ಬೆಳಗಾವಿ: ಚುನಾವಣೆ ಸಮಯದಲ್ಲಿ ಕೇವಲ ಅಪಪ್ರಚಾರ ಮಾಡಿ ಸುಳ್ಳು ಹೇಳುತ್ತಲೇ ಬಂದ ಕಾಂಗ್ರೆಸ್ ಸಚಿವೆ ಲಕ್ಷ್ಮಿ ಹೆಬ್ಬಾಳಕರ ಮತ್ತು ಅವರ ಪುತ್ರನಿಗೆ ಮತದಾರರೇ ತಕ್ಕ ಪಾಠ ಕಲಿಸಿದ್ದಾರೆ ಎಂದು ಬೆಳಗಾವಿಯಲ್ಲಿ ಮಾಜಿ ಸಂಸದೆ ಮಂಗಲಾ ಸುರೇಶ ಅಂಗಡಿ ತಿರುಗೇಟು ನೀಡಿದ್ದಾರೆ.
ಕ್ಷೇತ್ರಕ್ಕೆ ಹಿಂದಿನ ಸಂಸದರಾಗಿದ್ದ ಸುರೇಶ ಅಂಗಡಿ ಏನು ಮಾಡಿಲ್ಲ. ಯಾವ ಯೋಜನೆಯನ್ನು ತಂದಿಲ್ಲ ಎಂದು ತಾಯಿ ಮತ್ತು ಮಗ ಸುಳ್ಳು ಅಪಪ್ರಚಾರ ಮಾಡಿದರು. ಈ ರೀತಿಯ ಅಪಪ್ರಚಾರಕ್ಕೆ ಮತದಾರರೇ ಸರಿಯಾದ ಪಾಠ ಕಲಿಸಿದ್ದಾರೆ ಎಂದು ಹೇಳಿದ್ದಾರೆ.
ಬಿಜೆಪಿಗೆ ಹೆಚ್ಚು ಸ್ಥಾನಗಳು ಬರದೇ ಇರುವುದಕ್ಕೆ ಬೇಸರವಾಗಿದೆ. ಆದರೂ ಎನ್ ಡಿಎ ಸರಕಾರ ರಚನೆ ಮಾಡುತ್ತದೆ. ಮೋದಿ ಮತ್ತೆ ಪ್ರಧಾನಿಯಾಗುತ್ತಾರೆ. ಜಗದೀಶ್ ಶೆಟ್ಟರ್ ಕೇಂದ್ರದಲ್ಲಿ ಮಂತ್ರಿಯಾಗುತ್ತಾರೆ ಎಂದು ವಿಶ್ವಾಸವಿದೆ ಎಂದು ಹೇಳಿದರು.