ನವದೆಹಲಿ: ಗುಜರಾತ್‌ನ ಪಾನಿ ಪುರಿ ಮಾರಾಟಗಾರ ಅನಿಲ್ ಭಾಯಿ ಠಕ್ಕರ್ ಅವರು ಪ್ರಧಾನಿ ನರೇಂದ್ರ ಮೋದಿಯವರನ್ನು ಹೋಲುವ ಹಾಗೆ ಇದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಕೆಲವು ವಿಡಿಯೋಗಳು ವೈರಲ್ ಆಗುವ ಮೂಲಕ ಗಮನ ಸೆಳೆದಿದ್ದಾರೆ.
ಗುಜರಾತಿನ ಆನಂದ್‌ನಲ್ಲಿ ತುಳಸಿ ಪಾನಿಪುರಿ ಅಂಗಡಿ ಮಾಲೀಕ 71 ವರ್ಷದ ಅನಿಲ್ ಭಟ್ ಠಕ್ಕರ್ ಅವರು ನೋಡಲು ಪ್ರಧಾನಿ ಮೋದಿ ಅವರಂತೆ ಕಾಣುತ್ತಿದ್ದಾರೆ.
ಠಕ್ಕರ್ ಮಾತನಾಡಿ, ‘ನಾನು ನೋಡಲು ಮೋದಿ ಅವರಂತೆ ಕಾಣುತ್ತಿರುವುದರಿಂದ ನಮ್ಮ ಅಂಗಡಿಗೆ ಬರುವ ಗ್ರಾಹಕರಿಂದ ಸಾಕಷ್ಟು ಪ್ರೀತಿ ಮತ್ತು ಗೌರವದಿಂದ ಕಾಣುತ್ತಿದ್ದಾರೆ. ನನ್ನೊಂದಿಗೆ ಪ್ರವಾಸಿಗರು ಸೆಲ್ಫೀ ಕೂಡ ತೆಗೆಸಿಕೊಳ್ಳುತ್ತಾರೆ’ ಎಂದು ಹೇಳಿದರು.

ಇತ್ತೀಚೆಗೆ ಕಾರ್ಯಕ್ರಮವೊಂದರಲ್ಲಿ ಗರ್ಬಾ ನುಡಿಸಿದ್ದರು. ಈ ವಿಡಿಯೋ ವೈರಲ್ ಆಗಿದ್ದು, ಮೋದಿ ಅವರ ಡೀಪ್‌ಫೇಕ್ ವಿಡಿಯೋ ಎಂದು ತಪ್ಪಾಗಿ ಗ್ರಹಿಸಲಾಗಿತ್ತು. ಮಹಾಂತೇ ಅವರದ್ದೇ ಆದ ಅಭಿಮಾನಿ ಬಳಗವನ್ನು ಹೊಂದಿದ್ದಾರೆ.
ಕೆಲ ಸಮಯಗಳ ಹಿಂದೆ ಹಂಚಿಕೊಳ್ಳಲಾದ ಈ ವಿಡಿಯೋ 37.1 ಮಿಲಿಯನ್ ವೀಕ್ಷಣೆಗಳನ್ನು ಹಾಗೂ 1.5 ಮಿಲಿಯನ್ ಲೈಕ್ಸ್ ಗಳನ್ನು ಪಡೆದುಕೊಂಡಿದ್ದು, ನೆಟ್ಟಿಗರು ಮೆಚ್ಚುಗೆಯನ್ನು ಸೂಚಿಸಿದ್ದಾರೆ.
Laxmi News 24×7