ಕುಣಿಗಲ್ : ಕಾರಿನಿಂದ ಬೈಕ್‌ಗೆ ಗುದ್ದಿ ಯುವಕನನ್ನು ಕೊಲೆ ಮಾಡಿ ಪರಾರಿಯಾಗಿದ್ದ ಐವರು ಆರೋಪಿಗಳನ್ನು ಬಂಧಿಸುವಲ್ಲಿ ಕುಣಿಗಲ್ ಪೊಲೀಸರು ಯಶಸ್ವಿಯಾಗಿದ್ದಾರೆ.
ತಾಲೂಕಿನ ಕೊತ್ತಗೆರೆ ಹೋಬಳಿ ಬಾಗೇನಹಳ್ಳಿ ಗ್ರಾಮದ ರಾಮಚಂದ್ರ (27) ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೊತ್ತಗೆರೆ ಪಾಳ್ಯದ ಸೀನಾ ಅಲಿಯಾಸ್ ಶ್ರೀನಿವಾಸ್ (34), ಉಮೇಶ (32), ಚನ್ನಪ್ಪಗೌಡನಪಾಳ್ಯ ಗುರುರಾಜ್ (40), ಬಿದನಗೆರೆ ಗ್ರಾಮದ ಶಿವರಾಮ್ (38), ಸೊಬಗಾನಹಳ್ಳಿ ಗ್ರಾಮದ ಲಕ್ಷ್ಮಣ (36) ಅವರನ್ನು ಕುಣಿಗಲ್ ಪೊಲೀಸರು ಬಂಧಿಸಿದ್ದಾರೆ.
ಜೂ 10 ಸೋಮವಾರ ಬಾಗೇನಹಳ್ಳಿ ಗ್ರಾಮದ ರಾಮಚಂದ್ರ ಕೆಲಸದ ನಿಮಿತ ಕುಣಿಗಲ್ ಪಟ್ಟಣಕ್ಕೆ ಬಂದು ತನ್ನ ಗ್ರಾಮ ಬಾಗೇನಹಳ್ಳಿಗೆ ಬೈಕ್‌ನಲ್ಲಿ ವಾಪಸಾಗುತ್ತಿದ್ದ ವೇಳೆ ರಾಜ್ಯ ಹೆದ್ದಾರಿ 33 ಕುಣಿಗಲ್, ತುಮಕೂರು ರಸ್ತೆ ಬಾಗೇನಹಳ್ಳಿ ಗೇಟ್ ಬಳಿ ಶ್ರೀನಿವಾಸ್ ಹಾಗೂ ಆತನ ಸಹಚರರು ಕಾರಿನಲ್ಲಿ ಬಂದು ಬೈಕ್‌ನ ಹಿಂಬದಿಗೆ ಢಿಕ್ಕಿ ಹೊಡೆದು, ಕೊಲೆ ಮಾಡಿ ಪರಾರಿಯಾಗಿದ್ದರು.