Breaking News

ರೈಲಿನಲ್ಲಿ ಮತ್ತೊಬ್ಬ ಮಹಿಳೆ ಕೊಲೆಗೆ ಯತ್ನಿಸಿದ ಅಂಜಲಿ ಹಂತಕ!

Spread the love

ದಾವಣಗೆರೆ: ಹುಬ್ಬಳ್ಳಿ ಬೆಂಡಿಗೇರಿಯ ಅಂಜಲಿ ಎಂಬ ಯುವತಿಯನ್ನು ಕೊಂದು (Anjali Murder Case) ತಲೆ ತಪ್ಪಿಸಿಕೊಂಡಿದ್ದ ಆರೋಪಿ ಗಿರೀಶ್‌, ರೈಲಿನಲ್ಲಿ ಮತ್ತೊಬ್ಬ ಮಹಿಳೆಯ ಕೊಲೆಗೆ (Murder attempt) ಯತ್ನಿಸಿದ್ದ ಎಂದು ಗೊತ್ತಾಗಿದೆ. ಕೊಲೆ ಯತ್ನಕ್ಕೆ (Hubli crime) ಒಳಗಾದ ಮಹಿಳೆ ಈ ಕುರಿತು ದಾವಣಗೆರೆಯಲ್ಲಿ ದೂರು (FIR) ನೀಡಿದ್ದಾರೆ.

Anjali Murder Case: ರೈಲಿನಲ್ಲಿ ಮತ್ತೊಬ್ಬ ಮಹಿಳೆ ಕೊಲೆಗೆ ಯತ್ನಿಸಿದ ಅಂಜಲಿ ಹಂತಕ!

ಅಂಜಲಿ‌ ಕೊಲೆ ಆರೋಪಿ‌ ಗಿರೀಶ್ ಮೇಲೆ ಮತ್ತೊಂದು ಎಫ್‌ಐಆರ್ ದಾವಣಗೆರೆ ರೈಲ್ವೇ ಪೊಲೀಸ್ ಠಾಣೆಯಲ್ಲಿ‌ ದಾಖಲಾಗಿದೆ. ಗದಗ ಮೂಲದ ಲಕ್ಷ್ಮೀ ಹಾಗೂ ಗಂಡ ಮಹಾಂತೇಶ್ ಸವಟೂರು ಪ್ರಕರಣ ದಾಖಲಿಸಿದ್ದಾರೆ. ತುಮಕೂರಿನಿಂದ ವಿಶ್ವಮಾನವ ಎಕ್ಸಪ್ರೆಸ್ ಟ್ರೈನ್‌ನಲ್ಲಿ ಪತಿ ಜೊತೆ ಇವರು ಪ್ರಯಾಣಿಸುತ್ತಿದ್ದರು. ಆಗ ಅಂಜಲಿ ಕೊಲೆ ಆರೋಪಿ ಗಿರೀಶ್ ಹಲ್ಲೆ ಮಾಡಿದ್ದ.

ಅರಸೀಕೆರೆ ನಿಲ್ದಾಣದಲ್ಲಿ ಜನರಲ್ ಬೋಗಿ ಹತ್ತಿಕೊಂಡ ಆರೋಪಿ‌ ಗಿರೀಶ್, ರೈಲು ಹತ್ತಿದ ನಂತರ ಸಂತ್ರಸ್ತೆಯನ್ನು ಕೆಟ್ಟ ದೃಷ್ಟಿಯಲ್ಲಿ ನೋಡುತ್ತಿದ್ದ. ಚಿಕ್ಕಜಾಜೂರಿನ ರೈಲು ನಿಲ್ದಾಣದಲ್ಲಿ ಮಹಿಳೆ ರೆಸ್ಟ್ ರೂಂಗೆ ಹೋದಾಗ ಆಕೆಯನ್ನು ಹಿಂಬಾಲಿಸಿದ್ದ. ರೆಸ್ಟ್ ರೂಂ‌ ಕಿಂಡಿಯಿಂದ ಗಮನಿಸುತ್ತಿದ್ದ. ಇದರಿಂದ ಸಿಟ್ಟಿಗೆದ್ದ ಮಹಿಳೆ, ನಿನಗೆ ಅಕ್ಕತಂಗಿಯರಿಲ್ವಾ ಎಂದು ದಬಾಯಿಸಿದ್ದರು. ಆಗ ಮಹಿಳೆಗೆ ಚಾಕು ತೋರಿಸಿ ಗಿರೀಶ್‌ ಚುಚ್ಚಲು ಮುಂದಾಗಿದ್ದ.

ಹೊಟ್ಟೆಗೆ ಚಾಕು ಚುಚ್ಚಲು ಬಂದಾಗ ಮಹಿಳೆ ಎಡಗೈ ಮುಂದಿಟ್ಟು ತಡೆದಿದ್ದರು. ನಂತರ ಪತಿಯನ್ನು ಕರೆದಿದ್ದರು. ಪ್ರಯಾಣಿಕರು ಬಂದು ಸುತ್ತುವರಿದಾಗ, ಚಲಿಸುತ್ತಿದ್ದ ರೈಲು ಗಾಡಿಯಿಂದಲೇ ಆಸಾಮಿ ಜಿಗಿದಿದ್ದಾನೆ. ಮಹಿಳೆಯ ಕೈಗೆ ಚುಚ್ಚಿದ ಗಾಯವಾಗಿದೆ. ನಂತರ ದಾವಣಗೆರೆ ಚಿಗಟೇರಿ ಜಿಲ್ಲಾಸ್ಪತ್ರೆಗೆ ಸಂತ್ರಸ್ತೆ ಆಗಮಿಸಿ ಚಿಕಿತ್ಸೆ ಪಡೆದಿದ್ದಾರೆ. ಖಾಸಗಿ ಆಸ್ಪತ್ರೆಗೆ‌ ಚಿಕಿತ್ಸೆಗೆ ದಾಖಲಾಗಿದ್ದಾರೆ.

ಮಾಯಕೊಂಡ ಬಳಿ ರೈಲಿನಿಂದ ಕೆಳಗೆ ಧುಮುಕಿದ್ದ ಗಿರೀಶ್‌ ಅಲಿಯಾಸ್‌ ವಿಶ್ವನನ್ನು ರೈಲ್ವೆ ಪೊಲೀಸರು ವಶಕ್ಕೆ ಪಡೆದಿದ್ದರು. ಹಲ್ಲೆಗೊಳಗಾದ ಮಹಿಳೆಯನ್ನೂ ಆಸ್ಪತ್ರೆಗೆ ಕರೆದೊಯ್ದಿದ್ದರು. ಮಾಧ್ಯಮಗಳಲ್ಲಿ ಬಂದಿದ್ದ ಗಿರೀಶ್‌ ಫೋಟೋ ನೋಡಿದ್ದ ರೈಲ್ವೆ ಪೊಲೀಸರು, ಕೊಲೆ ಆರೋಪಿಯನ್ನು ಗುರುತಿಸಿದ್ದರು. ಕೂಡಲೇ ಹುಬ್ಬಳ್ಳಿ ಪೊಲೀಸರಿಗೆ ಮಾಹಿತಿ ನೀಡಿ ಆರೋಪಿಯನ್ನು ಒಪ್ಪಿಸಿದ್ದರು.


Spread the love

About Laxminews 24x7

Check Also

ಅಕ್ರವಾಗಿ ಜೂಜಾಟ ನಡೆಸುತ್ತಿದ್ದ ಅಡ್ಡೆಯ ಮೇಲೆ ಬೆಳಗಾವಿ ಪೊಲೀಸರು ದಾಳಿ ನಡೆಸಿ 12 ಆರೋಪಿಗಳನ್ನು ಬಂಧಿಸಿದ್ದಾರೆ.

Spread the loveಅಕ್ರವಾಗಿ ಜೂಜಾಟ ನಡೆಸುತ್ತಿದ್ದ ಅಡ್ಡೆಯ ಮೇಲೆ ಬೆಳಗಾವಿ ಪೊಲೀಸರು ದಾಳಿ ನಡೆಸಿ 12 ಆರೋಪಿಗಳನ್ನು ಬಂಧಿಸಿದ್ದಾರೆ. ನಂದಿಹಳ್ಳಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ