Breaking News

ಬೆಳಗಾವಿ | ಪಠ್ಯಕ್ರಮ ಬದಲಿಸದಿರಲು ಆಗ್ರಹ

Spread the love

ಬೆಳಗಾವಿ: ‘ಕನ್ನಡ ಮಾಧ್ಯಮದ ಸಮಾಜ ವಿಜ್ಞಾನ ವಿಷಯದ 9ನೇ ತರಗತಿಯ ಪಠ್ಯದಲ್ಲಿ ‘ವಿಶ್ವಗುರು ಬಸವಣ್ಣ ಸಾಂಸ್ಕೃತಿಕ ನಾಯಕ’ ಶೀರ್ಷಿಕೆಯಡಿ ಅಳವಡಿಸಿದ ವಿಷಯ ಸೂಕ್ತವಾಗಿದೆ. ‘ವೀರಶೈವ’ ಎಂಬ ಪದವನ್ನು ಪಠ್ಯದಿಂದ ಕೈಬಿಟ್ಟು ಸರ್ಕಾರ ತೆಗೆದುಕೊಂಡ ನಿರ್ಧಾರವನ್ನು ನಾವು ಸ್ವಾಗತಿಸುತ್ತೇವೆ’ ಎಂದು ಜಾಗತಿಕ ಲಿಂಗಾಯತ ಮಹಾಸಭೆ ಜಿಲ್ಲಾ ಘಟಕದ ಅಧ್ಯಕ್ಷ ಬಸವರಾಜ ರೊಟ್ಟಿ ಹೇಳಿದ್ದಾರೆ.

ಬೆಳಗಾವಿ | ಪಠ್ಯಕ್ರಮ ಬದಲಿಸದಿರಲು ಆಗ್ರಹ

ಈ ಬಗ್ಗೆ ಮುಖ್ಯಮಂತ್ರಿಗೆ ಪತ್ರ ಬರೆದ ಅವರು, ‘ವೀರಶೈವ ಶಿವಾಚಾರ್ಯ ಸಂಸ್ಥೆ ಹಾಗೂ ಕೆಲವು ರಾಜಕಾರಣಿಗಳು ವೀರಶೈವ ಪದ ಕೈಬಿಟ್ಟಿರುವುದಕ್ಕೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಒಂದುವೇಳೆ ಸರ್ಕಾರ ಒತ್ತಡಕ್ಕೆ ಮಣಿದು ತನ್ನ ನಿಲುವು ಬದಲಿಸಿದರೆ, ಅದು ಇತಿಹಾಸ ಹಾಗೂ ಬಸವ ತತ್ವಗಳಿಗೆ ಮಾಡಿದ ವಿರೋಧವಾಗುತ್ತದೆ. ಹಾಗಾಗಿ ಯಾವ ಕಾರಣಕ್ಕೂ ಪಠ್ಯಕ್ರಮ ಬದಲಿಸಬಾರದು. ಸರ್ಕಾರ ಅಂಥ ನಿರ್ಧಾರ ಕೈಗೊಂಡರೆ ಉಗ್ರಹೋರಾಟ ಮಾಡಬೇಕಾಗುತ್ತದೆ’ ಎಂದು ಎಚ್ಚರಿಕೆ ಕೊಟ್ಟಿದ್ದಾರೆ.


Spread the love

About Laxminews 24x7

Check Also

ಫ್ರಾನ್ಸ್ ಕೈಟ್ ಉತ್ಸವದಲ್ಲಿ ಮಂಗಳೂರಿನ ಗಾಳಿಪಟ: ಫ್ರೆಂಚರ ನಾಡಿನಲ್ಲಿ ಹಾರಲಿದೆ ‘ಕುಡ್ಲದ ತೇರು

Spread the love ಮಂಗಳೂರು: ಬಾನಾಡಿಯಲ್ಲಿ ಹಕ್ಕಿಗಳಂತೆ ಹಾರಾಡುವ ಗಾಳಿಪಟ ಈಗ ಅಂತಾರಾಷ್ಟ್ರೀಯ ಹಬ್ಬವಾಗಿದೆ. ಈ ಅಂತಾರಾಷ್ಟ್ರೀಯ ಗಾಳಿಪಟ ಉತ್ಸವ ಸೆಪ್ಟಂಬರ್​ನಲ್ಲಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ