Breaking News

ಕಳಸಾ – ಬಂಡೂರಿ ತಡೆಯಲು ಗೋವಾ ಯತ್ನ: ಶೆಟ್ಟರ್‌

Spread the love

ಬೆಳಗಾವಿ: ‘ಮಹದಾಯಿ ಜಲಾನಯನ ಪ್ರದೇಶಕ್ಕೆ ‘ಪ್ರವಾಹ’ ಸಂಸ್ಥೆ ಸದಸ್ಯರು ಭೇಟಿ ನೀಡುವುದನ್ನು ಗಂಭೀರವಾಗಿ ಪರಿಗಣಿಸಬೇಕಿಲ್ಲ. ಈಗಾಗಲೇ ನಾವು ಕಾನೂನು ರೀತಿ ಮೇಲುಗೈ ಸಾಧಿಸಿದ್ದೇವೆ. ಅವರು ಬಂದು ನೋಡಿಕೊಂಡು ಹೋಗಲಿ’ ಎಂದು ಸಂಸದ ಜಗದೀಶ ಶೆಟ್ಟರ್‌ ಹೇಳಿದರು.ಕಳಸಾ - ಬಂಡೂರಿ ತಡೆಯಲು ಗೋವಾ ಯತ್ನ: ಶೆಟ್ಟರ್‌

ನಗರದಲ್ಲಿ ಶನಿವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು, ‘ಕಳಸಾ- ಬಂಡೂರಿ ನಾಲಾ ತಿರುವು ಸಂಬಂಧ ಈಗಾಗಲೇ ಸುಪ್ರೀಂ ಕೋರ್ಟ್‌ ಆದೇಶ ಬಂದಿದೆ.

ಆದರೂ ಗೋವಾ ಸರ್ಕಾರ ಕೇಂದ್ರದ ತಂಡವನ್ನು ಆಹ್ವಾನಿಸಿದೆ. ಯೋಜನೆ ತಡೆಹಿಡಿಯಲು ಗೋವಾ ಸರ್ಕಾರ ನೆಪ ಮಾಡಿಕೊಂಡು ಬರುತ್ತಿದೆ. ಇದಕ್ಕೆ ತಕ್ಕ ಉತ್ತರ ನೀಡಲು ರಾಜ್ಯ ಸರ್ಕಾರ ಸಿದ್ಧವಾಗಬೇಕು’ ಎಂದರು.

‘ಮಹದಾಯಿ ‌ನದಿಯಲ್ಲಿ ಕರ್ನಾಟಕಕ್ಕೆ ಒಂದು ಹನಿ ನೀರಿನ ಹಕ್ಕೂ ಇಲ್ಲ ಎಂದು ಗೋವಾ ಸರ್ಕಾರ ಹೇಳುತಿತ್ತು. ಆದರೆ, ಈಗ ಆದೇಶ ಹೊರಬಿದ್ದು 13 ಟಿಎಂಸಿ ಅಡಿ ನೀರು ನಮ್ಮ ಪಾಲಿಗೆ ಬಂದಿದೆ. ಗೋವಾ ಮುಖ್ಯಮಂತ್ರಿ ‍ಪ್ರಮೋದ್‌ ಸಾವಂತ ಅವರು ಅಲ್ಲಿನ ಜನರನ್ನು ಮೆಚ್ಚಿಸಲು ಈ ರೀತಿ ಕೆಲಸ ಮಾಡುತ್ತಿದ್ದಾರೆ’ ಎಂದು ಶೆಟ್ಟರ್‌ ಆರೋಪಿಸಿದರು.


Spread the love

About Laxminews 24x7

Check Also

ಯರಗಟ್ಟಿ ತಾಲ್ಲೂಕಿನಿಂದ ಅವಿರೋಧವಾಗಿ ಆಯ್ಕೆ ನಿಮ್ಮ ನಂಬಿಕೆ ಉಳಿಸಿಕೊಂಡು, ತಾಲ್ಲೂಕಿನ ರೈತರು ಮತ್ತು ಸಹಕಾರಿ ಕ್ಷೇತ್ರದ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಶ್ರಮಿಸುತ್ತೇನೆ

Spread the loveಬೆಳಗಾವಿ ಜಿಲ್ಲಾ ಕೇಂದ್ರ ಸಹಕಾರಿ (BDCC) ಬ್ಯಾಂಕ್‌ನ ನಿರ್ದೇಶಕರ ಸ್ಥಾನಕ್ಕೆ ಯರಗಟ್ಟಿ ತಾಲ್ಲೂಕಿನಿಂದ ಅವಿರೋಧವಾಗಿ ಆಯ್ಕೆಯಾಗಲು ಕಾರಣರಾದ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ