ಬೆಂಗಳೂರು: ರೇಣುಕಾಸ್ವಾಮಿ ಕೊಲೆ (Renukaswamy Murder Case) ಪ್ರಕರಣದಲ್ಲಿ ನಟ ದರ್ಶನ್ (Actor Darshan and Gang) ಮತ್ತು ಸಹಚರರು ಜೈಲು ಪಾಲಾಗಿದ್ದಾರೆ. ಆದರೆ ನಟ ದರ್ಶನ್ ಜೈಲೂಟ ತಿನ್ನಲು ಒಗ್ಗದೆ ಪರದಾಟ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ.
ಜೈಲಿನಿಂದ ಹೊರಗಿದ್ದಾಗ ಐಷಾರಾಮಿ ಜೀವನದ ಜೊತೆಗೆ ಬಿಂದಾಸ್ ಆಗಿ ಇರುತ್ತಿದ್ದ ದರ್ಶನ್, ಫಿಟ್ನೆಸ್ ಮೇಂಟೈನ್ ಮಾಡಲು ಚಿಕನ್, ಮಟನ್, ಪ್ರೂಟ್ಸ್ ಜೊತೆಗೆ ಜ್ಯೂಸ್ ಸೇವಿಸುತ್ತಿದ್ದರು.
ಆದರೆ ಈಗ ಜೈಲಿನಲ್ಲಿ ಸರಿಯಾಗಿ ಉಪ್ಪು ಕಾರ ಇಲ್ಲದ ಸಾಂಬಾರ್, ಮುದ್ದೆ ಅನ್ನ ತಿನ್ನಲು ಕಷ್ಟಪಡುತ್ತಿದ್ದಾರೆ ಎಂದು ತಿಳಿದು ಬಂದಿದೆ. ನಿನ್ನೆ ರಾತ್ರಿ ಸಹ ಜೈಲಿನ ಮೇನು ಪ್ರಕಾರ ಮುದ್ದೆ, ಅನ್ನ, ಚಪಾತಿ ತರಕಾರಿ ಸಾಂಬಾರ್ ಮತ್ತು ಮಜ್ಜಿಗೆಯನ್ನು ಜೈಲು ಸಿಬ್ಬಂದಿ ನೀಡಿದ್ದ. ಆದರೆ ದರ್ಶನ್ ಜೈಲೂಟ ತಿನ್ನಲಾಗದೆ ಪರದಾಟ ನಡೆಸಿದ್ದಾರೆ ಎನ್ನಲಾಗಿದೆ.
ಈತನ್ಮಧ್ಯೆ ಜೈಲಿನಲ್ಲಿ ಸರಿಯಾಗಿ ಊಟ ಸೇರದೆ, ನಿದ್ದೆಯೂ ಬಾರದೆ ದರ್ಶನ್ ವಿಲವಿಲ ಅಂತಿದ್ದಾರೆ ಎಂದು ಹೇಳಲಾಗ್ತಿದ್ದು, ರಾತ್ರಿ ತಡವಾಗಿ ನಿದ್ರೆಗೆ ಜಾರಿ ಬೆಳಗ್ಗೆ 6 ಗಂಟೆ ಸುಮಾರಿಗೆ ಎಚ್ಚರಗೊಂಡಿದ್ದಾರೆ. ಬೆಳಗ್ಗೆ ನಾರ್ಮಲ್ ಕಾಫಿ ಸೇವಿಸದೆ ಬಿಸಿ ಕಾಫಿ ಕೇಳಿ ಪಡೆದಿದ್ದಾರೆ. ಜೊತೆಗೆ ಸಹಖೈದಿಗಳು ಮಾತನಾಡಲು ಯತ್ನಿಸಿದ್ರೂ ಅವರ ಜೊತೆಗೆ ಅಷ್ಟಾಗಿ ಬೇರೆಯುತ್ತಿಲ್ಲ, ನಿಮ್ಮ ಸಹವಾಸ ಸಾಕಪ್ಪ, ದಯವಿಟ್ಟು ನನ್ನ ಪಾಡಿಗೆ ಬಿಟ್ಟು ಬಿಡಿ ಎಂದು ಕೊಠಡಿಯಲ್ಲಿ ಸುಮ್ಮನೆ ಕುಳಿತುಕೊಳ್ಳುತ್ತಿದ್ದಾರೆ ಎಂದು ತಿಳಿದು ಬಂದಿದೆ. ಪರಪ್ಪನ ಅಗ್ರಹಾರ ವಿಶೇಷ ಬ್ಯಾರಕ್‌ನಲ್ಲಿರುವ ದರ್ಶನ್ ಜೊತೆ ಧನರಾಜ್, ವಿನಯ್ ಪ್ರದೂಶ್ ಕೂಡ ಒಂದೇ ಕೊಠಡಿಯಲ್ಲಿದ್ದಾರೆ.