ಎಂ.ಕೆ.ಹುಬ್ಬಳ್ಳಿ: ಪಟ್ಟಣದಲ್ಲಿ ಶುಕ್ರವಾರ ಉತ್ತಮ ಮಳೆಯಾಗಿದೆ. ಮಳೆ ರಭಸಕ್ಕೆ ಚರಂಡಿಗಳು ತುಂಬಿಕೊಂಡು ನೀರು, ಚರಂಡಿ ತ್ಯಾಜ್ಯವು ರಸ್ತೆಗಳಲ್ಲಿ ಹರಿಯಿತು. ರಸ್ತೆ ಪಕ್ಕದಲ್ಲಿದ್ದ ಮನೆಗಳಿಗೂ ನೀರು ನುಗ್ಗಿದ್ದರಿಂದ ನಿವಾಸಿಗಳು ಪರದಾಡುವಂತಾಯಿತು.
ಹೆದ್ದಾರಿಯ ಕೆಳಸೇತುವೆ, ಪಟ್ಟಣದ ಒಳ ಮುಖ್ಯರಸ್ತೆ ಜಲಾವೃತಗೊಂಡಿದ್ದವು.
ಇದರಿಂದ ವಾಹನ ಸವಾರರು ತೊಂದರೆ ಅನುಭವಿಸುವಂತಾಯಿತು.
‘ಪ್ರತಿ ಬಾರಿ ಜೋರು ಮಳೆಯಾದಾಗ ರಸ್ತೆಗಳಲ್ಲಿ ನೀರು ತುಂಬಿಹರಿದು ಸಾಕಷ್ಟು ಸಮಸ್ಯೆ ಸೃಷ್ಟಿಯಾಗುತ್ತದೆ. ಪಟ್ಟಣ ಪಂಚಾಯ್ತಿಯು ಸೂಕ್ತ ಕ್ರಮ ಕೈಗೊಂಡು ಸಮಸ್ಯೆ ಪರಿಹರಿಸಬೇಕು’ ಎಂದು ನಿವಾಸಿಗಳು ಆಗ್ರಹಿಸಿದ್ದಾರೆ.
ಎಂ.ಕೆ.ಹುಬ್ಬಳ್ಳಿಯಲ್ಲಿ ಶುಕ್ರವಾರ ಸುರಿದ ಮಳೆಯಿಂದ ಮುಖ್ಯರಸ್ತೆ ಜಲಾವೃತಗೊಂಡಿರುವುದುಎಂ.ಕೆ.ಹುಬ್ಬಳ್ಳಿಯಲ್ಲಿ ಶುಕ್ರವಾರ ಸುರಿದ ಮಳೆಯಿಂದ ಮುಖ್ಯರಸ್ತೆ ಜಲಾವೃತಗೊಂಡಿದ್ದು ವಾಹನ ಸವಾರರೊಬ್ಬರು ಹರಸಾಹಸಪಟ್ಟು ಸಾಗಿದರು