Breaking News

ಗೀತಾ ಗ್ರಾಮ ಪಂಚಾಯತ್ ಚುನಾವಣೆಯಲ್ಲೂ ಗೆಲ್ಲಲ್ಲ! ಸಹೋದರಿ ಬಗ್ಗೆ ಕುಮಾರ್ ಬಂಗಾರಪ್ಪ ವ್ಯಂಗ್ಯ

Spread the love

ಶಿವಮೊಗ್ಗ: ಮಲೆನಾಡು ಶಿವಮೊಗ್ಗದಲ್ಲಿ (Shivamogga) ಲೋಕಸಭಾ ಚುನಾವಣಾ (Lok Sabha Election) ಕಾವು ಏರುತ್ತಿದೆ. ಚುನಾವಣೆ ಹತ್ತಿರ ಬರುತ್ತಿದ್ದಂತೆ ಆರೋಪ ಪ್ರತ್ಯಾರೋಪ ಜೋರಾಗುತ್ತಿದೆ. ಮಾಜಿ ಮುಖ್ಯಮಂತ್ರಿ ದಿ. ಬಂಗಾರಪ್ಪ (Bangarappa) ಅವರ ಪುತ್ರಿ ಗೀತಾ ಶಿವರಾಜ್‌ಕುಮಾರ್ (Geetha Shivarajkumar) ಹಾಗೂ ಮಾಜಿ ಸಿಎಂ ಬಿಎಸ್‌ ಯಡಿಯೂರಪ್ಪ (BS Yediyurappa) ಪುತ್ರ ಬಿವೈ ರಾಘವೇಂದ್ರ (BY Raghavendra) ಜೊತೆ ಮಾಜಿ ಡಿಸಿಎಂ ಕೆಎಸ್ ಈಶ್ವರಪ್ಪ (KS Eshwarappa) ಕೂಡ ಕಣದಲ್ಲಿದ್ದಾರೆ.ಇದೀಗ ಗೀತಾ ಶಿವರಾಜ್‌ಕುಮಾರ್ ವಿರುದ್ಧ ಅವರ ಸಹೋದರ ಕುಮಾರ್ ಬಂಗಾರಪ್ಪ (Kumar Bangarappa) ಗುಡುಗಿದ್ದಾರೆ.

 

ಗ್ರಾಮ ಪಂಚಾಯ್ತಿ ಚುನಾವಣೆಗೆ ನಿಂತ್ರೂ ಗೀತಾ ಗೆಲ್ಲಲ್ಲ

ಹೀಗಂತ ಗೀತಾ ಶಿವರಾಜ್ ಕುಮಾರ್ ಸಹೋದರ ಕುಮಾರ ಬಂಗಾರಪ್ಪ ಟೀಕಿಸಿದ್ದಾರೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಕಾರ್ಯಕ್ರಮದಲ್ಲಿ ಭಾಷಣ ಮಾಡಿದ ಕುಮಾರ ಬಂಗಾರಪ್ಪ, ಗೀತಾ ಗ್ರಾಮ ಪಂಚಾಯ್ತಿ ಚುನಾವಣೆಗೆ ನಿಂತ್ರೂ ಗೆಲ್ಲಲ್ಲ ಅಂತ ವ್ಯಂಗ್ಯವಾಡಿದರು.

ಡಾ. ರಾಜ್‌ಕುಮಾರ್‌ಗೆ ರಾಜಕೀಯದ ಆಸೆ ಇರಲಿಲ್ಲ

ಹಿಂದೆ ಡಿಕೆ ಶಿವಕುಮಾರ್ ಅವರು ರುದ್ರ ತಾಂಡವ ಮಾಡಿದ್ದರು. ಈಗ ತಾಂಡವ ಮಾಡುತ್ತಿದ್ದಾರೆ. ನಾಲಿಗೆಗೆ ಕಪ್ಪು ಬಣ್ಣ ಹಚ್ಚಿಕೊಂಡು ಬಂದಿದ್ದಾರೆ ಅಂತ ಡಿಸಿಎಂ ವಿರುದ್ಧ ಕುಮಾರ್ ಬಂಗಾರಪ್ಪ ಆಕ್ರೋಶ ವ್ಯಕ್ತಪಡಿಸಿದರು. ಡಾ. ರಾಜಕುಮಾರ್‌ರವರಿಗೆ ರಾಜಕೀಯದ‌ ಮೇಲೆ ಆಸೆ ಇತ್ತು. ಅದಕ್ಕೆ ಅವರ ಸೊಸೆಯನ್ನು ನಾವು ರಾಜಕೀಯಕ್ಕೆ ತಂದಿದ್ದೇವೆ ಎಂದು ಸುಳ್ಳು ಹೇಳುತ್ತಿದ್ದಾರೆ. ಡಾ. ರಾಜ್‌ಕುಮಾರ್ ಅವರಿಗೆ ಈ ರೀತಿಯ ಆಸೆ ಇರಲಿಲ್ಲ ಅಂತ ಕುಮಾರ್ ಬಂಗಾರಪ್ಪ ಹೇಳಿದ್ದಾರೆ.

ಚುನಾವಣೆಗೆ ನಿಂತವರ ಮತವೇ ಇಲ್ಲಿ ಇಲ್ಲ!

ಕಾಂಗ್ರೆಸ್ ಅವರು ತಂದಿದ್ದು ಬರಗಾಲ. ಚುನಾವಣೆಗೆ ನಿಲ್ಲುವವರ ಮತವೇ ಇಲ್ಲಿ ಇಲ್ಲ‌. ಚುನಾವಣೆಗೆ ನಿಲ್ಲಬೇಕು ಎಂದು ಗೊತ್ತಿತ್ತು ಅಲ್ವಾ? ಆಗಲಾದರೂ ಸಹ ತಮ್ಮ‌ ಮತವನ್ನು ಬದಲಾಯಿಸಲಿಲ್ಲ. ಈಗ ಅವರ ಮತ ಇಲ್ಲಿ ಇಲ್ಲ, ಇನ್ನೂ ನಮ್ಮ ಮತ ಹೇಗೆ ಬರುತ್ತದೆ ಅಂತ ಕುಮಾರ್ ಬಂಗಾರಪ್ಪ ವ್ಯಂಗ್ಯವಾಗಿ ಪ್ರಶ್ನಿಸಿದ್ರು.

ಇನ್ನೂ 5 ಚುನಾವಣೆಗೆ ನಿಂತ್ರೂ ಗೆಲ್ಲಲ್ಲ

ಗೀತಾರವರು ಇನ್ನೂ ಐದು ಚುನಾವಣೆ ನಡೆಸಿದರು ಸಹ ಅವರು ಗೆಲ್ಲೋದಿಲ್ಲ. ಅವರು ಗ್ರಾಮ ಪಂಚಾಯತ್ ಚುನಾವಣೆಯಿಂದ ಬರಬೇಕಿದೆ ಅಂತ ಹೇಳಿದ್ರು. ಇನ್ನು ಈಗ ಯಾರೋ ಮೈಕ್ ಹಾಕಿಕೊಂಡು ಬಂದಿದ್ದಾರೆ. ಅವರ ಬಗ್ಗೆ ನಾನು ಮಾತನಾಡುವುದಿಲ್ಲ, ನಾವ್ಯಾರೂ ಸಹ ಬೇರೆ ಕಡೆ ಹೋಗಿಲ್ಲ ಅಂತ ಈಶ್ವರಪ್ಪ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿದ್ರು.

ಮಧು ಬಂಗಾರಪ್ಪ ವಿರುದ್ಧ ಆಕ್ರೋಶ

ಪ್ರಾಥಮಿಕ ಸಚಿವರಿಗೆ ಮತ್ತೆ ಪ್ರಾಥಮಿಕ ಶಾಲೆಗೆ ಕಳುಹಿಸುವ ಕಾಲ ಬರುತ್ತಿದೆ ಅಂತ ಸಹೋದರ ಮಧು ಬಂಗಾರಪ್ಪಗೆ ಕುಮಾರ್ ಬಂಗಾರಪ್ಪ ಪರೋಕ್ಷವಾಗಿ ಟಾಂಗ್ ಕೊಟ್ರು. ಮಧು ಬಂಗಾರಪ್ಪನವರು, ನಮ್ಮ ತಂದೆಯನ್ನು ಆ ಪಕ್ಷ ಈ ಪಕ್ಷ ಅಂತ ಕೊನೆಗೆ ಅತಂತ್ರವಾಗಿ ತಂದು ನಿಲ್ಲಿಸಿದರು ಅಂತ ಆರೋಪಿಸಿದ್ರು.

ಎಲ್ಲಾ ಪಕ್ಷಗಳನ್ನು ಮುಳುಗಿಸುತ್ತಾರೆ

ಸಮಾಜವಾದಿ ಪಕ್ಷ, ಜೆಡಿಎಸ್ ಮುಗಿಸಿ ಈಗ ಕಾಂಗ್ರೆಸ್ ಪಕ್ಷ ಮುಳುಗಿಸುತ್ತಾರೆ. ಮಧು ಬಂಗಾರಪ್ಪ ಜೆಡಿಎಸ್ ಸೇರಿದಂತೆ ಎರಡು ಪಕ್ಷಗಳಲ್ಲಿ ಚುನಾವಣೆಯಲ್ಲಿ ನಿಂತು, ಈಗ ಕಾಂಗ್ರೆಸ್‌ಲಿ ಇದ್ದಾರೆ ಅಂತ ವ್ಯಂಗ್ಯವಾಡಿದ್ರು. ಬಿಜೆಪಿ 400 ಪಾರ್‌ರಲ್ಲಿ ಶಿವಮೊಗ್ಗವು ಸಹ ಇರುತ್ತದೆ ಅಂತ ವಿಶ್ವಾಸ ವ್ಯಕ್ತಪಡಿಸಿದರು.

ಕಮಲಕ್ಕೆ ಮತ ನೀಡಿ ಎಂದು ಕುಮಾರ್

ಕಾಂಗ್ರೆಸ್ ಈಗ ರಾಷ್ಟ್ರೀಯ ಪಕ್ಷವಾಗಿ ಉಳಿದಿಲ್ಲ, ಅದು ಒಂದು ರೀತಿ ಪ್ರಾದೇಶಿಕ ಪಾರ್ಟಿ ಆಗಿದೆ. ಲೋಕಸಭೆ ಚುನಾವಣೆಯ ನಂತರ ರಾಜಕೀಯ ಅಲ್ಲೋಲ ಕಲ್ಲೋಲ ಆಗುವುದರಲ್ಲಿ ಅನುಮಾನವಿಲ್ಲ. ಅಹಂಕಾರಕ್ಕೆ ಮದ್ದನ್ನು ನೀಡಲು ಕಮಲಕ್ಕೆ ಮತ ನೀಡಿ ಅಂತ ಮನವಿ ಮಾಡಿದ್ರು.

ಕೇಂದ್ರದ ಯೋಜನೆ ತಲುಪಿದ್ರೆ ವೋಟ್ ಕೊಡಿ

ನಮ್ಮ ಚುನಾವಣೆಯಲ್ಲಿ ನಡೆದ ಏರುಪೇರಿನಿಂದ ಗ್ಯಾರಂಟಿಯಿಂದ ಚುನಾವಣೆ ನಡೆದಿದೆ. ಮೋದಿರವರು ದೇಶದ ಜನತೆಗೆ ವಿಶ್ವಾಸವನ್ನು ನೀಡಿದ್ದಾರೆ. ಇದರಿಂದ ಎಲ್ಲರೂ ಕಮಲದ ಚಿಹ್ನೆಗೆ ಮತ ನೀಡಬೇಕಿದೆ. ಸೊರಬ, ಸಾಗರ ಹಾಗೂ ಗ್ರಾಮಾಂತರದಲ್ಲಿ ಜನ ಜಾರಿಸಿದ್ದಾರೆ‌. ಇಂತಹ ಜನರನ್ನು ಬೀಳಿಸಿದ್ದೆವೆ ಎಂದು ಈಗ ಅಂದು ಕೊಳ್ಳುತ್ತಿದ್ದಾರೆ. ಕೇಂದ್ರ ಸರ್ಕಾರ ನೀಡಿದ ಅನೇಕ ಯೋಜನೆಯನ್ನು ಜನರಿಗೆ ತಲುಪಿಸಿದೆ ಎಂದಾದರೆ ಬಿಜೆಪಿಗೆ ಮತ ನೀಡಿ ಅಂತ ಕುಮಾರ್ ಬಂಗಾರಪ್ಪ ಮನವಿ ಮಾಡಿದರು.


Spread the love

About Laxminews 24x7

Check Also

ಗಣೇಶ ಜನ್ಮ ಕಥೆ, ಸಂಕೇತಗಳ ಅರ್ಥ ಮತ್ತು ಆಚರಣೆ

Spread the love ಗಣೇಶ ಜನ್ಮ ಕಥೆ, ಸಂಕೇತಗಳ ಅರ್ಥ ಮತ್ತು ಆಚರಣೆ ಒಂದು ದಿನ ಪಾರ್ವತಿ ದೇವಿಯು ಕೈಲಾಸ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ