Breaking News
Home / ರಾಜಕೀಯ / ಪ್ರಜ್ವಲ್‌ ಧ್ವನಿ ಬದಲಾಯಿಸಲು ಯತ್ನ

ಪ್ರಜ್ವಲ್‌ ಧ್ವನಿ ಬದಲಾಯಿಸಲು ಯತ್ನ

Spread the love

ಬೆಂಗಳೂರು: ಮಾಜಿ ಸಂಸದ ಪ್ರಜ್ವಲ್‌ ರೇವಣ್ಣ ವಿರುದ್ಧ ಕೇಳಿ ಬಂದಿರುವ ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯ ಆರೋಪ ಪ್ರಕರಣದ ಸಂಬಂಧ ಇತ್ತೀಚೆಗೆ ಅವರನ್ನು ಧ್ವನಿ ಪರೀಕ್ಷೆಗೆ ಒಳಪಡಿಸಿದಾಗ ಕೊಂಚ ಧ್ವನಿ ಬದಲಾಯಿಸಿ ಮಾತನಾಡಲು ಯತ್ನಿಸಿರುವ ಆರೋಪ ಕೇಳಿ ಬಂದಿತ್ತು.

ಹಾಸನದ ಅಶ್ಲೀಲ ಚಿತ್ರವಿರುವ ಪೆನ್‌ಡ್ರೈವ್‌ ಕೇಸ್‌ ಬಗ್ಗೆ ವಿಶೇಷ ತನಿಖಾ ತಂಡ (ಎಸ್‌ಐಟಿ) ತನಿಖೆ ಚುರುಕುಗೊಳಿಸಿದ್ದು ಪ್ರಜ್ವಲ್‌ ವಿರುದ್ಧ ದಾಖಲಾಗಿರುವ ಸಾಲು-ಸಾಲು ದೂರುಗಳ ಪೈಕಿ ಒಂದೊಂದೇ ಪ್ರಕರಣದ ಸಾಕ್ಷ್ಯ ಕಲೆ ಹಾಕಲಾಗುತ್ತಿದೆ.

ಸಂತ್ರಸ್ತೆಯರಿಬ್ಬರು ಎಸ್‌ಐಟಿಗೆ ಪ್ರಜ್ವಲ್‌ ರೇವಣ್ಣ ವಿರುದ್ಧ ಕೊಟ್ಟಿರುವ ಪ್ರತ್ಯೇಕ 2 ಪ್ರಕರಣಗಳಲ್ಲಿ ಇತ್ತೀಚೆಗೆ ಪ್ರಜ್ವಲ್‌ನನ್ನು ಧ್ವನಿ ಪರೀಕ್ಷೆಗೆ ಒಳಪಡಿಸಲಾಗಿತ್ತು. ಧ್ವನಿ ಪರೀಕ್ಷೆಯ ವೇಳೆ ಪ್ರಜ್ವಲ್‌ ರೇವಣ್ಣ ತಮ್ಮ ಧ್ವನಿಯನ್ನು ಕೊಂಚ ಬದಲಾಯಿಸಿ ಮಾತನಾಡಲು ಯತ್ನಿಸಿದ್ದರು ಎನ್ನಲಾಗಿದೆ. ಈ ಮೂಲಕ ತಮ್ಮ ವಿರುದ್ಧ ಎಸ್‌ಐಟಿಗೆ ಸೂಕ್ತ ಸಾಕ್ಷ್ಯ ಸಿಗಬಾರದೆಂಬ ಉದ್ದೇಶದಿಂದ ಈ ರೀತಿ ಮಾಡಿರುವ ಶಂಕೆ ವ್ಯಕ್ತವಾಗಿದೆ.

ಏನಿದು ಧ್ವನಿ ಪರೀಕ್ಷೆ ಸಾಕ್ಷ್ಯ?Pen Drive Case: ಪ್ರಜ್ವಲ್‌ ಧ್ವನಿ ಬದಲಾಯಿಸಲು ಯತ್ನ
ಪ್ರಜ್ವಲ್‌ ಅವರದ್ದು ಎನ್ನಲಾದ ವೈರಲ್‌ ಆಗಿರುವ ಅಶ್ಲೀಲ ವೀಡಿಯೋದಲ್ಲಿ ಸಂತ್ರಸ್ತೆಯರ ಜತೆಗೆ ಸಂಭಾಷಣೆ ನಡೆಸಿರುವ ಆಡಿಯೋ ಕೇಳಿ ಬಂದಿದೆ. ಆದರೆ ಸಂತ್ರಸ್ತೆಯರ ಜತೆಗೆ ಇರುವ ವ್ಯಕ್ತಿಯ ಮುಖ ಚಹರೆ ಕಂಡುಬಂದಿಲ್ಲ ಎನ್ನಲಾಗಿದೆ. ಹೀಗಾಗಿ ವೀಡಿಯೋದಲ್ಲಿ ಕೇಳಿ ಬಂದಿರುವ ಆಡಿಯೋ ಪ್ರಜ್ವಲ್‌ ರೇವಣ್ಣ ಅವರದ್ದೇ ಎಂಬುದನ್ನು ಸಾಕ್ಷ್ಯ ಸಮೇತ ಸಾಬೀತು ಪಡಿಸುವ ಉದ್ದೇಶದಿಂದ ಅವರನ್ನು ಧ್ವನಿ ಪರೀಕ್ಷೆಗೆ ಒಳಪಡಿಸಲಾಗಿತ್ತು. ಎರಡೂ ಧ್ವನಿಗಳು ಹೋಲಿಕೆಯಾದರೆ ವೀಡಿಯೋದಲ್ಲಿರುವುದು ಪ್ರಜ್ವಲ್‌ ರೇವಣ್ಣ ಎಂಬುದಕ್ಕೆ ಬಲವಾದ ತಾಂತ್ರಿಕ ಸಾಕ್ಷ್ಯ ಸಿಕ್ಕಂತಾಗುತ್ತದೆ. ಇದೀಗ ಧ್ವನಿ ಪರೀಕ್ಷೆಯ ವರದಿಗಾಗಿ ಎಸ್‌ಐಟಿ ತಂಡ ಕಾದು ಕುಳಿತಿದೆ.

ಇಂದು ಪ್ರಜ್ವಲ್‌ ಕಸ್ಟಡಿ ಅಂತ್ಯ
ಪ್ರಜ್ವಲ್‌ ರೇವಣ್ಣ ವಶಕ್ಕೆ ಪಡೆದ ಅವಧಿಯು ಶನಿವಾರ ಅಂತ್ಯಗೊಳ್ಳಲಿದ್ದು ಎಸ್‌ಐಟಿ ಅಧಿಕಾರಿಗಳು ಜೂ. 29ರಂದು ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸುವ ಸಾಧ್ಯತೆಗಳಿವೆ. ಕೋರ್ಟ್‌ ಪ್ರಜ್ವಲ್‌ನ‌ನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಿದರೆ ಪ್ರಜ್ವಲ್‌ಗೆ ಇನ್ನು ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಕಂಬಿ ಎಣಿಸಬೇಕಾಗಿದೆ. ನ್ಯಾಯಾಲಯದಲ್ಲಿ ಈ ಹಿಂದೆ ಪ್ರಜ್ವಲ್‌ ರೇವಣ್ಣ ಸಲ್ಲಿಸಿದ್ದ ಜಾಮೀನು ಅರ್ಜಿ ವಜಾಗೊಂಡಿರುವ ಹಿನ್ನೆಲೆಯಲ್ಲಿ ಸದ್ಯ ಜೈಲಿನಿಂದ ಹೊರ ಬರುವುದೇ ಅನುಮಾನ ಎನ್ನಲಾಗುತ್ತಿದೆ.


Spread the love

About Laxminews 24x7

Check Also

ಬೈಲಹೊಂಗಲದಲ್ಲಿ ಇದ್ದಾರೆ ‘ಹತ್ತು ರೂಪಾಯಿ’ ಡಾಕ್ಟ್ರು

Spread the love ಬೈಲಹೊಂಗಲ: ಇದು ದುಬಾರಿ ಯುಗ. ಇಂದು ಬಹುತೇಕ ಖಾಸಗಿ ಆಸ್ಪತ್ರೆಗಳಲ್ಲಿ ವೈದ್ಯಕೀಯ ಶುಲ್ಕ ಜನರ ಕೈಸುಡುತ್ತಿದೆ. ಆದರೆ, …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ