ಹಾವೇರಿ: ಜಿಲ್ಲೆಯ ಶಿಗ್ಗಾವಿ ತಾಲ್ಲೂಕಿನ ತಡಸ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಜೂಜು (ಇಸ್ಪೀಟ್) ಆಡಿಸಲು 2 ಲಕ್ಷ ರೂ. ಲಂಚ ಪಡೆಯುತ್ತಿದ್ದ ವೇಳೆ ಲೋಕಾಯುಕ್ತ ಪೊಲೀಸರ ಬಲೆಗೆ ಪಿಎಸ್‌ಐ ಮತ್ತು ಕಾನ್ ಸ್ಟೆಬಲ್ ಬಿದ್ದಿದ್ದಾರೆ.
ತಡಸ ಪೊಲೀಸ್ ಠಾಣೆಯ ಪಿಎಸ್‌ಐ ಶರಣಬಸಪ್ಪ ಕಾಂದೆ ಮತ್ತು ಕಾನ್ ಸ್ಟೆಬಲ್ ಸುರೇಶ ಮಾನೋಜಿ ಬಂಧಿತರು.

ಜೂಜು ಆಡಿಸುವ ಸಂಬಂಧ ಪ್ರಭಾಕರ ಈರಪ್ಪ ಬೆಟ್ಟದೂರ ಅವರಿಗೆ 5 ಲಕ್ಷ ಲಂಚದ ಬೇಡಿಕೆ ಇಟ್ಟು, ಮಧ್ಯವರ್ತಿ ಕಿರಣ ವನಹಳ್ಳಿ ಮೂಲಕ 2 ಲಕ್ಷ ಮುಂಗಡ ಪಡೆಯುವ ವೇಳೆ ಲೋಕಾಯುಕ್ತ ಪೊಲೀಸರು ಯಶಸ್ವಿಯಾಗಿ ಸೆರೆ ಹಿಡಿದಿದ್ದಾರೆ.
ಹಾವೇರಿ ಲೋಕಾಯುಕ್ತ ಡಿವೈಎಸ್ಪಿ ಬಿ.ಪಿ.ಚಂದ್ರಶೇಖರ್ ನೇತೃತ್ವದಲ್ಲಿ ದಾಳಿ ನಡೆಯಿತು.
Laxmi News 24×7