ಹುಬ್ಬಳ್ಳಿ: ಅವರೆಲ್ಲರೂ ನಾಡಿನ ವಿವಿಧ ಮಠಗಳ ಮಠಾಧೀಶರು. ಮತದಾನದ ಜಾಗೃತಿ ಕುರಿತು ಸಭೆ ನಡೆಸುವ ಸಂದರ್ಭದಲ್ಲಿ ನಡೆದ ಅದೊಂದು ಗಲಾಟೆ ಪಾಲಿಕೆಯ ಆವರಣವನ್ನೇ ಗದ್ದಲದ ಗೂಡನ್ನಾಗಿ ಮಾಡಿತು. ಪೊಲೀಸರ ಹಾಗೂ ಚುನಾವಣೆ ಅಧಿಕಾರಿಗಳ ವಿರುದ್ಧ ಮಠಾಧೀಶರು, ಆಕ್ರೋಶಗೊಂಡು ಹೋರಾಟ ನಡೆಸಿದ್ದಾರೆ.
ಚುನಾವಣಾಧಿಕಾರಿಗಳ ಪರವಾನಗಿ ಇಲ್ಲದೇ ಸಭೆ ನಡೆಸುವಂತಿಲ್ಲ. ಸಭೆ ಮೊಟಕುಗೊಳಿಸಿ ಎಂದು ಚುನಾವಣಾಧಿಕಾರಿ, ಪೊಲೀಸ್ ಅಧಿಕಾರಿಗಳು ತಡೆಯೊಡ್ಡಿದ್ದರಿಂದ ಶಿರಹಟ್ಟಿ ಫಕೀರೇಶ್ವರ ಮಠದ ದಿಂಗಾಲೇಶ್ವರ ಶ್ರೀ ಸೇರಿದಂತೆ ನಾಡಿನ ನೂರಾರು ಸ್ವಾಮಿಗಳು ಆಕ್ರೋಶ ವ್ಯಕ್ತಪಡಿಸಿ, ಕಿತ್ತೂರು ಚೆನ್ನಮ್ಮ ವೃತ್ತದಲ್ಲಿ ಪ್ರತಿಭಟನೆ ನಡೆಸಿದ್ದು, ಬೃಹತ್ ಪ್ರತಿಭಟನೆ ಮೂಲಕ ಪಾಲಿಕೆಗೆ ಆಗಮಿಸಿ ಆಕ್ರೋಶ ವ್ಯಕ್ತಪಡಿಸಿದರು.

ದಿಂಗಾಲೇಶ್ವರ ಶ್ರೀಗಳು ಇಲ್ಲಿನ ವಿದ್ಯಾನಗರದ ರಂಭಾಪುರಿ ಕಲ್ಯಾಣ ಮಂಟಪದಲ್ಲಿ ಗುರು ವಿರಕ್ತ ಸಾಧು ಸನ್ಯಾಸಿಗಳ ಚಿಂತನ ಮಂಥನ ಸಭೆ ಆಯೋಜಿಸಿದ್ದರು. ಇದೆ ವೇಳೆ ಪೊಲೀಸ್ ಹಾಗೂ ಚುನಾವಣೆ ಅಧಿಕಾರಿಗಳು ಮಠಾಧೀಶರು ಜೊತೆಗೆ ವಾಗ್ವಾದ ನಡೆಸಿದ್ದಾರೆ. ಅಲ್ಲದೆ ಪಾಲಿಕೆಯ ಆವರಣದಲ್ಲಿಯೂ ಬಹುದೊಡ್ಡ ಗಲಾಟೆಯೇ ನಡೆದಿದೆ. ಇದೇ ವೇಳೆ ಪೊಲೀಸ್ ಅಧಿಕಾರಿಗಳು ಕ್ಷಮೆಯಾಚನೆ ಮಾಡುವಂತೆ ಮಠಾಧೀಶರು ಪಟ್ಟು ಹಿಡಿದ್ದು, ಪೊಲೀಸ್ ಕಮೀಷನರೇಟ್ ನ ಇಬ್ಬರು ಡಿಸಿಪಿಗಳು ಕ್ಷಮೆಯಾಚನೆ ಮಾಡಿದ್ದಾರೆ.
ಇನ್ನೂ ಚುನಾವಣಾ ಅಧಿಕಾರಿ ಹಾಗೂ ಪೊಲೀಸರು ಪರವಾನಿಗೆ ಪಡೆದಿಲ್ಲ. ಸಭೆ ನಡೆಸದಂತೆ ಹೇಳಿದಾಗ ಮಠಾಧೀಶರು ಇದನ್ನು ವಿರೋಧಿಸಿ ಕಿತ್ತೂರು ಚೆನ್ನಮ್ಮ ವೃತ್ತಕ್ಕೆ ಆಗಮಿಸಿ ಪ್ರತಿಭಟನೆ ನಡೆಸಿದ್ದು, ಮಠಾಧೀಶರ ಹೋರಾಟಕ್ಕೆ ಮಣಿದು ಪರವಾನಗಿ ನೀಡುವುದರ ಜೊತೆಗೆ ಕ್ಷಮೆಯಾಚನೆ ಮಾಡಿದ್ದಾರೆ.
Laxmi News 24×7