Breaking News

ಣಬಿಸಿಲಿಗೆ ತತ್ತರಿಸಿದ ಕೋಳಿ ಸಾಕಾಣಿಕೆ ಉದ್ಯಮ,

Spread the love

ಹಾವೇರಿ, : ಈ ಭಾರಿಯ ರಣಬಿಸಿಲಿಗೆ (Sunlight) ಜನ ಜಾನುವಾರು ತತ್ತರಿಸಿ ಹೋಗಿವೆ. ಅದರಲ್ಲೂ ಇತ್ತೀಚಿಗೆ ಪ್ರತಿನಿತ್ಯ 39 ರಿಂದ 40 ರಷ್ಟು ಉಷ್ಣಾಂಶ ದಾಖಲಾಗುತ್ತಿದೆ. ಇದರಿಂದ ಜನರು ಹೈರಾಣಾಗಿದ್ದು ಒಂದು ಕಡೆಯಾದರೆ, ಈ ಭಾರಿಯ ರಣಬಿಸಿಲಿಗೆ ಕೋಳಿ ಉದ್ಯಮಿದಾರರು(Poultry farming)ತತ್ತರಿಸಿ ಹೋಗಿದ್ದಾರೆ. ರಣಬಿಸಿಲಿಗೆ ಕೋಳಿಗಳು ಸಾವನ್ನಪ್ಪದ್ದು, ಮೊಟ್ಟೆಯ ಉತ್ಪಾದನೆ ಕಡಿಮೆಯಾಗುತ್ತಿದೆ. ಇದರಿಂದ ಕೋಳಿ ಉದ್ಯಮೆದಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ಭಾರಿಯ ಬಿಸಿಲಿಗೆ ಜನ, ಜಾನುವಾರುಗಳು, ಪ್ರಾಣಿ, ಪಕ್ಷಿಗಳು ಕಂಗೆಟ್ಟು ಹೋಗಿವೆ. ಇದಕ್ಕೆ ಕೋಳಿ ಉದ್ಯಮ ಏನು ಹೊರತಾಗಿಲ್ಲ. ರಣಬಿಸಿಲಿಗೆ ತತ್ತರಿಸಿ ಹೋದ ಸಾವಿರಾರೂ ಕೋಳಿಗಳು ಬಿಸಿಲಿನ ತಾಪಕ್ಕೆ ಸಾವನಪ್ಪುತ್ತಿವೆ.

ಹಾವೇರಿ: ರಣಬಿಸಿಲಿಗೆ ತತ್ತರಿಸಿದ ಕೋಳಿ ಸಾಕಾಣಿಕೆ ಉದ್ಯಮ, ಶಾಖಕ್ಕೆ ಕೋಳಿಗಳು ಬಲಿ

ತಾಪಮಾನ ಕಡಿಮೆ ಮಾಡಲು ಸ್ಪಿಂಕ್ಲರ್ ಮೂಲಕ ಮೇಲ್ಚಾವಣೆಗೆ ನೀರು ಹಾಕಿದರು ಪ್ರಯೋಜನ ಆಗಿಲ್ಲಾ. ಹಾವೇರಿ ಜಿಲ್ಲೆಯ ಜೀವನಾಡಿ ನದಿಗಳಾದ ತುಂಗಭದ್ರಾ, ಕುಮದ್ವತಿ, ವರದಾ ಹಾಗೂ ಧರ್ಮಾ ನದಿ ಸಂಪೂರ್ಣವಾಗಿ ಖಾಲಿಯಾಗಿವೆ.‌ ದಿನದಿಂದ ದಿನಕ್ಕೆ ಉಷ್ಟಾಂಶ ಹೆಚ್ಚಾಗುತ್ತಿದೆ. ಇದರಿಂದ ಜನ ಮತ್ತು ಜಾನುವಾರು ಜೊತಗೆ ಕೋಳಿ ಉದ್ಯಮ ನಲುಗಿ ಹೋಗಿದೆ.


Spread the love

About Laxminews 24x7

Check Also

ಗೌರಿ ಹುಣ್ಣಿಮೆಯಿಂದ ಛಟ್ಟಿ ಅಮವಾಸ್ಯೆವರೆಗೆ ಶ್ರೀಕ್ಷೇತ್ರ ಯಲ್ಲಮ್ಮನಗುಡ್ಡಕ್ಕೆ ಹುಬ್ಬಳ್ಳಿಯಿಂದ ವಿಶೇಷ ಬಸ್​ ವ್ಯವಸ್ಥೆ

Spread the love ಹುಬ್ಬಳ್ಳಿ: ಬೆಳಗಾವಿ ಜಿಲ್ಲೆಯ ಸವದತ್ತಿ ರೇಣುಕಾ ಯಲ್ಲಮ್ಮದೇವಿ ದರ್ಶನ ತೆರಳುವ ಭಕ್ತಾದಿಗಳು ಹಾಗೂ ಸಾರ್ವಜನಿಕರ ಅನುಕೂಲಕ್ಕಾಗಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ