ಹುಬ್ಬಳ್ಳಿ, ಮೇ 21: ಹುಬ್ಬಳ್ಳಿ ಸಂಚಾರಿ ವಿಭಾಗದ ಕಾನ್ಸ್‌ಟೇಬಲ್ ಒಬ್ಬರ ಮೃತದೇಹ ಮಹಿಳೆಯೊಂದಿಗೆ ಆತ್ಮಹತ್ಯೆ ಮಾಡಿಕೊಂಡ ಕೊಳೆತ ಸ್ಥಿತಿಯಲ್ಲಿ ಪತ್ತೆ ಆಗಿದೆ. ಈ ಪೊಲೀಸ್ ಸಿಬ್ಬಂದಿ ಅನೈತಿಕ ಸಂಬಂಧ ಹೊಂದಿದ್ದೆ ಕಾರಣ ಎಂದು ಶಂಕಿಸಲಾಗಿದೆ.
ಮಹೇಶ ಹೆಸರೂರು (30) ಮೃತ ಸಂಚಾರಿ ಪೊಲೀಸ್ ಕಾನ್ಸ್‌ಟೇಬಲ್, ಲಕ್ಷ್ಮಿ ವಾಲಿ (30) ಮೃತ ಮಹಿಳೆ.
ಇವರಿಬ್ಬರು ಆತ್ಮಹತ್ಯೆ ಶರಣಾಗಿ ಮೂರು ದಿನ ಕಳೆದಿದೆ ಎನ್ನಲಾಗುತ್ತಿದೆ. ಮೃತದೇಹ ಕೊಳೆತ ವಾಸನೆ ಬಂದ ಬಳಿಕ ಅಕ್ಕಪಕ್ಕದ ಮನೆಯವರು ತಿಳಿಸಿದ ಮೇಲೆ ಘಟನೆ ಬೆಳಕಿಗೆ ಬಂದಿದೆ.
30 ವರ್ಷದ ಲಕ್ಷ್ಮಿ ವಾಲಿ ಎಂಬ ಮಹಿಳೆಯೊಂದಿಗೆ ಗಿರೀಶ್ ಅವರು ಇಬ್ಬರು ಒಂದೇ ಸೀರೆಯಲ್ಲಿ ನೇಣಿಗೆ ಶರಣಾಗಿದ್ದಾರೆ. ಹುಬ್ಬಳ್ಳಿಯ ನವನಗರದ ಗಾಮನಗಟ್ಟಿಯ ಮನೆಯೊಂದರಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಕೊಳೆತ ಸ್ಥಿತಿಯಲ್ಲಿ ಮೃತ ದೇಹಗಳು ಪತ್ತೆಯಾಗಿವೆ. ಸುದ್ದಿ ತಿಳಿಯುತ್ತಿದ್ದ ಆ ಮನೆಯ ಸುತ್ತಮುತ್ತ ಜನರು ಜಮಾಯಿಸಿದ್ದಾರೆ.
Laxmi News 24×7