Breaking News

ಮಾಜಿ ಮಿನಿಸ್ಟರ್ ರೇವಣ್ಣ ವಿರುದ್ಧ ದಾಖಲಾಯ್ತು ಕಿಡ್ನ್ಯಾಪ್ ಕೇಸ್ !

Spread the love

ಹಾಸನ (Hassan) ಜಿಲ್ಲೆಯ ರಾಜಕಾರಣದಲ್ಲಿ ತಮ್ಮನ್ನು ಬಿಟ್ಟು ಬೇರೆ ಯಾರೂ ಇಲ್ಲ ಎನ್ನುವಂತಿದ್ದ ದೇವೇಗೌಡರ (Devegowda) ಕುಟುಂಬಕ್ಕೆ ಸಿಡಿಲು ಬಡಿದಿದೆ. ಹೆಚ್.ಡಿ ರೇವಣ್ಣ (HD Revanna) ಪುತ್ರ ಪ್ರಜ್ವಲ್ ರೇವಣ್ಣ (Prajwal revanna) ಅವರದ್ದು ಎನ್ನಲಾದ ವಿಡಿಯೋಗಳು ವೈರಲ್ (viral) ಆದ ಬಳಿಕ ಎಸ್‌ಐಟಿ ತನಿಖೆ ಶುರುವಾಗಿದೆ.

ಈ ನಡುವೆ ನಿರೀಕ್ಷಣಾ ಜಾಮೀನು ಕೋರಿ ರೇವಣ್ಣ ಜನಪ್ರತಿನಿಧಿಗಳ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದು, ಇಂದು ಕೋರ್ಟ್ (court) ತೀರ್ಪು ನೀಡುವ ಸಾಧ್ಯತೆ ಇದೆ. ಇದರ ನಡುವೆ ರೇವಣ್ಣಗೆ ಮತ್ತೊಂದು ಸಂಕಷ್ಟ ಎದುರಾಗಿದೆ. ಮೈಸೂರಿನ (mysuru) ಕೆ.ಆರ್ ನಗರದಲ್ಲಿ ಕಿಡ್ನ್ಯಾಪ್ ಕೇಸ್ ದಾಖಲಾಗಿದೆ.

ಗ ಪ್ರಜ್ವಲ್ ರೇವಣ್ಣ ವಿಡಿಯೋಗಳು ವೈರಲ್ ಆಗುತ್ತಿದ್ದಂತೆ ವಿಡಿಯೋದಲ್ಲಿರುವ ಮಹಿಳೆಯರನ್ನು ಸಂಪರ್ಕಿಸಿ ದೂರು ನೀಡದಂತೆ ತಡೆಯುವ ಯತ್ನ ನಡೆದಿದೆ ಅನ್ನೋದು ಮೇಲ್ನೋಟಕ್ಕೆ ಸಾಬೀತಾಗುತ್ತಿದೆ. ಮೈಸೂರು ಜಿಲ್ಲೆ ಕೆ.ಆರ್ ನಗರ (KR nagar) ಪೊಲೀಸ್ ಠಾಣೆಯಲ್ಲಿ ಮಹಿಳೆಯ ಪುತ್ರ 20 ವರ್ಷದ ರಾಜು (Raju) ಎಂಬಾತ ತನ್ನ ತಾಯಿ ನಾಪತ್ತೆಯಾಗಿದ್ದಾರೆ. ಹೆಚ್.ಡಿ ರೇವಣ್ಣ ಕರೆದುಕೊಂಡು ಬರಲು ತಿಳಿಸಿದ್ದಾರೆ ಎಂದು ಸತೀಶ್ ಬಾಬಣ್ಣ ಎಂಬುವರು ನನ್ನ ತಾಯಿಯನ್ನು ಕರೆದುಕೊಂಡು ಹೋದರು. ಆದರೆ ಇಲ್ಲೀವರೆಗೂ ಎಲ್ಲಿದ್ದಾರೆ ಎನ್ನುವುದೇ ತಿಳಿದಿಲ್ಲ. ಅದರ ಜೊತೆಗೆ ನನ್ನ ತಾಯಿಯ ವಿಡಿಯೋಗಳು ವೈರಲ್ ಆಗಿರುವ ಸಂಗತಿಯೂ ಗೊತ್ತಾಯ್ತು. ನನ್ನ ತಾಯಿ ಎಲ್ಲಿದ್ದಾರೆ ಎಂದು ಪತ್ತೆ ಮಾಡಿಕೊಡಿ ಎಂದು ಮನವಿ ಮಾಡಿದ್ದಾರೆ.

ಮಹಿಳೆ 2015 ರಿಂದ 6 ವರ್ಷಗಳ ಕಾಲ ಹೊಳೆನರಸೀಪುರದ ಹೆಚ್.ಡಿ ರೇವಣ್ಣ ಮನೆಯಲ್ಲಿ ಕೆಲಸ ಮಾಡಿಕೊಂಡಿದ್ದರು ಎನ್ನಲಾಗಿದ್ದು, ಕಳೆದ ಮೂರು ವರ್ಷದ ಹಿಂದೆ ರೇವಣ್ಣ ಮನೆಯಲ್ಲಿ ಕೆಲಸ ಬಿಟ್ಟು ಊರಿನಲ್ಲೇ ಕೂಲಿ ನಾಲಿ ಮಾಡಿಕೊಂಡು ಇದ್ದರಂತೆ. ಲೋಕಸಭಾ ಚುನಾವಣೆಗೆ ಮೂರ್ನಾಲ್ಕು ದಿನ ಇದ್ದಾಗ ಅಂದರೆ ಏಪ್ರಿಲ್ 22 ರಂದು ಭವಾನಿ (Bhavani) ಅಕ್ಕ ಕರೆಯುತ್ತಿದ್ದಾರೆ ಎಂದು ಹೇಳಿ ಮಹಿಳೆಯನ್ನು ಕರೆದುಕೊಂಡು ಹೋಗಿದ್ದ ಸತೀಶ್ ಬಾಬಣ್ಣ, ಚುನಾವಣಾ ದಿನ ಬೆಳಗ್ಗೆ ವಾಪಸ್ ಕರೆದುಕೊಂಡು ಬಂದು ಬಿಟ್ಟಿದ್ದರಂತೆ. ಈ ವೇಳೆ ಪೊಲೀಸಿನವರು ಬಂದರೆ ಏನೂ ಹೇಳಬೇಡಿ, ಪೊಲೀಸರಿಗೆ ಸಿಗಲೇಬೇಡಿ ಎಂದು ಹೇಳಿದ್ದರಂತೆ. ಅದಾಗಿಯೂ ಮತ್ತೆ ಏಪ್ರಿಲ್ 29ರ ರಾತ್ರಿ 9 ಗಂಟೆಗೆ ಬಂದ ಸತೀಶ್ ಬಾಬಣ್ಣ, ನಿಮ್ಮ ತಾಯಿ ವಿರುದ್ಧ ದೂರು ದಾಖಲಾಗಿದೆ. ರೇವಣ್ಣ ಸಾಹೇಬರು ಕರೆದುಕೊಂಡು ಬರುವುದಕ್ಕೆ ತಿಳಿಸಿದ್ದಾರೆ ಎಂದು ಹೇಳಿ ಒತ್ತಾಯಪೂರ್ವಕವಾಗಿ ಕರೆದುಕೊಂಡು ಹೋದರು. ಇಲ್ಲೀವರೆಗೂ ತಾಯಿ ಸಂಪರ್ಕ ಸಿಕ್ಕಿಲ್ಲ, ಈ ನಡುವೆ ಮೇ 1ರಂದು ನಮ್ಮೂರಿನ ಸ್ನೇಹಿತರು, ನಿಮ್ಮ ತಾಯಿ ವಿಡಿಯೋ ವೈರಲ್ ಆಗಿದೆ ಎಂದು ತಿಳಿಸಿದ್ರು, ನನ್ನ ಭಾವಂದಿರು ಕೂಡ ವಿಡಿಯೋ ಬಗ್ಗೆ ಮಾಹಿತಿ ಕೊಟ್ಟಿದ್ದಾರೆ ಎಂದಿದ್ದಾರೆ.


Spread the love

About Laxminews 24x7

Check Also

ಗಣೇಶ ಮೂರ್ತಿಗಳ ವಿಸರ್ಜನೆಗೆ ಸಚಿವ ಸತೀಶ ಜಾರಕಿಹೊಳಿ ಮಾರ್ಗದರ್ಶನದಲ್ಲಿ ಸೂಕ್ತ ವ್ಯವಸ್ಥೆ ಮಲಗೌಡಾ ಪಾಟೀಲ ಸೂಚನೆ …

Spread the love ಗಣೇಶ ಮೂರ್ತಿಗಳ ವಿಸರ್ಜನೆಗೆ ಅಳತಗಾ ಸೇತುವೆ ಸಿದ್ಧತೆಗೆ ಅಗತ್ಯ ಕ್ರಮಕ್ಕೆ ಕೆಪಿಸಿಸಿ ಸದಸ್ಯ ಮಲಗೌಡಾ ಪಾಟೀಲ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ