Breaking News

ಜಿಹಾದಿ ಪ್ರಕರಣಗಳನ್ನು ಸಿಬಿಐ ತನಿಖೆಗೆ ವಹಿಸಿ

Spread the love

ದಾವಣಗೆರೆ: ‘ವಿದ್ಯಾರ್ಥಿನಿ ನೇಹಾ ಹತ್ಯೆ ಪ್ರಕರಣ ಸೇರಿದಂತೆ ರಾಜ್ಯದಲ್ಲಿ ನಡೆದಿರುವ ಜಿಹಾದಿ ಪ್ರಕರಣಗಳನ್ನು ಸಿಬಿಐ ತನಿಖೆಗೆ ವಹಿಸಬೇಕು’ ಎಂದು ಶಾಸಕ ಅರವಿಂದ್ ಬೆಲ್ಲದ್ ಆಗ್ರಹಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿ, ‘ನೇಹಾ ಹತ್ಯೆ ಕೊಲೆ ಮಾಡಿರುವುದನ್ನು ನೋಡಿದರೆ ಜಿಹಾದಿ ಮನಸ್ಥಿತಿ ಹೊಂದಿರುವರಿಂದಲೇ ಇದು ಸಾಧ್ಯ ಹಿಂದೂ ಯುವತಿಯರ ಜೊತೆ ಪೋಟೋ ತೆಗೆಸಿಕೊಂಡು ಬ್ಲಾಕ್ ಮೇಲ್ ಮಾಡುವುದು ಮತಾಂತರ ಆಗುವಂತೆ ಹೆದರಿಸುವುದು ಒಪ್ಪದೇ ಇದ್ದಾಗ ಕೊಲೆ‌ ಮಾಡುವುದು ಈ ರೀತಿ ಕೊಲೆ ಮಾಡುವ ಜಿಹಾದಿಗಳಿಗೆ ಟ್ರೈನಿಂಗ್ ಕೊಡುತ್ತಿದ್ದಾರೆ’ ಎಂದು ಆರೋಪಿಸಿದರು.

ನೇಹಾ ಹತ್ಯೆಯ ಪ್ರಕರಣವನ್ನು ಸಿಒಡಿಗೆ ಒಪ್ಪಿಸಿದ್ದು, ಸಿಒಡಿ ಮೇಲೆ ನಮಗೆ ನಂಬಿಕೆ ಇಲ್ಲ. ಪೊಲೀಸ್ ಇಲಾಖೆಯಲ್ಲಿ ಬೇಡವಾದವರನ್ನು ಸಿಒಡಿಗೆ ಹಾಕಿರುತ್ತಾರೆ. ಅಂತವರು ತನಿಖೆ ಮಾಡೋದನ್ನು ನಾವು ಒಪ್ಪುವುದಿಲ್ಲ. ನ್ಯಾಯವನ್ನು ನಿರೀಕ್ಷೆ ಮಾಡೋದಿಲ್ಲ. ಸಿಬಿಐ ಸೇರಿದಂತೆ ವಿವಿಧ ಅತ್ಯುನ್ನತ ತನಿಖಾ ಸಂಸ್ಥೆಗಳಿಗೆ ನೀಡಲಿ’ ಎಂದರು.

‘ಮುಸ್ಲಿಮರು ಏನು ಮಾಡಿದ್ರು ಅದನ್ನು ಮಾಫಿ ಮಾಡ್ತಾರೆ. ರಾಮ‌ನಗರ ಶಾಸಕ ಮುಸ್ಲಿಂ ಅಲ್ವಾ ಅದು ಕೂಡ ಮಾಫಿ ಮಾಡ್ತಾರೆ. ಇಷ್ಟಾದರೂ ಏಕೆ ಅವರ ಮೇಲೆ ಕ್ರಮ ತೆಗೆದುಕೊಂಡಿಲ್ಲ. ಸಿದ್ದರಾಮಯ್ಯ ಅವರಿಗೆ ಗಂಡಸ್ಥನ ಇದ್ದಾರೆ ಕ್ರಮ ತೆಗೆದುಕೊಳ್ಳಲಿ’ ಎಂದು ಹೇಳಿದರು.

‘ಪ್ರಜ್ವಲ್ ಪ್ರಕರಣದಲ್ಲಿ ಬಿಜೆಪಿ, ಕಾಂಗ್ರೆಸ್ ಎಂದು ಬರುವುದಿಲ್ಲ. ಇದು ಮಹಿಳೆಯರ ಮರ್ಯಾದೆ ಪ್ರಶ್ನೆ, ಸ್ವತಃ ಅಮಿತ್ ಶಾ ಅವರೇ ತನಿಖೆ ನಡೆಸುವಂತೆ ಹೇಳಿದ್ದಾರೆ. ಏಕೆ ತನಿಖೆ ವಿಳಂಬ ಮಾಡಿದ್ಸಾರೆ ಎಂದು ಜನರಿಗೆ ಉತ್ತರ ಕೊಡಬೇಕು’ ಎಂದು ಹೇಳಿದರು.


Spread the love

About Laxminews 24x7

Check Also

ಗಣೇಶ ಜನ್ಮ ಕಥೆ, ಸಂಕೇತಗಳ ಅರ್ಥ ಮತ್ತು ಆಚರಣೆ

Spread the love ಗಣೇಶ ಜನ್ಮ ಕಥೆ, ಸಂಕೇತಗಳ ಅರ್ಥ ಮತ್ತು ಆಚರಣೆ ಒಂದು ದಿನ ಪಾರ್ವತಿ ದೇವಿಯು ಕೈಲಾಸ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ