Breaking News

ಅಶ್ಲೀಲ ವಿಡಿಯೋ ಪ್ರಕರಣಕ್ಕೆ ಹೊಸ ಟ್ವಿಸ್ಟ್‌.! ಎಲ್ಲರಿಗಿಂತ ಮೊದಲೇ ಡಿಕೆ ಬ್ರದರ್ಸ್‌ʼಗೆ ತಲುಪಿತ್ತಂತೆ.!?

Spread the love

ಹಾಸನ : ರಾಜ್ಯದಲ್ಲಿ ಭಾರೀ ಸಂಚಲನ ಮೂಡಿಸಿರುವ ಹಾಸನದ ಹಾಲೀ ಸಂಸದ ಪ್ರಜ್ವಲ್ ರೇವಣ್ಣ ಅವರ ಅಶ್ಲೀಲ ಸಿಡಿ ಊರೆಲ್ಲಾ ಹರಡುವ ಮುನ್ನ ಮೊದಲು ಯಾರ ಕೈಗೆ ಸೇರಿತ್ತು? ಈ ರೀತಿಯ ರಾಜಕೀಯ ಬಿರುಗಾಳಿ ಚುನಾವಣೆ ವೇಳೆ ಜೋರಾಗಿ ಬೀಸಲಿದೆ ಎನ್ನುವ ಮಾಹಿತಿ ಕೆಲವು ಸಚಿವರಿಗೆ, ಸಂಸದರಿಗೆ ಮೊದಲೇ ಇತ್ತೇ?

ಈ ವಿಚಾರದ ಬಗ್ಗೆ ಮಾತನಾಡಿರುವ ವಕೀಲ ದೇವರಾಜೇ ಗೌಡ, ಎಲ್ಲರಿಗಿಂತ ಮೊದಲು ಈ ವಿಡಿಯೋ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮತ್ತು ಬೆಂಗಳೂರು ಗ್ರಾಮಾಂತರ ಸಂಸದ ಡಿ.ಕೆ.ಸುರೇಶ್ ಅವರ ಕೈಸೇರಿಯಾಗಿತ್ತು ಎಂದು ಹೇಳಿದ್ದಾರೆ

” ಪ್ರಜ್ವಲ್ ರೇವಣ್ಣನವರು ನೀಲಿ ಚಿತ್ರವಿರುವ ಪೆನ್ ಡ್ರೈವ್ ಪ್ರಸಾರದ ಮೇಲೆ ಬೆಂಗಳೂರಿನಲ್ಲಿ ಸ್ಟೇ ಆರ್ಡರ್ ತಂದಿದ್ದರು. ಇದಕ್ಕೆ ಪ್ರತಿವಾದಿಗಳು ಎಲ್ಲಾ ಮಾಧ್ಯಮವರಾಗಿದ್ದರು ಮತ್ತು ಪರ್ಮನೆಂಟ್ ಇಂಜಕ್ಷನ್ ಕೂಡಾ ತೆಗೆದುಕೊಂಡಿದ್ದರು. 82ನೇ ಪ್ರತಿವಾದಿಯಾಗಿ ಕಾರ್ತಿಕ್ ಎನ್ನುವವರನ್ನೂ ಮಾಡಿದ್ದರು ” ಎಂದು ದೇವರಾಜೇ ಗೌಡ ಹೇಳಿದ್ದಾರೆ. ಕಾರ್ತಿಕ್ ಎನ್ನುವ ವ್ಯಕ್ತಿ ವಕಾಲತ್ ಹಾಕಲು ನನ್ನ ಬಳಿ ಬಂದಿದ್ದ, ವಿಡಿಯೋ ಸಿಡಿ ಬಗ್ಗೆ ಪ್ರಜ್ವಲ್ ರೇವಣ್ಣ ಸ್ಟೇ ತಂದಿದ್ದಾರೆ ಇದಕ್ಕೆ ನಾನು ತಕರಾರು ಅರ್ಜಿ ಸಲ್ಲಿಸಬೇಕು ಎಂದು ಹೇಳಿದ. ಸುಮ್ಮನೆ ತಕರಾರು ಹಾಕಲು ಸಾಧ್ಯವಿಲ್ಲ, ಸಿಡಿಯಲ್ಲಿ ಏನಿದೆ ನೋಡೋಣ ಎಂದಾಗ ಕಾರ್ತಿಕ ಪೆನ್ ಡ್ರೈವ್ ತೆಗೆದುಕೊಂಡು ಬಂದ, ನಾವು ಅದನ್ನು ವೀಕ್ಷಿಸಿದೆವು.


Spread the love

About Laxminews 24x7

Check Also

ಬೀದರ್-ಹುಮನಾಬಾದ್ ಹೆದ್ದಾರಿಯಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತಲ್ಲಿ ನಾಲ್ವರು ಮೃತಪಟ್ಟಿದ್ದಾರೆ.

Spread the loveಬೀದರ್: ಕಾರು ಹಾಗೂ ಗೂಡ್ಸ್ ವಾಹನದ ಮಧ್ಯೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ನಾಲ್ವರು ಮೃತಪಟ್ಟ ದಾರುಣ ಘಟನೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ