ಹೊಸಪೇಟೆ (ವಿಜಯನಗರ): ಹೊಸಪೇಟೆ ನಗರ ಸೇರಿದಂತೆ ಜಿಲ್ಲೆಯ ವಿವಿಧ ಕಡೆಗಳಲ್ಲಿ ಭಾನುವಾರ ರಾತ್ರಿ ಉತ್ತಮ ಮಳೆ ಸುರಿಯಿತು. ಹೊಸಪೇಟೆ ಪ್ರವಾಸಿ ಮಂದಿರದ ಬಳಿ 8.64 ಸೆಂ.ಮೀ. ಮಳೆಯಾಗಿದೆ.
ಗುಡುಗು, ಸಿಡಿಲಿನೊಂದಿಗೆ ರಾತ್ರಿ 1 ಗಂಟೆ ಸುಮಾರಿಗೆ ಮಳೆ ಆರಂಭವಾಯಿತು. ಮಳೆಯ ಬಿರುಸು ಸಾಮಾನ್ಯವಾಗಿತ್ತು.
ಹೊಸಪೇಟೆ ನಗರದಲ್ಲಿ ಸುಮಾರು ಮೂರು ಗಂಟೆ ಸಾಧಾರಣ ಮಳೆ ಸುರಿಯಿತು.
ನಗರದ 18ನೇ ವಾರ್ಡ್‌ನಲ್ಲಿ ಕೆಲವು ಮನೆಗಳಿಗೆ ನೀರು ನುಗ್ಗಿದೆ, ನೀಲಮ್ಮ ಚಿದಾನಂದಪ್ಪ ಎಂಬುವವರು ತಮ್ಮ ಮನೆಯೊಳಗೆ ಸೇರಿದ್ದ ಮಳೆ ನೀರನ್ನು ಹೊರಗೆ ಹಾಕುತ್ತಿದ್ದುದು ಕಾಣಿಸಿತು. ಇಂದಿರಾ ನಗರ ಪ್ರದೇಶದಲ್ಲಿ ಸಹ ಹಲವು ಮನೆಗಳಿಗೆ ನೀರು ನುಗ್ಗಿ ಜನರು ನಿದ್ದೆಗೆಡುವಂತಾಯಿತು.