬಾಯಿಬಿಟ್ಟಿದ್ದಾನೆ ಎಂದು ಪೊಲೀಸ್ ಆಯುಕ್ತರು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ರವಿವಾರ ಸಂಜೆ ಮಂದಿರದ ಹಿಂಬದಿ ಗೇಟ್‌ನಲ್ಲಿ ಚಾಕು ಇರಿದು ಕೊಲೆ ಮಾಡಿ ಪರಾರಿಯಾಗಿದ್ದ. ಖಚಿತ ಮಾಹಿತಿ ಮೇರೆಗೆ ಸೋಮವಾರ ರಾತ್ರಿ ಬಂಧಿಸಿದ್ದೇವೆ.‌ ಈತ ಎರಡೂವರೆ ವರ್ಷಗಳಿಂದ ಹತ್ಯೆಗೆ ಸಂಚು ಹಾಕಿದ್ದ. ಆ ನಿಟ್ಟಿನಲ್ಲಿ ದೇವಪ್ಪಜ್ಜನನ್ನು ಹಿಂಬಾಳಿಸುತ್ತಿದ್ದ. ಈ ಹಿಂದೆ 2022ರ ಮಾರ್ಚ್‌ನಲ್ಲಿ ದೇವಪ್ಪಜ್ಜನ ವಿದ್ಯಾನಗರದ ನಿವಾಸದಲ್ಲೂ ಹತ್ಯೆಗೆ ಪ್ರಯತ್ನಿಸಿದ್ದ ಎಂದು ತಿಳಿಸಿದರು.

ಪ್ರಕರಣ ದಾಖಲಾದ ತಕ್ಷಣ ಆರೋಪಿ‌ ಪತ್ತೆಗೆ ಎಂಟು ತಂಡಗಳನ್ನು ರಚಿಸಲಾಗಿತ್ತು ಎಂದರು.


Spread the love

About Laxminews 24x7

Check Also

ಚಾಕು ಇರಿದು ಪತ್ನಿಯನ್ನು ಕೊಂದ ಪತಿ

Spread the loveಚಾಮರಾಜನಗರ: ಪತಿ ತನ್ನ ಪತ್ನಿಗೆ ಚಾಕುವಿನಿಂದ ಇರಿದು ಕೊಲೆ ಮಾಡಿರುವ ಘಟನೆ ಹನೂರು ತಾಲೂಕಿನ ಗುಳ್ಯದ ಬಯಲು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ