ಮುಂಬೈ: ಇತ್ತೀಚೆಗೆ ನಡೆದ ಅನಂತ ಅಂಬಾನಿ (Anant Ambani) ಹಾಗೂ ರಾಧಿಕಾ ಮರ್ಚೆಂಟ್ (Radhika Merchant) ಮದುವೆ ಸಮಾರಂಭದಲ್ಲಿ ಐಶಾರಾಮಿ ಬಂಗಲೆ, ವಿಮಾನ ಸೇರಿ ನಾನಾ ರೀತಿಯ ಬೆಲೆ ಬಾಳುವ ಉಡುಗೊರೆ ಬಂದಿವೆ ಎನ್ನಲಾಗಿದೆ.

ಜುಲೈ 12 ರಂದು ಅನಂತ ಅಂಬಾನಿ ಹಾಗೂ ರಾಧಿಕಾ ಮರ್ಚೆಂಟ್ ಅವರ ವಿವಾಹ ಮುಂಬೈನಲ್ಲಿ ಅದ್ಧೂರಿಯಾಗಿ ನಡೆದಿದೆ.
ಈ ವೇಳೆ 14,000 ಅತಿಥಿಗಳು ಭಾಗವಹಿಸಿದ್ದರು.
ಮುಖೇಶ ಅಂಬಾನಿ ಹಾಗೂ ನೀತಾ ಅಂಬಾನಿ ನವ ದಂಪತಿಯಾದ ರಾಧಿಕಾ ಹಾಗೂ ಅನಂತ್ ಅಂಬಾನಿಗೆ ಪಾಮ್ ಜುಮೇರಾದಲ್ಲಿ 640 ಕೋಟಿ ರೂ. ಬೆಲೆಯ ಐಶಾರಾಮಿ ಬಂಗಲೆ ನೀಡಿದ್ದಾರೆ. ಈ ಬಂಗಲೆಯಲ್ಲಿ 10 ರೂಮ್‌ಗಳು ಮತ್ತು ಖಾಸಗಿ ಬೀಚ್ ಅನ್ನು ಹೊಂದಿದೆ ಎಂದು ವರದಿಯಾಗಿದೆ.
ಅದೇ ರೀತಿ ಫೇಸ್‌ಬುಕ್ ಸಿಇಒ ಮಾರ್ಕ್ ಜುಕರ್‌ಬರ್ಗ್‌ನಿಂದ 300 ಕೋಟಿ ರೂ. ಬೆಲೆಯ ಖಾಸಗಿ ವಿಮಾನ ನೀಡಿದ್ದಾರೆ. ರಾಧಿಕಾಗೆ 108 ಕೋಟಿಯ ಡೈಮಂಡ್ ಚೋಕರ್ ಮತ್ತು 21.7 ಕೋಟಿಯ ಕಾರ್ಟಿಯರ್ ಬ್ರೂಚ್ ಸೇರಿದಂತೆ ಇತರ ಗಮನಾರ್ಹ ಉಡುಗೊರೆಗಳು ಬಂದಿವೆ ಎನ್ನಲಾಗಿದೆ
Laxmi News 24×7