Breaking News

ಮಕ್ಕಳ ಮೇಲೆ ಬೀದಿ ನಾಯಿಗಳ ಡೆಡ್ಲಿ ಅಟ್ಯಾಕ್

Spread the love

ಬೆಳಗಾವಿ, : ಪಟ್ಟಣದ ನ್ಯೂ ಗಾಂಧಿನಗರ ಮತ್ತು ಉಜ್ವಲ‌್ ನಗರದಲ್ಲಿ ನಿನ್ನೆ(ಮೇ.10) ಮನೆಯ ಹೊರಗೆ ಆಟಾವಾಡುತ್ತಿದ್ದ ನಾಲ್ಕು ವರ್ಷದ ಮೊಹಮ್ಮದ್ ಖೈಫ್ ಹಾಗೂ ಹೈಜಲ್ ಎಂಬುವವರ ಮೇಲೆ ಏಕಾಏಕಿ ಬೀದಿ ನಾಯಿಗಳ (stray dogs) ಗ್ಯಾಂಗ್ ದಾಳಿ ಮಾಡಿದೆ. ಈ ವೇಳೆ ಗಮನಿಸಿದ ಹೈಜಲ್ ಕೂಡಲೇ ನಾಯಿಗಳನ್ನ ಓಡಿಸಲು ಬಂದಿದ್ದಾನೆ. ಆದರೆ, ನಾಲ್ಕೈದು ನಾಯಿಗಳು ಇರುವ ಕಾರಣಕ್ಕೆ ಆತನ ಮೇಲೆಯೂನಾಯಿಗಳು ದಾಳಿನಡೆಸಿವೆ. ಇದನ್ನ ಗಮನಿಸಿದ ಸ್ಥಳೀಯರು ಕೂಡಲೇ ಇಬ್ಬರು ಮಕ್ಕಳನ್ನ ನಾಯಿ ಕಡಿತದಿಂದ ರಕ್ಷಣೆ ಮಾಡಿ ಕೂಡಲೇ ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದಾರೆ. ಇಬ್ಬರು ಮಕ್ಕಳು ಗಂಭೀರವಾಗಿ ಗಾಯಗೊಂಡಿದ್ದು, ಐಸಿಯುವಿನಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಇತ್ತ ಹೈಜಲ್​ಗೂ ಚಿಕಿತ್ಸೆ ಮುಂದುವರೆದಿದ್ದು ನಾಯಿಗಳ ಅಟ್ಟಹಾಸದಿಂದ ಪೋಷಕರು ಮತ್ತು ಸ್ಥಳೀಯರು ಆಕ್ರೋಶ ಹೊರ ಹಾಕುತ್ತಿದ್ದಾರೆ.

ಮಕ್ಕಳ ಮೇಲೆ ಬೀದಿ ನಾಯಿಗಳ ಡೆಡ್ಲಿ ಅಟ್ಯಾಕ್; ಬೆಡ್ ಮೇಲೆ ಕಂದಮ್ಮಗಳ ನರಳಾಟ

ಇನ್ನು ಉಜ್ವಲ ನಗರ ಹಾಗೂ ನ್ಯೂ ಗಾಂಧಿನಗರದ ಜನರಿಗೆ ಹಗಲು ರಾತ್ರಿ ಈ ಬೀದಿ ನಾಯಿಗಳನ್ನು ಕಾಯೋದೆ ಒಂದು ದೊಡ್ಡ ಕೆಲಸವಾಗಿಬಿಟ್ಟಿದೆ. ಬೇಸಿಗೆ ರಜೆ ಹಿನ್ನಲೆ ಮಕ್ಕಳು ಬೀದಿಯಲ್ಲಿ ಆಟ ಆಡುತ್ತಿದ್ದಾರೆ ಎಂದು ಪೋಷಕರು ಚೂರು ಮೈಮರೆತರೂ ಸಹ ಬೀದಿ ನಾಯಿಗಳು ಮಕ್ಕಳ ಮೇಲೆ ಅಟ್ಯಾಕ್ ಮಾಡುತ್ತಿವೆ. ಇಬ್ಬರು ಮಕ್ಕಳ ಮೇಲೆ ಬೀದಿ ನಾಯಿಗಳು ಮನಸೋ ಇಚ್ಛೆ ದಾಳಿ ಮಾಡಿದ್ದು ಇದರಿಂದ ಪೋಷಕರು ಬೆಚ್ಚಿ ಬಿದ್ದಿದ್ದಾರೆ. ನಾಯಿ ದಾಳಿ ಆಗ್ತಿರೋದು ಇದೇ ಮೊದಲೇನಲ್ಲ, ಈ ಹಿಂದೆಯೂ ಸಹ ಇದೇ ನ್ಯೂ ಗಾಂಧಿನಗರ ಹಾಗೂ ಉಜ್ವಲ ನಗರದಲ್ಲಿ ದೊಡ್ಡವರ ಮೇಲೂ ಸಹ ನಾಯಿಗಳು ಅಟ್ಯಾಕ್ ಮಾಡಿದ್ದವು. ಒಂದು ವಾರದಲ್ಲಿ ಏಳು ಜನರಿಗೆ ನಾಯಿ ಕಚ್ಚಿದ್ರೇ, ಕಳೆದ ತಿಂಗಳು ಕೂಡ ಸಾಕಷ್ಟು ಜನರಿಗೆ ನಾಯಿ ಕಚ್ಚಿ ಗಾಯ ಮಾಡಿವೆ.


Spread the love

About Laxminews 24x7

Check Also

ಗಣೇಶ ಜನ್ಮ ಕಥೆ, ಸಂಕೇತಗಳ ಅರ್ಥ ಮತ್ತು ಆಚರಣೆ

Spread the love ಗಣೇಶ ಜನ್ಮ ಕಥೆ, ಸಂಕೇತಗಳ ಅರ್ಥ ಮತ್ತು ಆಚರಣೆ ಒಂದು ದಿನ ಪಾರ್ವತಿ ದೇವಿಯು ಕೈಲಾಸ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ