Breaking News

ಮದುವೆ ಆಹ್ವಾನ ಪತ್ರಿಕೆಯಲ್ಲಿ ಮೋದಿ ಗೆಲ್ಲಿಸುವಂತೆ ಮುದ್ರಿಸಿದಕ್ಕೆ ಕೇಸ್ ದಾಖಲು

Spread the love

ಪ್ಪಿನಂಗಡಿ: ಚುನಾವಣೆ ನೀತಿ ಸಂಹಿತೆ ಜಾರಿಯಾಗುವ ಮೊದಲೇ ಮುದ್ರಿತವಾದ ಮದುವೆ ಆಮಂತ್ರಣ ಪತ್ರಿಕೆಯಲ್ಲಿ “ಈ ಬಾರಿಯೂ ಮೋದಿ ಅವರನ್ನು ಪ್ರಧಾನಿ ಮಾಡುವುದೇ ವಧು-ವರರಿಗೆ ನೀಡುವ ಉಡುಗೊರೆ” ಎಂದು ಮುದ್ರಿಸಿದ ವರನ ವಿರುದ್ಧ ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ ಪೊಲೀಸರು ಕೇಸು ದಾಖಲಿಸಿದ್ದಾರೆ.ಶಿವಪ್ರಸಾದ್ ಎಂಬುವವರ ಮದುವೆ ಏಪ್ರಿಲ್ 18ರಂದು ನೆರವೇರಿದೆ. ಮಾರ್ಚ್ 1ರಂದು ಮದುವೆಯ ಆಮಂತ್ರಣ ಪತ್ರ ಮುದ್ರಿಸಲಾಗಿದ್ದು, ಈ ಬಗ್ಗೆ ಮಾಹಿತಿ ಪಡೆದುಕೊಂಡ ಚುನಾವಣಾ ನೀತಿ ಸಂಹಿತೆ ಜಾರಿ ನಿಗಾ ತಂಡದ ಅಧಿಕಾರಿಗಳು ಏಪ್ರಿಲ್ 14ರಂದು ವರನ ಮನೆಗೆ ಭೇಟಿ ನೀಡಿ ವಿಚಾರಿಸಿದ್ದಾರೆ.

ಇದು ನೀತಿ ಸಂಹಿತೆ ಉಲ್ಲಂಘನೆ ಅಲ್ಲ, ಮೋದಿಯವರ ಮೇಲಿನ ಪ್ರೀತಿ ಮತ್ತು ದೇಶದ ಮೇಲಿನ ಕಾಳಜಿಯಿಂದ ಈ ರೀತಿ ಮುದ್ರಿಸಿರುವುದಾಗಿ ಶಿವಪ್ರಸಾದ್ ಲಿಖಿತ ಹೇಳಿಕೆ ನೀಡಿದ್ದಾರೆ. ಮತದಾನದ ನಂತರ ಅಧಿಕಾರಿಗಳು ಈ ಬಗ್ಗೆ ದೂರು ದಾಖಲಿಸಿದ್ದು, ಶನಿವಾರ ಆಮಂತ್ರಣ ಪತ್ರಿಕೆ ಮುದ್ರಣ ಮಾಡಿದವರನ್ನು ಕೂಡ ಕರೆಸಿ ವಿಚಾರಿಸಲಾಗಿದೆ.


Spread the love

About Laxminews 24x7

Check Also

ನೇಕಾರರ ಸಮಗ್ರ ಅಭಿವೃದ್ಧಿಗೆ ಬದ್ಧ: ಸಚಿವ ಸತೀಶ್‌ ಜಾರಕಿಹೊಳಿ

Spread the love ನೇಕಾರರ ಸಮಗ್ರ ಅಭಿವೃದ್ಧಿಗೆ ಬದ್ಧ: ಸಚಿವ ಸತೀಶ್‌ ಜಾರಕಿಹೊಳಿ ಯಮಕಮರಡಿ: ನೇಕಾರರ ಸಮಗ್ರ ಅಭಿವೃದ್ಧಿಗೆ ಸರ್ಕಾರ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ