Breaking News

ಶೇ 20ರಷ್ಟು ಕುಸಿತ: ಬೆಳಗಾವಿ, ಚಿಕ್ಕೋಡಿ ಜಿಲ್ಲೆಗಳ ಕಳಪೆ ಸಾಧನೆ

Spread the love

ಬೆಳಗಾವಿ/ ಚಿಕ್ಕೋಡಿ: ‘ಶೈಕ್ಷಣಿಕ ಹಬ್‌’ ಎಂದು ಗುರುತಿಸಿಕೊಂಡ ಬೆಳಗಾವಿ ಜಿಲ್ಲೆಯಲ್ಲಿ ಈ ಬಾರಿ ಎಸ್ಸೆಸ್ಸೆಲ್ಸಿ ವಾರ್ಷಿಕ ಪರೀಕ್ಷೆ ಫಲಿತಾಂಶ ಗಣನೀಯವಾಗಿ ಇಳಿಕೆಯಾಗಿದ್ದು, ಸರ್ಕಾರಿ ಮತ್ತು ಖಾಸಗಿ ಶಾಲೆಗಳಲ್ಲಿ ಶೈಕ್ಷಣಿಕ ಗುಣಮಟ್ಟ ಕುಸಿಯುತ್ತಿದೆಯೇ ಎಂಬ ಆತಂಕ ತಲೆದೋರಿದೆ.

SSLC Results | ಶೇ 20ರಷ್ಟು ಕುಸಿತ: ಬೆಳಗಾವಿ, ಚಿಕ್ಕೋಡಿ ಜಿಲ್ಲೆಗಳ ಕಳಪೆ ಸಾಧನೆ

ಪ್ರತಿಬಾರಿ ಪರೀಕ್ಷೆ ಫಲಿತಾಂಶದಲ್ಲಿ ಸಣ್ಣ-ಪುಟ್ಟ ವ್ಯತ್ಯಾಸ ಇರುತ್ತಿತ್ತು. ಆದರೆ, ಈ ಬಾರಿ ಬೆಳಗಾವಿ ಮತ್ತು ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಗಳಲ್ಲಿ ಫಲಿತಾಂಶ ಪ್ರಮಾಣ ಶೇ 20ಕ್ಕಿಂತ ಹೆಚ್ಚು ಕಡಿಮೆಯಾಗಿರುವುದು ನಿರಾಸೆಗೆ ಕಾರಣವಾಗಿದೆ.

2021-22ನೇ ಸಾಲಿನ ಪರೀಕ್ಷೆಯಲ್ಲಿ ಶೇ 89.99 ಫಲಿತಾಂಶ ದಾಖಲಿಸಿದ್ದ ಚಿಕ್ಕೋಡಿ 16ನೇ ಸ್ಥಾನ ಗಳಿಸಿತ್ತು. ಮಾರನೇ ವರ್ಷ ಶೇ 90.39 ಫಲಿತಾಂಶದೊಂದಿಗೆ 13ನೇ ಸ್ಥಾನಕ್ಕೇರಿತ್ತು. 2021-22ರಲ್ಲಿ ಶೇ 87.8 ಫಲಿತಾಂಶದೊಂದಿಗೆ 18ನೇ ಸ್ಥಾನದಲ್ಲಿದ್ದ ಬೆಳಗಾವಿ, 2022-23ರಲ್ಲಿ ಶೇ 85.85 ಫಲಿತಾಂಶದೊಂದಿಗೆ 26ನೇ ಸ್ಥಾನಕ್ಕೆ ಕುಸಿದಿತ್ತು. ಕಳೆದ ವರ್ಷಕ್ಕೆ ಹೋಲಿಸಿದರೆ, ಈ ಬಾರಿ ಚಿಕ್ಕೋಡಿಯ ಫಲಿತಾಂಶದಲ್ಲಿ ಶೇ 20.57 ಮತ್ತು ಬೆಳಗಾವಿಯ ಫಲಿತಾಂಶದಲ್ಲಿ ಶೇ 20.92 ಇಳಿಕೆಯಾಗಿದೆ.

ಒಂದು ಕಾಲಕ್ಕೆ ಅಗ್ರಸ್ಥಾನಕ್ಕಾಗಿ ಪೈಪೋಟಿ ನಡೆಸುತ್ತಿದ್ದ, 10 ಸ್ಥಾನದೊಳಗೆ ಸದಾ ಸ್ಥಾನ ಗಿಟ್ಟಿಸುತ್ತಿದ್ದ ಚಿಕ್ಕೋಡಿ, ಈಗ ಪಾತಾಳಕ್ಕೆ ಕುಸಿದಿರುವುದು ಅಚ್ಚರಿಗೆ ಕಾರಣವಾಗಿದೆ. ‘ಫಲಿತಾಂಶ ಸುಧಾರಣೆಯಲ್ಲಿ ಅಧಿಕಾರಿಗಳು ಮತ್ತು ಶಿಕ್ಷಕರು ಎಡವಿದ್ದು ಎಲ್ಲಿ’ ಎಂಬುದು ಚರ್ಚೆಗೆ ಕಾರಣವಾಗಿದೆ.

ರಾಜ್ಯದಲ್ಲಿ ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯೇ ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ಮೊದಲ ಸ್ಥಾನ ಗಿಟ್ಟಿಸಿಕೊಂಡಿದ್ದು ಸಾಕಷ್ಟು ಬಾರಿ. ಆದರೆ, 10 ವರ್ಷಗಳಿಂದ ಫಲಿತಾಂಶ ತುಂಬಾ ಕಳಪೆಯಾಗಿದ್ದು ವಿದ್ಯಾರ್ಥಿಗಳಲ್ಲಿ, ಪಾಲಕರಲ್ಲಿ ನಿರಾಶೆಗೆ ಕಾರಣವಾಗಿದೆ.

2002ನೇ ಸಾಲಿನಲ್ಲಿ ಶೇ 56.76 ಫಲಿತಾಂಶದೊಂದಿಗೆ ರಾಜ್ಯಕ್ಕೆ 14ನೇ ಸ್ಥಾನ ಗಿಟ್ಟಿಸಿದ್ದ ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯು, 2003ರಲ್ಲಿ ಶೇ 64.64 ಫಲಿತಾಂಶ ಪಡೆದು ರಾಜ್ಯಕ್ಕೆ 4ನೇ ಸ್ಥಾನ ಪಡೆದುಕೊಂಡಿತ್ತು. 2004ರಲ್ಲಿ ಶೇ 80.70 ಫಲಿತಾಂಶದೊಂದಿಗೆ 3ನೇ ಸ್ಥಾನ, 2005ರಲ್ಲಿ ಶೇ 78.62 ಫಲಿತಾಂಶದಿಂದ 2ನೇ ಸ್ಥಾನ, 2006ರಲ್ಲಿಯೂ ಕೂಡ 81.95 ಫಲಿತಾಂಶದಿಂದ ಮತ್ತೇ 2ನೇ ಸ್ಥಾನ ಗಳಿಸಿತ್ತು. 2007ರಲ್ಲಿ ಶೇ 87.25, 2008ರಲ್ಲಿ ಶೇ 84.96 ಫಲಿತಾಂಶದೊಂದಿಗೆ ರಾಜ್ಯದಲ್ಲಿಯೇ ಮೊದಲ ಸ್ಥಾನಕ್ಕೇರಿದ್ದು, ರಾಜ್ಯವೇ ಚಿಕ್ಕೋಡಿಯತ್ತ ನೋಡುವಂತಹ ಫಲಿತಾಂಶ ಬಂದಿತ್ತು.


Spread the love

About Laxminews 24x7

Check Also

ಗಣೇಶ ಜನ್ಮ ಕಥೆ, ಸಂಕೇತಗಳ ಅರ್ಥ ಮತ್ತು ಆಚರಣೆ

Spread the love ಗಣೇಶ ಜನ್ಮ ಕಥೆ, ಸಂಕೇತಗಳ ಅರ್ಥ ಮತ್ತು ಆಚರಣೆ ಒಂದು ದಿನ ಪಾರ್ವತಿ ದೇವಿಯು ಕೈಲಾಸ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ