ಅಥಣಿ : ಬಾವಿಯಲ್ಲಿ ಈಜಾಡಲು ಹೋಗಿ 21 ವರ್ಷದ ಯುವಕ ಸಾವನ್ನಪ್ಪಿರುವ ಘಟನೆ ಬೆಳಗಾವಿ ಜಿಲ್ಲೆ ಅಥಣಿ ತಾಲೂಕಿನ ಅನಂತಪೂರ ಗ್ರಾಮದಲ್ಲಿ ನಡೆದಿದೆ..
ಗ್ರಾಮದ ಶಿವಾನಂದ ಮಧು ಮೇತ್ರಿ (ವ – 21) ಮೃತ ದುರ್ದೈವಿಯಾಗಿದ್ದು.ಮೃತ ಶಿವಾನಂದ ಒಂದು ದಿನದಿಂದ ಮನೆಗೆ ಬಾರದೆ ಇದ್ದ ಕಾರಣ ಮನೆಯವರ ಹುಡುಕಾಟ ನಡೆಸಿದಾಗ ಅನಂತಪೂರ ಗ್ರಾಮದ ಮೇತ್ರಿ ತೋಟದ ಭಾವಿಯಲ್ಲಿ ಈಜಾಡಲು ಹೋಗಿ ಮೃತ ಪಟ್ಟಿರುವ ಶಂಕೆ ವ್ಯಕ್ತವಾಗಿದೆ.

ಘಟನೆ ಸ್ಥಳಕ್ಕೆ ಅಗ್ನಿಶಾಮಕ ವಾಹನ ಸಿಬ್ಬಂದಿಯಿಂದ ಶವ ಹೊರಗೆ ತೆಗೆದು ಮರಣೋತ್ತರ ಪರೀಕ್ಷೆ ನಡೆಸಿ ಶವವನ್ನು ಕುಟುಂಬಸ್ಥರಿಗೆ ಹಸ್ಥಾಂತರಿಸಿದ್ದಾರೆ. ಈ ಸಂಭಂಧ ಅಥಣಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ಧಾಖಲಾಗಿದೆ.
Laxmi News 24×7