ಬೆಳಗಾವಿ : ಬೆಳಗಾವಿಯ ಸುಳಗಾ (ಯು) ಗ್ರಾಮದಲ್ಲಿ ಸಿಲಿಂಡರ್ ಸ್ಫೊಟಗೊಂಡು ದಂಪತಿ ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಮೃತರ ಕುಟುಂಬದವರನ್ನು ಭೇಟಿಯಾಗಿ ಸಾಂತ್ವನ ಹೇಳಿದರು.
ಗ್ರಾಮದ ಕಲ್ಲಪ್ಪ ಪಾಟೀಲ್ ಮತ್ತು ಸುಮನ್ ಪಾಟೀಲ್ ಸಿಲಿಂಡರ್ ಸ್ಫೋಟದಿಂದ ಸಾವಿಗೀಡಾಗಿದ್ದಾರೆ.

ಕುಟುಂಬದವರಿಗೆ ಸಾಂತ್ವನ ಹೇಳಿದ ಸಚಿವರು, ವಯಕ್ತಿಕವಾಗಿ ಆರ್ಥಿಕ ನೆರವು ನೀಡಿದರು. ಅಲ್ಲದೇ ಸರ್ಕಾರದಿಂದ ಪರಿಹಾರ ದೊರಕಿಸಿ ಕೊಡುವ ಭರವಸೆ ನೀಡಿದರು.ಈ ಸಮಯದಲ್ಲಿ ಯುವರಾಜ ಕದಂ, ಬಾಗಣ್ಣ ನರೋಟಿ, ಯಲ್ಲಪ್ಪ ಕಲಕಾಂಬ್ಕರ್, ಮನೋಜ ಕಲಕಾಂಬ್ಕರ್, ಗಣಪತ್ ಗಡ್ಕರಿ, ಗಂಗಾರಾಂ ನರೋಟಿ ಮುಂತಾದವರು ಉಪಸ್ಥಿತರಿದ್ದರು.
Laxmi News 24×7