ಲೈಂಗಿಕ ಕಿರುಕುಳದ ಆರೋಪ ಕೇಳಿಬಂದಿರುವ ಪ್ರಕರಣಕ್ಕೆ ಸಂಬಂಧಪಟ್ಟಂತೆ 24 ಗಂಟೆಯೊಳಗೆ ವಿಚಾರಣೆಗೆ ಹಾಜರಾಗುವಂತೆ ಪ್ರಜ್ವಲ್ ರೇವಣ್ಣಗೆ SIT ನೋಟೀಸ್ ಜಾರಿ ಮಾಡಿದೆ. ಒಂದುವೇಳೆ ವಿಚಾರಣೆಗೆ ಹಾಜರ್ ಆಗದಿದ್ದರೆ ಮುಂದೇನು ಎಂಬ ಪ್ರಶ್ನೆಯೂ ಮೂಡಿದೆ.
CRPC 41A ರ ಅಡಿ SIT ಅಧಿಕಾರಿಗಳು ರೇವಣ್ಣ ಮತ್ತು ಪ್ರಜ್ವಲ್ ರೇವಣ್ಣ ಗೆ ತಮ್ಮ ಮೇಲೆ ಕೇಳಿಬಂದಿರುವ ಆರೋಪಕ್ಕೆ ಸಂಬಂಧಪಟ್ಟಂತೆ ವಿಚಾರಣೆ ಹಾಜರ್ ಆಗಬೇಕಾಗಿ ನೋಟೀಸ್ ನೀಡಿದೆ.ಸದ್ಯ ರೇವಣ್ಣ ಹಾಸನದಲ್ಲೇ ಇದ್ದು ವಿಚಾರಣೆಗೆ ಹಾಜರ್ ಆಗ್ತಾರ ಕಾದುನೋಡಬೇಕಿದೆ.
ಆದ್ರೆ ಈಗಾಗಲೇ ಎಫ್.ಐ.ಆರ್ ಕೂಡ ದಾಖಲಾಗಿದ್ದು ಸದ್ಯ ಪ್ರಜ್ವಲ್ ರೇವಣ್ಣ ಎಲ್ಲಿದ್ದಾರೆ ಎಂಬುದೇ ಯಕ್ಷ ಪ್ರಶ್ನೆಯಾಗಿದೆ. ಮೂಲಗಳ ಪ್ರಕಾರ ಪ್ರಜ್ವಲ್ ಜರ್ಮನಿಗೆ ತೆರಳಿದ್ದಾರೆ ಎಂದು ಹೇಳಲಾಗ್ತಿದ್ದು , ವಿಚಾರಣೆಗೆ ಹಾಜರ್ ಆಗ್ತಾರ, ಇಲ್ವಾ ಎಂಬುದು ಕುತೂಹಲಕ್ಕೆ ಕಾರಣವಾಗಿದೆ.
Laxmi News 24×7