ಬೆಂಗಳೂರು: ಕಾಂಗ್ರೆಸ್ ವರಿಷ್ಠ ರಾಹುಲ್ ಗಾಂಧಿಯವರು ರಾಜ್ಯದಲ್ಲಿ ಕಾಂಗ್ರೆಸ್ ಗಳಿಸಿದ ಸಾಮಾನ್ಯ ಫಲಿತಾಂಶದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ನಿರೀಕ್ಷೆ ಹುಸಿಗೊಳಿಸಿದ ನಾಯಕರಿಗೆ ಚಾಟಿ ಬೀಸಿದ್ದಾರೆ.
ಕರ್ನಾಟಕದಲ್ಲಿ ನಾವು ಈ ರೀತಿಯ ಫಲಿತಾಂಶ ನಿರೀಕ್ಷೆ ಮಾಡಿರಲಿಲ್ಲ.
ಇದು ನಮಗೆ ತುಂಬ ನಿರಾಸೆ ಉಂಟುಮಾಡಿದೆ. ಚುನಾವಣೆಗೆ ಮುನ್ನ ನೀವು ಕಟ್ಟಿಕೊಟ್ಟ ಚಿತ್ರಣವೇ ಬೇರೆ ಆಗಿತ್ತು.
ಅದರಂತೆಯೇ ಲೆಕ್ಕ ಹಾಕಿದರೂ ಕನಿಷ್ಠ 17ರಿಂದ 18 ಸ್ಥಾನಗಳನ್ನು ಗೆದ್ದು ತರಬಹುದು ಅಂದುಕೊಂಡಿದ್ದೆವು. ಆದರೆ ಚುನಾವಣೆ ಅನಂತರ ಚಿತ್ರಣ ಸಂಪೂರ್ಣ ತಿರುವುಮುರುವು ಆಗಿದೆ.
ಹೊಣೆಗಾರಿಕೆ ಇರಬೇಕು ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
Laxmi News 24×7