Breaking News

ಅನ್ಯ ಜಾತಿ ಎಂದು ಪ್ರಿಯಕರ ಮದುವೆಗೆ ನಿರಾಕರಿಸಿದ್ದಕ್ಕೆ ಯುವತಿ ಆತ್ಮಹತ್ಯೆಗೆ ಶರಣು

Spread the love

ಕಲಬುರಗಿ, ಮೇ.11: ಮದುವೆಗೆ ನಿರಾಕರಿಸಿದ್ದಕ್ಕೆ ಕಲಬುರಗಿಯಲ್ಲಿ ಯುವತಿ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ಕಲಬುರಗಿ ನಗರ ಹೊರವಲಯದ ಯಲ್ಲಾಲಿಂಗ್ ಕಾಲೋನಿಯಲ್ಲಿ ಬಾಡಿಗೆ ರೂಂನಲ್ಲಿ ವಾಸವಾಗಿದ್ದ ಯುವತಿ ಪುಷ್ಪಾ(26) ನಿನ್ನೆ ಸಂಜೆ (ಮೇ.10) ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

UPSC ಪರೀಕ್ಷೆಗೆ ಸಿದ್ದತೆ ನಡೆಸಿದ್ದ ಪುಷ್ಪಾ ನಾಲ್ಕು ವರ್ಷಗಳಿಂದ ಗಾಂಧಿನಗರ ನಿವಾಸಿ ಕಿರಣ್ ಎಂಬಾತನ ಜೊತೆ ಪ್ರೀತಿಯಲ್ಲಿ ಬಿದ್ದಿದ್ದರು. ಕಳೆದ ಕೆಲ ದಿನಗಳಿಂದ ಪುಷ್ಪಾ ತನ್ನ ಪ್ರಿಯಕರ ಕಿರಣ್​ಗೆ ಮದುವೆ ಮಾಡಿಕೋ ಎಂದು ಒತ್ತಾಯ ಮಾಡ್ತಿದ್ದರು.

ಆದರೆ ಪುಷ್ಪಾ ಹಾಗೂ ಕಿರಣ್​ಗೆ ಜಾತಿ ವಿಚಾರ ಅಡ್ಡ ಬಂದಿತ್ತು. ಅನ್ಯ ಜಾತಿ ಹಿನ್ನೆಲೆ ಯುವತಿ ಮದುವೆಗೆ ಕಿರಣ್ ಮನೆಯವರು ನಿರಾಕರಿಸಿದ್ದರು. ಹೀಗಾಗಿ ಕಿರಣ್ ಕೂಡ ಈಗಲೇ ಮದುವೆ ಬೇಡವೆಂದು ಪುಷ್ಪಾಗೆ ಸಮಾಧಾನ ಮಾಡಿದ್ದ.

ಆದರೆ ಇದರಿಂದ ಮನನೊಂದ ಪುಷ್ಪಾ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ವಿಶ್ವವಿದ್ಯಾಲಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


Spread the love

About Laxminews 24x7

Check Also

ಗಣೇಶ ಜನ್ಮ ಕಥೆ, ಸಂಕೇತಗಳ ಅರ್ಥ ಮತ್ತು ಆಚರಣೆ

Spread the love ಗಣೇಶ ಜನ್ಮ ಕಥೆ, ಸಂಕೇತಗಳ ಅರ್ಥ ಮತ್ತು ಆಚರಣೆ ಒಂದು ದಿನ ಪಾರ್ವತಿ ದೇವಿಯು ಕೈಲಾಸ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ