Home / Uncategorized / ಬಾಲ್ಯ ವಿವಾಹಕ್ಕೆ ಬ್ರೇಕ್; ಪೋಷಕರ ಮನವೊಲಿಸಿ ಬಾಲಕಿಯ ರಕ್ಷಣೆ!

ಬಾಲ್ಯ ವಿವಾಹಕ್ಕೆ ಬ್ರೇಕ್; ಪೋಷಕರ ಮನವೊಲಿಸಿ ಬಾಲಕಿಯ ರಕ್ಷಣೆ!

Spread the love

ಗದಗ, : ಬಾಲ್ಯ ವಿವಾಹ ಅಪರಾಧ ಎಂದುನಿರಂತರ ಜಾಗೃತಿಮಾಡಲಾಗುತ್ತಿದೆ. ಆದ್ರೆ, ಇನ್ನು ಬಾಲ್ಯ ವಿವಾಹ ಎನ್ನುವ ಅನಿಷ್ಠ ಪದ್ಧತಿ ಮಾತ್ರ ನಿಲ್ಲುತ್ತಿಲ್ಲ. ಕಾನೂನು ಹಾಗೂ ಅಧಿಕಾರಿಗಳ ಕಣ್ಣು ತಪ್ಪಿಸಿ ಬಾಲ್ಯ ವಿವಾಹ(child marriage) ನಡೆಯುತ್ತಿವೆ. ಹೌದು,ಗದಗ: ಬಾಲ್ಯ ವಿವಾಹಕ್ಕೆ ಬ್ರೇಕ್; ಪೋಷಕರ ಮನವೊಲಿಸಿ ಬಾಲಕಿಯ ರಕ್ಷಣೆ!

ಇಂದು(ಏ.26) ಗದಗದಲ್ಲಿ(Gadag) ನಡೀತಿದ್ದ ಬಾಲ್ಯ ವಿವಾಹವೊಂದಕ್ಕೆ ಅಧಿಕಾರಿಗಳು ಬ್ರೇಕ್ ಹಾಕಿದ್ದಾರೆ. ನಗರದ ಕರ್ನಾಟಕ ಭವನದಲ್ಲಿ ಗದಗ ತಾಲೂಕಿನ ಕೊಟುಮಚಗಿ ಗ್ರಾಮದ ಇಬ್ಬರು ಸಹೋದರರ ಮದುವೆ ನಿಶ್ಚಿಯ ಮಾಡಲಾಗಿತ್ತು. ಆದ್ರೆ, ಕಿರಿಯ ಸಹೋದರನ ಮದುವೆ ಆಗುತ್ತಿರುವ ಬಾಲಕಿಗೆ ಇನ್ನೂ 18 ವರ್ಷ ಆಗಿರಲಿಲ್ಲ. ಆದರೂ ಕೂಡ ಪೋಷಕರು ಸೇರಿಕೊಂಡು ಮದುವೆ‌ ಮಾಡಲು ಎಲ್ಲಾ ಸಿದ್ದತೆ ಮಾಡಿಕೊಂಡಿದ್ದರು.

ಮುಂಜಾನೆಯಿಂದ ಮದುವೆಯ ಕಾರ್ಯಗಳನ್ನು ಮುಗಿಸಿ, ಇನ್ನೇನು ಮಾಂಗಲ್ಯಧಾರಣೆ ಆಗಬೇಕು ಎನ್ನುವ ಸಮಯದಲ್ಲಿ ಮಕ್ಕಳ ರಕ್ಷಣಾ ಘಟಕದ ಅಧಿಕಾರಿಗಳು ಹಾಗೂ ಪೊಲೀಸರು ಎಂಟ್ರಿ ನೀಡಿದ್ದರು. ಈ ವೇಳೆ ಬಾಲಕಿಯ ವಯಸ್ಸು, ವಿವರ, ನೀಡಿದಾಗ ಬಾಲಕಿಗೆ 18 ವರ್ಷ ತುಂಬಲು ಇನ್ನೂ 15 ದಿನಗಳು ಬಾಕಿ ಇದ್ದವು.

ಹೀಗಾಗಿ ಮದುವೆಗೆ ಬ್ರೇಕ್ ಹಾಕಿದ್ದಾರೆ. ಪೋಷಕರ ಮನವೊಲಿಸಿ, ಪೋಷಕರಿಂದ ಮುಚ್ವಳಿಕೆ ಪತ್ರವನ್ನು ಬರಿಸಿಕೊಂಡು ಮದುವೆಯನ್ನು ತಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಜೊತೆಗೆ ಸಮಾಜದ ಮುಖಂಡರು ಕೂಡ ಕುಟುಂಬದ ಮನವೊಲಿಸಿ ಅಧಿಕಾರಿಗಳ ಕಾರ್ಯಕ್ಕೆ ಸಾಥ್ ನೀಡಿದರು.


Spread the love

About Laxminews 24x7

Check Also

ಬೆಳಗಾವಿ: ಶತಮಾನೋತ್ಸವ ಕಾರ್ಯಕ್ರಮ ಸಂಪನ್ನ

Spread the love ಬೆಳಗಾವಿ: ಇಲ್ಲಿನ ಖಾಸಬಾಗದ ಉಪ್ಪಾರ ಗಲ್ಲಿಯಲ್ಲಿ ನಾಲ್ಕು ದಿನ ವೈಭವದಿಂದ ನಡೆದ ಬನಶಂಕರಿ ದೇವಸ್ಥಾನದ ಶತಮಾನೋತ್ಸವ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ