ಬೆಂಗಳೂರು : ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಪ್ರಕರಣದ ತನಿಖೆ ನಡೆಸುತ್ತಿರುವ ಪೊಲೀಸರು ಇದೀಗ ರೇಣುಕಾಸ್ವಾಮಿ ಮೃತದೇಹ ಸಾಗಿಸಲು ಬಳಸಿದ್ದ ಸ್ಕಾರ್ಪಿಯೋ ಕಾರನ್ನು ಸೀಜ್ ಮಾಡಿದ್ದಾರೆ.
ರೇಣುಕಾಸ್ವಾಮಿ ಹತ್ಯೆ ಬಳಿಕ ಮೃತದೇಹವನ್ನು ಸಾಗಿಸಲು ಬಳಸಿದ್ದಾರೆ ಎನ್ನಲಾಗಿರುವ KA 03 MU 8821 ನಂಬರ್ ನ ಕಾರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಈ ಕಾರು ಆರ್.ಆರ್.ನಗರ ದರ್ಶನ್ ಅಭಿಮಾನಿ ಸಂಘದ ಅಧ್ಯಕ್ಷ ಮನೆ ಬಳಿ ಇತ್ತು. ಇದೀಗ ಪೊಲೀಸರು ಕಾರು ಸೀಜ್ ಮಾಡಿ ಠಾಣೆ ತಂದಿದ್ದಾರೆ. ಈ ಕಾರು ಪುನಿತ್ ಎಂ.ಆರ್.ಎಂಬುವವರ ಹೆಸರಿನಲ್ಲಿದ್ದು, ಹೆಚ್ಚಿನ ವಿಚಾರಣೆ ನಡೆಸಲಿದ್ದಾರೆ.