Breaking News

ಗಮನ ಸೆಳೆಯುವ ಸಾಂಪ್ರದಾಯಿಕ, ಸಖಿ ಮತಗಟ್ಟೆ

Spread the love

ಜೇಂದ್ರಗಡ: ಸಮೀಪದ ರಾಜೂರು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮತಗಟ್ಟೆ ಸಂಖ್ಯೆ 93ರಲ್ಲಿ ಹಳ್ಳಿಗಾಡಿನ ಲಂಬಾಣಿ ಸಮುದಾಯದ ಜೀವನ ಶೈಲಿಯ ವಿಭಿನ್ನ ಕಲಾಕೃತಿಗಳನ್ನು ಚಿತ್ರಿಸಿ, ಮತಗಟ್ಟೆ ಅಲಂಕರಿಸುವ ಮೂಲಕ ಮತದಾರರನ್ನು ಮತಗಟ್ಟೆಯತ್ತ ಸೆಳೆಯಲು ಜಿಲ್ಲಾ ಹಾಗೂ ತಾಲ್ಲೂಕು ಸ್ವೀಪ್ ಸಮಿತಿ ವಿಶೇಷ ಪ್ರಯತ್ನ ಮಾಡಿವೆ.

ರಾಜೂರ ಗ್ರಾಮದಲ್ಲಿ ನಾಲ್ಕು ಮತಗಟ್ಟೆಗಳಿದ್ದು, ಅದರಲ್ಲಿ 93ನೇ ಮತಗಟ್ಟೆ ವಿಶೇಷ ಮತಗಟ್ಟೆಯನ್ನಾಗಿ ಗುರುತಿಸಲಾಗಿದ್ದು, ಈ ಮತಗಟ್ಟೆಯಲ್ಲಿ ಲಂಬಾಣಿ ಸಮುದಾಯದ ಜನರು ಹೆಚ್ಚಿರುವ ಕಾರಣ ತಾಂಡಾ ಜನರನ್ನು ಹೆಚ್ಚಿನ ಸಂಖ್ಯೆಯಲ್ಲಿ ಮತದಾರರನ್ನು ಸೆಳೆಯಲು ಅವರ ಜೀವನ ಶೈಲಿಯ ಚಿತ್ರಣಗಳನ್ನು ಕಲಾಕೃತಿಗಳನ್ನು ಬಿಡಿಸಲಾಗಿದೆ.

ದ್ವಾರದಲ್ಲಿ ಬಿದಿರಿನ ತಟ್ಟಿಯಿಂದ ಗುಡಿಸಲು ನಿರ್ಮಿಸಿ ತೆಂಗಿನ ಗರಿ, ಹುಲುಗಲಿ ತಪ್ಪಲಿನಿಂದ ಹೊದಿಕೆಯಿಂದ ಸಿಂಗರಿಸಲಾಗಿದೆ. ಗೋಡೆಗಳಿಗೆ ಲಂಬಾಣಿ ಜನರು ಬಳಸುವ ಮತ್ತು ಧರಿಸುವ ವಸ್ತ್ರ, ಆಭರಣಗಳನ್ನು ಚಿತ್ರಿಸಲಾಗಿದ್ದು, ಗುಡಿಸಲು ಹಾಗೂ ಗೋಡೆಯನ್ನು ವರ್ಲಿ ಕಲೆಯ ವಿಶೇಷ ಚಿತ್ರಗಳನ್ನು ಚಿತ್ರಿಸಲಾಗಿದೆ.

ಸಖಿ ಮತಗಟ್ಟೆ: ಪಟ್ಟಣದ ಕೆಳಗಲಪೇಟೆಯಲ್ಲಿರುವ ಮತಗಟ್ಟೆ ಸಂಖ್ಯೆ 67ರ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆ ನಂ-4 ಅನ್ನು ಸಖಿ ಮತಗಟ್ಟೆಯಾಗಿಸಲಾಗಿದೆ. ಮತಗಟ್ಟೆಗೆ ಸಂಪೂರ್ಣ ಗುಲಾಬಿ ಬಣ್ಣ ಹಚ್ಚಿ ಮಹಿಳೆಯ ತೋರು ಬೆರಳನ್ನು ಹಣೆಯ ಸಿಂಧೂರದ ಭಾಗಕ್ಕೆ ಮತದಾನದ ಶಾಯಿ ಬರುವ ಹಾಗೆ ಚಿತ್ರ ಬಿಡಿಸಲಾಗಿದೆ. ಮತದಾನ ಪ್ರಜಾಪ್ರಭುತ್ವ ಗಟ್ಟಿಯಾಗುವ ಸಂಕೇತವನ್ನು ಸೂಚಿಸುವಂತಿದ್ದು, ಮತ ನೀಡಿ ಕರ್ತವ್ಯ ಪಾಲಿಸಿ, ಚುನಾವಣಾ ಪರ್ವ ದೇಶದ ಗರ್ವ, ಮತದಾನ ನಮ್ಮ ಹಕ್ಕು ಬರವಣಿಗೆಯ ಸಾಲುಗಳು ಮತದಾನದ ಮಹತ್ವವನ್ನು ಸಾರುತ್ತಿವೆ.


Spread the love

About Laxminews 24x7

Check Also

ಗಣೇಶ ಜನ್ಮ ಕಥೆ, ಸಂಕೇತಗಳ ಅರ್ಥ ಮತ್ತು ಆಚರಣೆ

Spread the love ಗಣೇಶ ಜನ್ಮ ಕಥೆ, ಸಂಕೇತಗಳ ಅರ್ಥ ಮತ್ತು ಆಚರಣೆ ಒಂದು ದಿನ ಪಾರ್ವತಿ ದೇವಿಯು ಕೈಲಾಸ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ