ಕೊಪ್ಪಳ: ಬರಗಾಲ, ಬಿರುಬಿಸಿಲು ಹಾಗೂ ಬಿಸಿಗಾಳಿಗೆ ಬೇಸತ್ತು ಹೋಗಿದ್ದ ಜಿಲ್ಲೆಯ ಜನರಿಗೆ ಮೇಲಿಂದ ಮೇಲೆ ಸುರಿಯುತ್ತಿರುವ ಮಳೆ ಖುಷಿ ನೀಡಿದೆ. ಕೃಷಿ ಚಟುವಟಿಕೆಗೆ ಸಿದ್ಧರಾಗುತ್ತಿರುವ ರೈತರಲ್ಲಿಯೂ ಮಳೆಯ ಹನಿಗಳು ಮಂದಹಾಸ ಮೂಡಿಸಿವೆ.
ಮಂಗಳವಾರ ತಡರಾತ್ರಿಯಿಂದ ಬುಧವಾರದ ಬೆಳಗಿನ ಜಾವದ ತನಕ ಕೊಪ್ಪಳ, ಕುಷ್ಟಗಿ ತಾಲ್ಲೂಕಿನ ಹನುಮಸಾಗರ, ಮುನಿರಾಬಾದ್, ಕುಕನೂರು, ಗಂಗಾವತಿ ಸೇರಿದಂತೆ ಜಿಲ್ಲೆಯ ಹಲವು ಕಡೆ ಉತ್ತಮವಾಗಿ ಮಳೆಯಾಗಿದೆ.